2020ರ ಏಪ್ರಿಲ್ ನಿಂದ ನವೆಂಬರ್ ನಲ್ಲಿ ವಿದೇಶಿ ನೇರ ಹೂಡಿಕೆ (ಪುನರ್ ಹೂಡಿಕೆ ಗಳಿಕೆ ಸೇರಿ) 22% ಹೆಚ್ಚಳವಾಗಿ, 58.37 ಬಿಲಿಯನ್ ಯುಎಸ್ ಡಿ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ $ 47.67 ಬಿಲಿಯನ್ ಇತ್ತು ಎಂಬ ಅಂಶವನ್ನು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯದ ದತ್ತಾಂಶದಿಂದ ತಿಳಿದುಬಂದಿದೆ.
"ವಿದೇಶಿ ನೇರ ಹೂಡಿಕೆ (ಎಫ್ ಡಿಐ) ಆರ್ಥಿಕ ಬೆಳವಣಿಗೆಗೆ ಬಹಳ ಮುಖ್ಯ. ಭಾರತದ ಆರ್ಥಿಕ ಅಭಿವೃದ್ಧಿಗೆ ಸಾಲಯೇತರ ಮುಖ್ಯ ಹಣಕಾಸು ಮೂಲ. ಹೂಡಿಕೆ ಸ್ನೇಹಿ ಎಫ್ ಡಿಐ ನೀತಿ ನಿರೂಪಿಸಿರುವ ಸರ್ಕಾರದ ಯಶಸ್ಸು ಇದು. ಈ ಎಲ್ಲದರ ಉದ್ದೇಶ ಏನೆಂದರೆ, ಎಫ್ ಡಿಐ ನಿಯಮಾವಳಿಗಳನ್ನು ಹೂಡಿಕೆಸ್ನೇಹಿ ಮಾಡುವುದು ಮತ್ತು ದೇಶದೊಳಗೆ ಬಂಡವಾಳ ಹರಿದುಬರಲು ಇರುವ ಅಡೆತಡೆ ನಿವಾರಿಸುವುದು. ಈ ನಿಟ್ಟಿನಲ್ಲಿ ಇಟ್ಟ ಹೆಜ್ಜೆಗಳು ಫಲ ನೀಡಿವೆ. ಈ ತನಕ ದೇಶದಲ್ಲಿ ಕಂಡರಿಯದ ಮಟ್ಟಕ್ಕೆ ವಿದೇಶೀ ಬಂಡವಾಳ ಹರಿದು ಬರಲು ಕಾರಣವಾಗಿದೆ," ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಣಕಾಸು ವರ್ಷ 2020- 21ರಲ್ಲಿ (ಏಪ್ರಿಲ್ ನಿಂದ ನವೆಂಬರ್ 2020) $ 43.85 ಬಿಲಿಯನ್ ಬಂದಿದೆ. ಆರ್ಥಿಕ ವರ್ಷದಲ್ಲಿ ಮೊದಲ ಎಂಟು ತಿಂಗಳಲ್ಲಿ ಗರಿಷ್ಠ ಮಟ್ಟದ್ದಾಗಿದೆ. 2019- 20ರ ಮೊದಲ ಎಂಟು ತಿಂಗಳಿನ $ 32.11 ಬಿಲಿಯನ್ ಗೆ ಹೋಲಿಸಿದರೆ 37% ಹೆಚ್ಚಳವಾಗಿದೆ.

"ಎಫ್ ಡಿಐ ನೀತಿ ಸುಧಾರಣೆ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು, ಹೂಡಿಕೆ ವ್ಯವಸ್ಥೆ ಅನುಕೂಲ ಮತ್ತು ಉದ್ಯಮ ಸಲೀಸಾಗಿ ನಡೆಸಲು ವ್ಯವಸ್ಥೆ ಮಾಡಿರುವುದರಿಂದ ದೇಶದಲ್ಲಿ ಎಫ್ ಡಿಐ ಹರಿವು ಹೆಚ್ಚಳವಾಗಿದೆ," ಎಂದು ತಿಳಿಸಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications