ಕರ್ನಾಟಕದಲ್ಲಿ ಒಂದೇ ದಿನದಲ್ಲಿ 45 ಕೋಟಿ ರುಪಾಯಿ ಲಿಕ್ಕರ್ ಸೇಲ್

ಲಾಕ್‌ಡೌನ್‌ನಿಂದಾಗಿ ಮದ್ಯಪ್ರಿಯರು ಯಾವಾಗ ಮದ್ಯದ ಅಂಗಡಿಗಳು ತೆರಯುತ್ತವೋ ಎಂದು ಎದುರು ನೋಡ್ತಿದ್ದರು. ಅಂತೆಯೇ ಮಳಿಗೆಗಳು ಓಪನ್ ಆಗಿದ್ದೇ ತಡ ಮೈಲುಗಟ್ಟಲೇ ಕ್ಯೂ ನಿಂತು ಮದ್ಯ ಖರೀದಿಸಿದ್ದಾರೆ. ಪರಿಣಾಮ ಸೋಮವಾರ(ಮೇ 04) ಒಂದೇ ದಿನ ಕರ್ನಾಟಕದಲ್ಲಿ 45 ಕೋಟಿ ರುಪಾಯಿ ಲಿಕ್ಕರ್ ಸೇಲ್ ಆಗಿದೆ.

ಹೊಸ ವರ್ಷಕ್ಕಿಂತ ಭರ್ಜರಿ ಮಾರಾಟ

ಹೊಸ ವರ್ಷಕ್ಕಿಂತ ಭರ್ಜರಿ ಮಾರಾಟ

ಹೊಸ ವರ್ಷ ಅಂದಾಕ್ಷಣ ಪಾರ್ಟಿ, ಮೋಜು ಮಸ್ತಿ ಸಾಮಾನ್ಯ. ಈ ವೇಳೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ಭರ್ಜರಿ ಆದಾಯವೂ ಬರುತ್ತೆ. ಇದಕ್ಕೆ ಕಾರಣ ಹೊಸ ವರ್ಷದ ಆರಂಭದಲ್ಲಿ ಮದ್ಯ ಮಾರಾಟವು ಭಾರೀ ಜೋರಾಗಿಯೇ ಇರುತ್ತದೆ. ಆದರೆ ಕೊರೊನಾವೈರಸ್ ಮದ್ಯಪ್ರಿಯರನ್ನು ಎಷ್ಟರ ಮಟ್ಟಿಗೆ ಕಟ್ಟಿಹಾಕಿತ್ತು ಎಂಬುದಕ್ಕೆ ಸೋಮವಾರ ಮದ್ಯ ಮಾರಾಟವೇ ಸಾಕ್ಷಿ. ಹೊಸ ವರ್ಷದ ಆರಂಭದಲ್ಲಿ ಮದ್ಯ ಮಾರಾಟವಾಗುವಂತೆ ಭರ್ಜರಿಯಾಗಿ ವಹಿವಾಟು ನಡೆದಿದೆ.

3.9 ಲಕ್ಷ ಲೀಟರ್ ಬಿಯರ್ ಹೀರಿದ ಜನರು

3.9 ಲಕ್ಷ ಲೀಟರ್ ಬಿಯರ್ ಹೀರಿದ ಜನರು

ರಾಜ್ಯದ ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಸೋಮವಾರ ಒಂದೇ ದಿನದಲ್ಲಿ 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ಭಾರತದಲ್ಲಿ ತಯಾರಾದ ವಿದೇಶಿ ಲಿಕ್ಕರ್ ಮಾರಾಟವಾಗಿದೆ. ಜನರು ಗಂಟೆಗಟ್ಟಲೆ ಕ್ಯೂ ನಿಂತು ರಾಜ್ಯದೆಲ್ಲೆಡೆ ಮದ್ಯವನ್ನು ಖರೀದಿಸಿದ್ದಾರೆ.

ತಲೆ ಮೇಲೆ ಕೈ ಹೊತ್ತಿ ಕೂತಿರುವ ಪಬ್, ರೆಸ್ಟೋರೆಂಟ್ ಮಾಲೀಕರು

ತಲೆ ಮೇಲೆ ಕೈ ಹೊತ್ತಿ ಕೂತಿರುವ ಪಬ್, ರೆಸ್ಟೋರೆಂಟ್ ಮಾಲೀಕರು

ಮದ್ಯ ಮಾರಾಟವೇನು ಶುರುವಾಗಿದೆ. ಎಂಎಸ್ಐಎಲ್, ವೈನ್ ಶಾಪ್‌ಗಳು ಭರ್ಜರಿ ವ್ಯಾಪಾರವನ್ನು ಆರಂಭಿಸಿವೆ. ಆದರೆ ಪಬ್ ಹಾಗೂ ರೆಸ್ಟೋರೆಂಟ್ ಕಂ ಬಾರ್‌ಗಳಿಗೆ ಇನ್ನೂ ನಿರ್ಬಂಧ ತೆರವಾಗಿಲ್ಲ. ಮೇ 17ರ ಲಾಕ್‌ಡೌನ್ ಮುಗಿಯುವವರೆಗೂ ಕಾಯುವ ಪರಿಸ್ಥಿತಿಯೇ ಎದುರಿಗಿದೆ. ಹೀಗಾಗಿ ಪಬ್, ರೆಸ್ಟೋರೆಂಟ್ ಮಾಲೀಕರು ವೈನ್ ಶಾಪ್‌ಗಳ ಬಿಜಿನೆಸ್ ನೋಡಿ ಚಿಂತೆಗೀಡಾಗಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+