ಭಾರತದಲ್ಲಿ ಇರುವ ಆಪಲ್ ನ ಐನೂರು ಎಕ್ಸ್ ಕ್ಲೂಸಿವ್ ಸ್ಟೋರ್ಸ್ ಗಳ ಎರಡು ತಿಂಗಳ ಬಾಡಿಗೆ, ಮಳಿಗೆಯಲ್ಲಿನ ಸಿಬ್ಬಂದಿಯ ಸಂಬಳ ಹಾಗೂ ಸಾಲದ ಮರುಪಾವತಿಗೆ 60 ದಿನಗಳ ಹೆಚ್ಚುವರಿ ಸಮಯವನ್ನು ನೀಡುತ್ತಿದೆ ಆಪಲ್ ಕಂಪೆನಿ. ಕೊರೊನಾದ ಕಾರಣಕ್ಕೆ ಭಾರತದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಆರ್ಥಿಕ ಬಿಕ್ಕಟ್ಟು ಎದುರಾಗಿದೆ.
ಇನ್ನು ಹಿಂದೂಸ್ತಾನ್ ಯುನಿಲಿವರ್, ಐಟಿಸಿ, ಸ್ಯಾಮ್ಸಂಗ್, ಮಾರಿಕೋ ಹಾಗೂ ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ನಿಂದಲೂ ವ್ಯಾಪಾರಿಗಳು ಹಾಗೂ ಚಿಲ್ಲರೆ ಮಾರಾಟಗಾರರಿಗೆ ಹಣ ಮರುಪಾವತಿಗೆ ಅವಧಿ ವಿಸ್ತರಿಸಲಾಗಿದೆ ಮತ್ತು ಇತರ ಬೆಂಬಲವನ್ನು ಘೋಷಣೆ ಮಾಡಲಾಗಿದೆ.
ಎಫ್ ಎಂಸಿಜಿ ವಲಯದಲ್ಲಿ ಹಲವು ರೀಟೇಲರ್ ಗಳಿಗೆ ಮಾರಾಟ ಕಡಿಮೆ ಆಗಿದೆ ಹಾಗೂ ಕೆಲವರಿಗೆ ಮಾರಾಟ ನಿಂತುಹೋಗಿದೆ. ಮೊಬೈಲ್ ಫೋನ್ ಗಳು, ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ಸ್ ಗಳಿಗಂತೂ ಮಾರಾಟ ಸಂಪೂರ್ಣ ನಿಂತುಹೋಗಿದೆ. ಆದರೂ ಸಿಬ್ಬಂದಿಯ ವೇತನ, ಮಳಿಗೆಯ ಬಾಡಿಗೆ ಎಂಬ ಹೊರೆ ವಿಪರೀತವಾಗಿದೆ.

ಆಪಲ್ ಈಗಾಗಲೇ ಇ ಮೇಲೆ ಮಾಡಿದಂತೆ "ಆರ್ಥಿಕ ಬೆಂಬಲವನ್ನು" ವರ್ಗಾವಣೆ ಮಾಡಲಾಗಿದೆ. ಇನ್ನು ಆಪಲ್ ಉತ್ಪನ್ನಗಳನ್ನು ವಿತರಿಸಲು ಆನ್ ಲೈನ್ ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಲು ಇ ಮೆಲ್ ನಲ್ಲಿ ತಿಳಿಸಲಾಗಿದೆ. ಇನ್ನು ರಿಯಾಲ್ ಮಿಯಿಂದ ಹಲವು ರೀಟೇಲರ್ ಗಳಿಗೆ 21 ದಿನಗಳ ಕಾಲ ಹಣ ಪಾವತಿಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಲಾಕ್ ಡೌನ್ ವಿಸ್ತರಣೆಯಾದರೆ ಮತ್ತೊಮ್ಮೆ ಅವಕಾಶ ವಿಸ್ತರಣೆ ಬಗ್ಗೆ ಆಲೋಚಿಸಲಾಗುವುದು ಎನ್ನಲಾಗಿದೆ.
ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್ ನಿಂದ ಈಗಾಗಲ್ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳ ಬಳಿ ಮನವಿ ಮಾಡಿದೆ. ಲಾಕ್ ಡೌನ್ ತೆರವಾದ ನಂತರ ಮೂರು ತಿಂಗಳ ತನಕ 2% ಮಾರ್ಜಿನ್ ಹೆಚ್ಚಿಗೆ ನೀಡಬೇಕು. ಆ ಮೂಲಕ ಬಾಡಿಗೆ, ವೇತನ, ಬಡ್ಡಿ, ಇಎಂಐಗಳು ಹಾಗೂ ಕುಟುಂಬದ ಖರ್ಚುಗಳು ನಿಭಾಯಿಸಲು ನೆರವಾಗುತ್ತದೆ ಎಂದು ಹೇಳಲಾಗಿದೆ.


Click it and Unblock the Notifications