ಬೆಂಗಳೂರು, ಜನವರಿ 28: ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್ಸ್ ಪ್ಲಾಟ್‍ಫಾರ್ಮ್ ಫೋನ್‍ಪೇ ಮತ್ತು ಭಾರತ ಮೂಲದ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಫ್ಲಿಪ್‍ಕಾರ್ಟ್ ಸಹಯೋಗದಲ್ಲಿ ಫೋನ್‍ಪೇ ಪ್ಲಾಟ್‍ಫಾರ್ಮ್‍ನಲ್ಲಿ ಫ್ಲಿಪ್‍ಕಾರ್ಟ್‍ನ ಪೇ ಲೇಟರ್ ಸೌಲಭ್ಯವನ್ನು ಆರಂಭಿಸಿವೆ. ಮಿಂತ್ರಾ ಮತ್ತು ಫೋನ್‍ಪೇನಲ್ಲಿ ಫ್ಲಿಪ್‍ಕಾರ್ಟ್ ಪೇ ಲೇಟರ್ ಇದೀಗ ಲಭ್ಯವಿದೆ.
ಈ ಫ್ಲಿಪ್‍ಕಾರ್ಟ್ ಪೇ ಲೇಟರ್ ಬಳಸಿ ಒಂದೇ ಒಂದು ಕ್ಲಿಕ್‍ನಲ್ಲಿ, ಫೋನ್‍ಪೇ ಬಳಕೆದಾರರು ಅತ್ಯಂತ ವೇಗವಾಗಿ ಮತ್ತು ಅನುಕೂಲಕರವಾದ ರೀತಿಯಲ್ಲಿ ಪೇಮೆಂಟ್ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ. ಇದನ್ನು ಬಳಕೆ ಮಾಡಿ ಈ ತಿಂಗಳು ಖರೀದಿಸಿದ ಉತ್ಪನ್ನದ ಹಣವನ್ನು ಫೋನ್‍ಪೇ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಆ್ಯಪ್ ಮೂಲಕ ಮುಂದಿನ ತಿಂಗಳ 10 ನೇ ತಾರೀಖಿನೊಳಗೆ ಒಂದು ಬಾರಿ ಪಾವತಿ ಮಾಡಬಹುದಾಗಿದೆ.
2017 ರಲ್ಲಿ ಫ್ಲಿಪ್‍ಕಾರ್ಟ್ ಪೇ ಲೇಟರ್ ಆರಂಭಿಸಲಾಗಿದ್ದು, ಗ್ರಾಹಕರಿಗೆ ಸಾಲದ ಸೌಲಭ್ಯವನ್ನು ನೀಡುವ ಮೂಲಕ ಅವರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಗ್ರಾಹಕರು 5,000 ರೂಪಾಯಿವರೆಗಿನ ಮೌಲ್ಯದ ಉತ್ಪನ್ನಗಳನ್ನು ಈ ಪ್ಲಾಟ್‍ಫಾರ್ಮ್ ಮೂಲಕ ಸಿಂಗಲ್ ಕ್ಲಿಕ್‍ನಲ್ಲಿ ಯಾವುದೇ ಒಟಿಪಿ ನೆರವಿಲ್ಲದೇ ಖರೀದಿಸಬಹುದಾಗಿದೆ.

ಪ್ರೀ-ಅಪ್ರೂವ್ಡ್ ಫ್ಲಿಪ್‍ಕಾರ್ಟ್ ಬಳಕೆದಾರರು ಫ್ಲಿಪ್‍ಕಾರ್ಟ್ ಆ್ಯಪ್/ಸೈಟ್ ಮೂಲಕ ನೋಂದಾಯಿಸಿಕೊಳ್ಳಬೇಕು. ಈ ಮೂಲಕ ಫ್ಲಿಪ್‍ಕಾರ್ಟ್ ಪೇ ಲೇಟರ್ ಅನ್ನು ಫೋನ್‍ಪೇನಲ್ಲಿ ಮೈ ಮನಿ ಸೆಕ್ಷನ್‍ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು.
ಫೋನ್‍ಪೇ ಪೇಮೆಂಟ್ಸ್ ನ ಮುಖ್ಯಸ್ಥ ದೀಪ್ ಅಗರ್‍ವಾಲ್ ಅವರು ಮಾತನಾಡಿ, ಅವರು, "ಈ ಸೇವೆಯನ್ನು ಆರಂಭಿಸಲು ನಮಗೆ ಸಂತಸವಾಗುತ್ತಿದೆ. ಫೋನ್‍ಪೇ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡಲು ಸದಾ ಬದ್ಧವಾಗಿರುತ್ತದೆ. ಫ್ಲಿಪ್‍ಕಾರ್ಟ್ ಪೇ ಲೇಟರ್ ಅರ್ಹ ಬಳಕೆದಾರರಿಗೆ ಸೂಕ್ತವಾದ ಮತ್ತು ಅನುಕೂಲಕರವಾದ ಸೇವೆಯನ್ನು ಒದಗಿಸುತ್ತದೆ. ದೇಶದಲ್ಲಿ ಫೋನ್‍ಪೇ ಅತಿದೊಡ್ಡ ಪೇಮೆಂಟ್ಸ್ ಪ್ಲಾಟ್‍ಫಾರ್ಮ್ ಆಗಿದ್ದು, ವಿಸ್ತಾರವಾದ ಪೇಮೆಂಟ್ ಆಯ್ಕೆಗಳನ್ನು ನೀಡುವ ಪ್ಲಾಟ್‍ಫಾರ್ಮ್ ಆಗಿದೆ" ಎಂದರು.
ಫ್ಲಿಪ್‍ಕಾರ್ಟ್‍ನ ಫ್ಲಿಪ್‍ಕಾರ್ಟ್ ಪೇಮೆಂಟ್ಸ್ ಗ್ರೂಪ್‍ನ ಮುಖ್ಯಸ್ಥರಾದ ಸ್ಮೃತಿ ರವಿಚಂದ್ರನ್ ಅವರು ಮಾತನಾಡಿ, "ಭಾರತೀಯ ಗ್ರಾಹಕರ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಪೂರೈಸುವುದಕ್ಕೆ ತನ್ನ ವಿವಿಧ ಉಪಕ್ರಮಗಳ ಮೂಲಕ ಫ್ಲಿಪ್‍ಕಾರ್ಟ್ ಹೆಸರುವಾಸಿಯಾಗಿದೆ. ಫ್ಲಿಪ್‍ಕಾರ್ಟ್ ಪೇ ಲೇಟರ್‍ನಂತಹ ಆಯ್ಕೆಗಳನ್ನು ನಮ್ಮ ಗ್ರಾಹಕರಿಗೆ ನೀಡುತ್ತಿದ್ದೇವೆ. ನಮ್ಮ ವೆಬ್‍ಸೈಟ್/ಆ್ಯಪ್ ಮೂಲಕ ಈ ಪೇಮೆಂಟ್ ಪರಿಹಾರವನ್ನು ಅಳವಡಿಸಿದ ನಂತರ ಗ್ರಾಹಕರಿಗೆ ಇನ್ನೂ ಹೆಚ್ಚಿನ ಅನುಕೂಲಗಳಾಗುತ್ತದೆ ಎಂಬ ವಿಶ್ವಾಸ ನಮಗೆ ಇದೆ" ಎಂದು ತಿಳಿಸಿದರು.


Click it and Unblock the Notifications