ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಕ್ಷೇಪಾರ್ಹ ಜಾಹಿರಾತು ಕಾಯ್ದೆಯಡಿ 1954, ಕರಡು ತಿದ್ದುಪಡಿಯನ್ನು ಪ್ರಸ್ತಾಪಿಸಿದ್ದು, ಈ ಕ್ರೀಮ್ ಹಚ್ಚಿಕೊಳ್ಳಿ ಒಂದು ವಾರದಲ್ಲಿ ಬೆಳ್ಳಗೆ ಆಗಿಬಿಡ್ತೀರಾ ಎಂದು ಸುಳ್ಳು ಜಾಹೀರಾತು ನೀಡುವ ಕಂಪನಿಗಳಿಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಸೌಂದರ್ಯವರ್ಧಕ ಸಾಧನಗಳ ಜಾಹೀರಾತುಗಳು ಆಕ್ಷೇಪಾರ್ಹವಾಗಿದ್ದಲ್ಲಿ ಅವುಗಳನ್ನು ನೀಡುವ ಕಂಪನಿಯ ಮಾಲೀಕರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಜಾಹೀರಾತುಗಳಿಗಾಗಿ ಜಾಹೀರಾತುದಾರರಿಗೆ 50 ಲಕ್ಷ ರುಪಾಯಿವರೆಗೆ ದಂಡ ವಿಧಿಸಬಹುದು ಎಂದು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದಕ್ಕಾಗಿ, 1954ರ ಔಷಧ ಮತ್ತು ಮಾಂತ್ರಿಕ ಪರಿಹಾರ ಸಾಧನಗಳು ಕಾಯ್ದೆ ಅಡಿಯಲ್ಲಿನ ಆಕ್ಷೇಪಾರ್ಹ ಜಾಹೀರಾತುಗಳ ನಿಯಮಗಳಿಗೆ ತಿದ್ದುಪಡಿ ನಿರ್ಧರಿಸಲಾಗಿದೆ. ಸೌಂದರ್ಯ ವರ್ಧಕ ಸಾಧಕಗಳಿಗಷ್ಟೇ ಅಲ್ಲದೆ, ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಔಷಧಗಳು, ತೊದಲು ಮಾತು ನಿವಾರಿಸುವ ಔಷಧ, ಬಂಜೆತನ ನಿವಾರಣೆ, ಅಕಾಲಿಕ ಮುಪ್ಪು, ಬಾಲ ನೆರೆ ಸಹಿತ ಸುಮಾರು 78 ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು, ಯಾವುದೇ ಕಂಪೆನಿಯು ಇವುಗಳ ನಿವಾರಣೆಯ ಬಗ್ಗೆ ಸುಳ್ಳು ಜಾಹೀರಾತು ನೀಡಿದರೆ ಅವು ಸಹ ಹೊಸ ಕಾನೂನು ವ್ಯಾಪ್ತಿಗೆ ಒಳಪಡಲಿವೆ.
ಸದ್ಯ ಈ ಕಾಯಿದೆಯಡಿ, ಮೊದಲ ಅಪರಾಧಕ್ಕೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಮತ್ತು ನಂತರದ ಅಪರಾಧಕ್ಕೆ ಒಂದು ವರ್ಷ ಅಥವಾ ದಂಡ ಅಥವಾ ಎರಡಕ್ಕೂ ಕಾರಣವಾಗಬಹುದು. ಆದರೆ ಈಗ ತಿದ್ದುಪಡಿಯು ದಂಡವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಮೊದಲ ಅಪರಾಧಕ್ಕಾಗಿ, ಉದ್ದೇಶಿತ ಶಿಕ್ಷೆಯು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರುಪಾಯಿ. ನಂತರದ ಅಪರಾಧಕ್ಕಾಗಿ, ಜೈಲು ಶಿಕ್ಷೆಯನ್ನು ಐದು ವರ್ಷಗಳವರೆಗೆ, ದಂಡವನ್ನು 50 ಲಕ್ಷ ರುಪಾಯಿಗಳವರೆಗೆ ವಿಧಿಸಬಹುದು.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications