ಹಬ್ಬದ ಸೀಸನ್ ನಲ್ಲಿ ಫ್ಲಿಪ್ ಕಾರ್ಟ್- ಅಮೆಜಾನ್ ನಿಂದ 31,000 ಕೋಟಿ ಬಿಜಿನೆಸ್

ಬೆಂಗಳೂರು, ನವೆಂಬರ್ 18: ಭಾರತದ ಎರಡು ಅತಿ ದೊಡ್ಡ ವೆಬ್ ರೀಟೇಲರ್ ಗಳಾದ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಎರಡೂ ಸೇರಿ ಅಕ್ಟೋಬರ್ ತಿಂಗಳ ಹದಿನೈದು ದಿನಗಳ ಹಬ್ಬದ ಅವಧಿಯಲ್ಲಿ 31,000 ಕೋಟಿ ರುಪಾಯಿ ($ 4.3 ಬಿಲಿಯನ್) ವ್ಯವಹಾರ ಮಾಡಿವೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ತಜ್ಞರ ಪ್ರಕಾರ $ 5 ಬಿಲಿಯನ್ ವ್ಯವಹಾರ ಆಗಬಹುದು ಎಂಬ ಅಂದಾಜು ಮಾಡಲಾಗಿತ್ತು. ಆದರೆ ಆ ಸಂಖ್ಯೆಯನ್ನು ತಲುಪಿಲ್ಲ.

ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಮಾಡಲಾದ ಸರಾಸರಿ ಮೊತ್ತ 1,976 ರುಪಾಯಿಯಾದರೆ, ಅಮೆಜಾನ್ ನ ಆರ್ಡರ್ ಸರಾಸರಿ ಮೊತ್ತ 1,461 ರುಪಾಯಿ. ಎರಡೂ ವೆಬ್ ರೀಟೇಲರ್ ನ ಒಟ್ಟು ಮಾರಾಟದಲ್ಲಿ ಫ್ಲಿಪ್ ಕಾರ್ಟ್ ನ ಮಾರಾಟ ಪ್ರಮಾಣ 64% ಆಗಿದ್ದರೆ, ನೆಟ್ ಪ್ರಮೋಟರ್ ಸ್ಕೋರ್ (NPS) ಅಮೆಜಾನ್ ಸ್ವಲ್ಪ ಮುಂದಿದೆ. ಗ್ರಾಹಕರು ಕಂಪೆನಿಗೆ ಎಷ್ಟು ನಿಷ್ಠರಾಗಿದ್ದಾರೆ ಎಂಬುದನ್ನು ಎನ್ ಪಿಎಸ್ ಮೂಲಕ ಅಳೆಯಲಾಗುತ್ತದೆ.

ತಜ್ಞರು ಅಂದಾಜು ಮಾಡಿದ್ದ ಸಗಟು ಮಾರಾಟಕ್ಕಿಂತ 14% ಕಡಿಮೆ ವ್ಯವಹಾರ ಆಗಿದೆ ಎನ್ನಲಾಗಿದೆ. ಎರಡೂ ಇ ಕಾಮರ್ಸ್ ಮಾರ್ಕೆಟ್ ಪ್ಲೇಸ್ ಗಳು ಹಬ್ಬದ ಅವಧಿಯಲ್ಲಿ $ 5 ಬಿಲಿಯನ್ ಮಾರಾಟದ ಗುರಿ ಇರಿಸಿಕೊಂಡಿದ್ದವು. ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ನಿಂದ ಹೊರಗೆ ಹೋದ ಯುನಿಟ್ ಗಳ ಪ್ರಮಾಣ ಬಹಳ ಹತ್ತಿರದಲ್ಲೇ ಇದೆ.

ಫ್ಲಿಪ್ ಕಾರ್ಟ್- ಅಮೆಜಾನ್ ನಿಂದ 31,000 ಕೋಟಿ ಬಿಜಿನೆಸ್

ಯುನಿಟ್ ಗಳ ಮಾರಾಟದ ಲೆಕ್ಕ ಹೇಳುವುದಾದರೆ ಫ್ಲಿಪ್ ಕಾರ್ಟ್ ನ ಪ್ರಮಾಣ 56% ಹಾಗೂ ಅಮೆಜಾನ್ ಪ್ರಮಾಣ 44% ಎಂದು ವರದಿಯಲ್ಲಿ ತಿಳಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+