ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಾನ್ ಕಾಲೇಬಲ್ ಟರ್ಮ್ ಡೆಪಾಸಿಟ್‌ಗಳ ಕನಿಷ್ಠ ಮೊತ್ತವನ್ನು 15 ಲಕ್ಷದಿಂದ 1 ಕೋಟಿ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿದೆ. ಅಂದರೆ ಒಂದು ಕೋಟಿ ರೂಪಾಯಿವರೆಗಿನ ಎಲ್ಲ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಅಕಾಲಿಕವಾಗಿ ಹಿಂಪಡೆಯುವ ಸೌಲಭ್ಯ ನಿಮಗೆ ಇದೆ.
ಬ್ಯಾಂಕುಗಳು ಎರಡು ರೀತಿಯ ಟರ್ಮ್ ಅಥವಾ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಹೊಂದಿರುತ್ತದೆ. ಅದರಲ್ಲಿ ಒಂದು ಕಾಲೇಬಲ್ ಆದರೆ, ಇನ್ನೊಂದು ನಾನ್ ಕಾಲೇಬಲ್ ಆಗಿದೆ. ಕಾಲೇಬಲ್ ಡೆಪಾಸಿಟ್‌ಗಳಲ್ಲಿ ಅಕಾಲಿಕವಾಗಿ ನೀವು ಎಫ್‌ಡಿ ವಿತ್‌ಡ್ರಾ ಮಾಡಬಹುದು. ಆದರೆ ನಾನ್ ಕಾಲೇಬಲ್ ಡೆಪಾಸಿಟ್‌ಗಳಲ್ಲಿ ವಿತ್‌ಡ್ರಾ ಮಾಡಲು ಅವಕಾಶವಿಲ್ಲ.

ಆರ್‌ಬಿಐ ಈ ಹಿಂದೆ ಬ್ಯಾಂಕುಗಳಿಗೆ ಅಕಾಲಿಕ ವಿತ್‌ಡ್ರಾ ಆಯ್ಕೆಯಿಲ್ಲದೆ ದೇಶೀಯ ಟರ್ಮ್ ಡೆಪಾಸಿಟ್‌ಗಳನ್ನು (ಟಿಡಿ) ನೀಡಲು ಅನುಮತಿ ನೀಡಿತ್ತು. 15 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಟರ್ಮ್ ಡೆಪಾಸಿಟ್‌ಗಳಿಗೆ ಅಕಾಲಿಕ ವಿತ್‌ಡ್ರಾ ಅವಕಾಶ ಇರುವುದಿಲ್ಲ.
ಏನು ಬದಲಾವಣೆಯಾಗಿದೆ?
ನಾನ್ ಕಾಲೇಬಲ್ ಫಿಕ್ಸಿಡ್ ಡೆಪಾಸಿಟ್‌ಗಳನ್ನು ನೀಡುವ ಕನಿಷ್ಠ ಮೊತ್ತವನ್ನು ಒಂದು ಕೋಟಿ ರೂಪಾಯಿಗೆ ಹೆಚ್ಚಿಸಲು ಆರ್‌ಬಿಐ ನಿರ್ಧರಿಸಿದೆ. "ನಾನ್ ಕಾಲೇಬಲ್ ಟಿಡಿಗಳನ್ನು ನೀಡುವ ಕನಿಷ್ಠ ಮೊತ್ತವನ್ನು ಹದಿನೈದು ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳಿಗೆ ಹೆಚ್ಚಿಸಬಹುದು. ಅಂದರೆ, ಒಂದು ಕೋಟಿ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗಳು ಅಕಾಲಿಕ ವಿತ್‌ಡ್ರಾ ಸೌಲಭ್ಯವನ್ನು ಹೊಂದಿರುತ್ತದೆ," ಎಂದು ಅಕ್ಟೋಬರ್ 26, 2023 ರ ಅಧಿಸೂಚನೆಯಲ್ಲಿ ಆರ್‌ಬಿಐ ಹೇಳಿದೆ.
ಈ ಹಿಂದಿನ ನಿಯಮ ಏನು ಹೇಳುತ್ತದೆ?
"ಅಕಾಲಿಕ ವಾಪಸಾತಿ ಆಯ್ಕೆಯಿಲ್ಲದೆ ಟರ್ಮ್ ಡೆಪಾಸಿಟ್‌ಗಳನ್ನು ನೀಡುವ ಸ್ವಾತಂತ್ರ್ಯವನ್ನು ಬ್ಯಾಂಕ್‌ಗಳು ಹೊಂದಿರಬೇಕು. ಹದಿನೈದು ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗಳಿಂದ ಎಲ್ಲಾ ಅವಧಿಯ ಡೆಪಾಸಿಟ್‌ಗಳನ್ನು ಅಕಾಲಿಕವಾಗಿ ವಿತ್‌ಡ್ರಾ ಸೌಲಭ್ಯವನ್ನು ಹೊಂದಿರಬೇಕು.
More From GoodReturns

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications