ಇತ್ತೀಚೆಗೆ ಭಾರೀ ನಷ್ಟದಿಂದ ಮುಚ್ಚಲ್ಪಟ್ಟ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ನಾರ್ತ್ ಕರೋಲಿನಾ ಮೂಲದ ಫಸ್ಟ್ ಸಿಟಿಜನ್ಸ್ ಬ್ಯಾಂಕ್ ಖರೀದಿ ಮಾಡಲು ಮುಂದಾಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಎಲ್ಲ ಡೆಪಾಸಿಟ್‌ಗಳನ್ನು ಮತ್ತು ಸಾಲಗಳನ್ನು ಫಸ್ಟ್ ಸಿಟಿಜನ್ ಬ್ಯಾಂಕ್ ಆಂಡ್ ಟ್ರಸ್ಟ್ ಕೋಗೆ ಮಾರಾಟ ಮಾಡುವುದು ಈ ಡೀಲ್ ಆಗಿದೆ ಎಂದು ಭಾನುವಾರ ಎಫ್‌ಡಿಐಸಿ ಹೇಳಿಕೆ ಮೂಲಕ ಮಾಹಿತಿ ನೀಡಿದೆ. ಇನ್ನು ಈ ಪ್ರಕ್ರಿಯೆ ಮುಗಿದ ಬಳಿಕ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಗ್ರಾಹಕರು ಫಸ್ಟ್ ಸಿಟಿಜನ್ ಬ್ಯಾಂಕ್‌ನ ಗ್ರಾಹಕರಾಗಲಿದ್ದಾರೆ.
ಫಸ್ಟ್ ಸಿಟಿಜನ್ ಬ್ಯಾಂಕ್‌ನ ರಾಲೇಗ್‌ನಲ್ಲಿನ ಪ್ರಧಾನ ಕಛೇರಿಯಲ್ಲಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಎಲ್ಲ ಗ್ರಾಹಕರ ಖಾತೆಯು ಸ್ವಯಂಚಾಲಿತವಾಗಿ ವರ್ಗಾವಣೆಯಾಗಲಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ 17 ಬ್ರಾಂಚ್‌ಗಳು ಫಸ್ಟ್ ಸಿಟಿಜನ್ ಆಗಿ ಬದಲಾಗಲಿದೆ. ಮಾರ್ಚ್ 10ರಂದು ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಲಾಗಿದೆ. ನಷ್ಟದಲ್ಲಿದ್ದ ಈ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ವಶಕ್ಕೆ ಪಡೆದುಕೊಂಡಿದೆ.

ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಏನಾಗಿದೆ?
ಕ್ಯಾಲಿಫೋರ್ನಿಯಾ ಸಂತ ಕ್ಲಾರಾ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಿಕ್ಕಟ್ಟಿನಲ್ಲಿ ಇರುವ ವಿಚಾರ ಹೊರಬರುತ್ತಿದ್ದಂತೆ ಗ್ರಾಹಕರು ಬ್ಯಾಂಕ್‌ನಲ್ಲಿರುವ ತಮ್ಮ ಹಣವನ್ನು ಜಮೆ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಭಾರೀ ನಷ್ಟ ಉಂಟಾಗಿದೆ. ಭಾರೀ ನಷ್ಟದಲ್ಲಿದ್ದ ಈ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ವಶಕ್ಕೆ ಪಡೆದು ಮುಚ್ಚಿದೆ.
ಇದು ಯುಎಸ್‌ನ ಇತಿಹಾಸದಲ್ಲೇ ಅತೀ ಎರಡನೇ ಬ್ಯಾಂಕ್ ವೈಫಲ್ಯವಾಗಿದೆ. ಈ ಹಿಂದೆ 2008ರಲ್ಲಿ ವಾಷಿಂಗ್ಟನ್ ಮ್ಯೂಚುವಲ್ ಬ್ಯಾಂಕ್ ನಷ್ಟ ಯುಎಸ್‌ನ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯವಾಗಿದೆ. ಮಾರ್ಚ್ 12ರಂದು ನ್ಯೂಯಾರ್ಕ್ ಮೂಲದ ಸಿಗ್ನೇಚರ್ ಬ್ಯಾಂಕ್ ಕೂಡಾ ನಷ್ಟದೊಂದಿಗೆ ಮುಚ್ಚಲ್ಪಟ್ಟಿದೆ. ಇದು ಯುಎಸ್‌ನ ಮೂರನೇ ಅತೀ ದೊಡ್ಡ ಬ್ಯಾಂಕ್ ವೈಫಲ್ಯವಾಗಿದೆ.
ಎರಡು ಪ್ರಕರಣದಲ್ಲಿ ಸರ್ಕಾರವು 250,000 ಬಿಲಿಯನ್ ಡಾಲರ್ ಫೆಡರಲ್ ವಿಮಾ ಮಿತಿಯನ್ನು ಮೀರಿದ ಠೇವಣಿಗಳನ್ನು ಕವರ್ ಮಾಡಲು ಒಪ್ಪಿಕೊಂಡಿದೆ. ಆದ್ದರಿಂದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್‌ನಲ್ಲಿ ಠೇವಣಿದಾರರು ತಮ್ಮ ಹಣವನ್ನು ಪಡೆಯಲು ಸಾಧ್ಯವಾಗಿದೆ.
ಮಧ್ಯಮ ಗಾತ್ರದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಫಸ್ಟ್ ರಿಪಬ್ಲಿಕ್ ಬ್ಯಾಂಕ್, ಸಿಲಿಕಾನ್ ವ್ಯಾಲಿ ಬ್ಯಾಂಕ್‌ನನಂತೆಯೇ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕೂಡಾ ಇದೇ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಹೂಡಿಕೆದಾರರಿಗೆ ಆತಂಕ ಉಂಟು ಮಾಡಿದೆ. ಈ ಬ್ಯಾಂಕ್ ಕೂಡಾ ಕುಸಿತವಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಇದೆ. ಇದರಿಂದಾಗಿ ದೇಶದ 11 ದೊಡ್ಡ ಬ್ಯಾಂಕ್‌ಗಳು 30 ಬಿಲಿಯನ್ ಡಾಲರ್ ರೆಸ್ಕ್ಯೂ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ.
ಇನ್ನು ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ವಶಕ್ಕೆ ಪಡೆದ ಫಸ್ಟ್ ಸಿಟಿಜನ್ ಬ್ಯಾಂಕ್ 1898ರಲ್ಲಿ ಆರಂಭವಾಗಿದೆ. ಒಟ್ಟಾಗಿ 100 ಬಿಲಿಯನ್ ಡಾಲರ್ ಆಸ್ತಿಯನ್ನು ಬ್ಯಾಂಕ್ ಹೊಂದಿದೆ. ಹಾಗೆಯೇ 500ಕ್ಕಿಂತ ಅಧಿಕ ಬ್ರಾಂಚ್‌ಗಳನ್ನು ಹೊಂದಿದೆ. ಯುಎಸ್‌ನ 21 ಸ್ಟೇಟ್‌ಗಳಲ್ಲಿ ಈ ಬ್ಯಾಂಕ್‌ಗಳು ಇದೆ. ಇದರ ಕಳೆದ ತ್ರೈಮಾಸಿಕದಲ್ಲಿ ಫಸ್ಟ್ ಸಿಟಿಜನ್ ಬ್ಯಾಂಕ್‌ನ ನಿವ್ವಳ ಲಾಭವು 243 ಮಿಲಿಯನ್ ಡಾಲರ್ ಆಗಿದೆ.


Click it and Unblock the Notifications