For Quick Alerts
ALLOW NOTIFICATIONS  
For Daily Alerts

ಫಿಲಾಟೆಕ್ಸ್ ಇಂಡಿಯಾ 2020ರ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ 61.8 ಕೊಟಿ ರೂಪಾಯಿ ಲಾಭ ಗಳಿಸಿದೆ

|

ಬೆಂಗಳೂರು, ಡಿಸೆಂಬರ್ 24: ಫಿಲಾಟೆಕ್ಸ್ ಇಂಡಿಯಾದ ಲಾಭ 2020ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇಕಡ 205ರಷ್ಟು ಹೆಚ್ಚಳ ಕಂಡಿದೆ. ಭಾರತದಲ್ಲಿ ಪಾಲಿಸ್ಟರ್ ಎಳೆಗಳನ್ನು ಉತ್ಪಾದಿಸುವ ದೇಶದ ಅತಿದೊಡ್ಡ ಕಾರ್ಖಾನೆಗಳಲ್ಲೊಂದಾಗಿರುವ ಫಿಲಾಟೆಕ್ಸ್‍ನ ಹಣಕಾಸು ಸ್ಥಿತಿ ಕಳೆದ ಮೂರು ವರ್ಷಗಳಲ್ಲಿ ಗಣನೀಯ ಸುಧಾರಣೆಯನ್ನು ಕಂಡಿದೆ.

 

ಇದಕ್ಕೆ ಪರಿಮಾಣದ ಪ್ರಗತಿ ಹಾಗೂ ಕಾರ್ಯಾಚರಣೆ ಕ್ಷಮತೆ ಹೆಚ್ಚಳ ಕ್ರಮಗಳು ಮುಖ್ಯ ಕಾರಣ. ಫಿಲಾಟೆಕ್ಸ್ ಇಂಡಿಯಾ 2020ರ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ 61.8 ಕೊಟಿ ರೂಪಾಯಿ ಲಾಭ ಗಳಿಸಿದೆ. 2019ರ ಎರಡನೇ ತ್ರೈಮಾಸಿಕದ ಅವಧಿಯಲ್ಲಿ ಕಂಪನಿ 20.3 ಕೋಟಿ ರೂಪಾಯಿ ಲಾಭ ಗಳಿಸಿದ್ದು, ಶೇಕಡ 205ರಷ್ಟು ಪ್ರಗತಿಯಾದಂತಾಗಿದೆ.

ಭಾರತದ ಪಾಲಿಸ್ಟರ್ ಎಳೆಗಳ ಬೇಡಿಕೆ ನಿಧಾನವಾಗಿ ದೇಶೀಯ ಹಾಗು ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ, ನೈಸರ್ಗಿಕ ನಾರುಗಳಿಗೆ ಹೋಲಿಸಿದರೆ ಕೃತಕ ಎಳೆಗಳ ಬಳಕೆ ವಿಶ್ವಾದ್ಯಂತ ಹೆಚ್ಚಿರುವುದು.

 ಫಿಲಾಟೆಕ್ಸ್ ಇಂಡಿಯಾ 2ನೇ ತ್ರೈಮಾಸಿಕದಲ್ಲಿ ಲಾಭ 205% ಏರಿಕೆ

ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಉಡುಪುಗಳ ಪ್ತಮಾಣದಲ್ಲಿ ಕೃತಕ ಪಾಲಿಸ್ಟರ್ ಎಳೆಯ ಬಳಕೆ ಶೇಕಡ 78ರಷ್ಟಿದೆ. ಇದನ್ನು ಸಿದ್ಧ ಉಡುಪುಗಳು, ಗೃಹ ಜವಳಿ ಮತ್ತು ತಾಂತ್ರಿಕ ಜವಳಿ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಪಾಲಿಸ್ಟರ್ ದಾರಗಳು ಅತ್ಯಧಿಕ ಬಲಶಾಲಿ ಫಿಲಮೆಂಟ್ ಆಗಿದ್ದು, ಯಾವುದೇ ಮರು ಚಲನೆಗಳನ್ನು ಕೂಡಾ ತಡೆದುಕೊಳ್ಳುತ್ತದೆ. ಇದರ ಕುಗ್ಗುವಿಕೆ ಪ್ರತಿರೋಧ, ನೀರಿನ ಪ್ರತಿರೋಧ, ಮಡಚುವಿಕೆ ಪ್ರತಿರೋಧ ಮತ್ತು ಹೈಡ್ರೋಫೋಬಿಕ್ ಲಕ್ಷಣಗಳು ಎಲ್ಲ ಬಗೆಯ ಸಿದ್ಧ ಉಡುಪುಗಳಿಗೆ ಯೋಗ್ಯವನ್ನಾಗಿ ಮಾಡಿವೆ.

"ದೇಶದಲ್ಲಿ ತಲೆದೋರಿರುವ ಈ ಪ್ರಕ್ಷುಬ್ಧ ಪರಿಸ್ಥಿತಿ ಮತ್ತು ಆರ್ಥಿಕ ಹಿಂಜರಿತದ ನಡುವೆಯೂ ಈ ನಿರಂತರ ಏರುಗತಿ ಪ್ರಗತಿಯ ವರದಿಯಿಂದ ನಮಗೆ ಅತೀವ ಸಂತಸವಾಗುತ್ತಿದೆ. ನಾವು ಈ ಸವಾಲುದಾಯಕ ಅವಧಿಯಲ್ಲಿ ಅತ್ಯಧಿಕ ಸಾಮಥ್ರ್ಯದ ಬಳಕೆ ಮತ್ತು ಉತ್ಪಾದನೆಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೇವೆ" ಎಂದು ಫಿಲಾಟೆಕ್ಸ್ ಇಂಡಿಯಾ ಲಿಮಿಟೆಡ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧುಸೂಧನ್ ಭಗಾರಿಯಾ ಹೇಳಿದ್ದಾರೆ.

English summary

Filatex India’s profits during Q2 FY20 has grown by 205%

Filatex India’s profits during Q2 FY20 has grown by 205%. Filatex registered net profit of Rs 61.8 crore in Q2FY20 as compared to Rs 20.3 crore in Q2FY19; a significant growth of 205%.
Story first published: Tuesday, December 24, 2019, 12:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X