2020ನೇ ಸಾಲಿನ ಫೋರ್ಬ್ಸ್ ಭಾರತೀಯ ಸಿರಿವಂತರ ಪಟ್ಟಿ ಪ್ರಕಟವಾಗಿದ್ದು, ಮತ್ತೊಮ್ಮೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಇದ್ದಾರೆ.
ಕೊರೊನಾವೈರಸ್‌ದಿಂದಾಗಿ ಜಾಗತಿಕವಾಗಿ ಆರ್ಥಿಕ ಹೊಡೆದದ ಜೊತೆಗೆ ಭಾರತದ ಬಿಲಿಯನೇರ್‌ಗಳ ಸಂಖ್ಯೆಯನ್ನು ತಗ್ಗಿಸಿದೆ. 2019ರಲ್ಲಿ 106 ಬಿಲಿಯನೇರ್‌ಗಳು ಭಾರತದಲ್ಲಿದ್ದರೂ, ಆದರೆ ಈ ಸಂಖ್ಯೆಯು 102ಕ್ಕೆ ಇಳಿಕೆಯಾಗಿದೆ.
ಮೊದಲ ಸ್ಥಾನದಲ್ಲಿರುವ ಅಂಬಾನಿಯ ಆಸ್ತಿ ಎಷ್ಟು?
ಭಾರತದ ನಂಬರ್ 1 ಶ್ರೀಮಂತ ಮುಕೇಶ್ ಅಂಬಾನಿ ಭಾರತದ ಟಾಪ್ ಕುಬೇರರಾಗಿಯೇ ಮುಂದುವರಿದಿದ್ದಾರೆ. ಫೋರ್ಬ್ಸ್ 2020ರ ಪಟ್ಟಿ ಪ್ರಕಾರ ಮುಕೇಶ್ ಅಂಬಾನಿ ನಿವ್ವಳ ಆಸ್ತಿ ಮೌಲ್ಯ 53.2 ಬಿಲಿಯನ್ ಡಾಲರ್‌ಗಳಷ್ಟಿದೆ. ಅಂದರೆ ಭಾರತದ ರುಪಾಯಿಗಳಲ್ಲಿ ಸುಮಾರು 4.04 ಲಕ್ಷ ಕೋಟಿ.
ಕಳೆದ ಒಂದು ವರ್ಷದಲ್ಲಿ ಅಂಬಾನಿಯ ಆಸ್ತಿ ಮೌಲ್ಯ 910 ಮಿಲಿಯನ್ ಡಾಲರ್ ಹೆಚ್ಚಾಗಿದೆ. ಈ ಮೂಲಕ ವಿಶ್ವದ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 16ನೇ ಸ್ಥಾನ ಪಡೆದಿದ್ದಾರೆ.
ಡಿ ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿಗೆ 2ನೇ ಸ್ಥಾನ
ರಿಟೇಲ್ ಮಾರುಕಟ್ಟೆಯ ದಿಗ್ಗಜ ಡಿ ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ಭಾರತದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಇವರ ಒಟ್ಟು ಆಸ್ತಿ ನಿವ್ವಳ ಮೌಲ್ಯವು 15 ಬಿಲಿಯನ್ ಡಾಲರ್‌ನಷ್ಟಿದೆ. ಅಂದರೆ ಭಾರತದ ರುಪಾಯಿಗಳಲ್ಲಿ 1.13 ಲಕ್ಷ ಕೋಟಿ. ಕಳೆದ ಒಂದು ವರ್ಷದಲ್ಲಿ ಇವರ ಒಟ್ಟು ನಿವ್ವಳ ಸಂಪತ್ತು 744 ಮಿಲಿಯನ್ ಡಾಲರ್‌ನಷ್ಟು ಇಳಿಕೆಯಾಗಿದೆ.
ಶಿವ್ ನಾಡರ್, ಸುನಿಲ್ ಮಿತ್ತಲ್ ಆಸ್ತಿ ಎಷ್ಟು?
ಎಚ್‌ಸಿಎಲ್‌ನ ಸ್ಥಾಪಕ, ಅಧ್ಯಕ್ಷ ಶಿವ ನಾಡರ್ ಮೂರನೇ ಶ್ರೀಮಂತ ಭಾರತೀಯರಾಗಿದ್ದು, ಅವರ ನಿವ್ವಳ ಆಸ್ತಿ ಮೌಲ್ಯ 13.5 ಬಿಲಿಯನ್ ಡಾಲರ್ (1.02 ಲಕ್ಷ ಕೋಟಿ ರುಪಾಯಿ). ಇವರ ಆಸ್ತಿ ಮೌಲ್ಯವು 111 ಮಿಲಿಯನ್ ಡಾಲರ್‌ನಷ್ಟು ಹೆಚ್ಚಳವಾಗಿದೆ. ಟೆಲಿಕಾಂ ವಲಯದ ಉದ್ಯಮಿ ಸುನಿಲ್ ಮಿತ್ತಲ್ ಮತ್ತು ಕುಟುಂಬವು 10.8 ಬಿಲಿಯನ್ (82,021 ಕೋಟಿ ರು.) ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ, ಇವರ ಸಂಪತ್ತು256 ಮಿಲಿಯನ್ ಡಾಲರ್ ಏರಿಕೆಯಾಗಿದೆ.
ಫೋರ್ಬ್ಸ್ ಪಟ್ಟಿಗೆ ಕಾಲಿಟ್ಟ ಬೈಜು ರವೀಂದ್ರನ್
ಆನ್‌ಲೈನ್ ಮೂಲಕ ಎಜುಕೇಷನ್ ನೀಡುವ ಟೆಕ್ ಕಂಪನಿ ಬೈಜು ಸಂಸ್ಥಾಪಕ ಬೈಜು ರವೀಂದ್ರನ್ ಅವರ ಹೆಸರು, ಜಾಗತಿಕ ಶ್ರೀಮಂತರ ಪಟ್ಟಿಗೆ ಇದೇ ಮೊದಲ ಬಾರಿ ಸೇರ್ಪಡೆಯಾಗಿದೆ. ಅವರು ದೇಶದ ಯುವ ಬಿಲಿಯನೇರ್ ಆಗಿ ರೂಪುಗೊಂಡಿದ್ದಾರೆ. ಸಂಪತ್ತಿನ ಮೌಲ್ಯ 1.8 ಶತಕೋಟಿ ಡಾಲರ್ (ಸುಮಾರು 13 ಸಾವಿರ ಕೋಟಿ ರು.). ಬೈಜು ಮೌಲ್ಯ 60,800 ಕೋಟಿ ರುಪಾಯಿನಷ್ಟಿದೆ.
ವಿಶ್ವದಲ್ಲಿ ಟಾಪ್ ಕುಬೇರನಾಗಿ ಮುಂದುವರಿದ ಜೆಫ್ ಬೇಜೋಸ್
ಜಾಗತಿಕವಾಗಿ, ಅಮೆಜಾನ್ ಸಿಇಓ ಜೆಫ್ ಬೆಜೋಸ್ 139.9 ಬಿಲಿಯನ್ ಡಾಲರ್ (10.62 ಲಕ್ಷ ಕೋಟಿ ರು.) ಗಳಿಕೆಯೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದು, 105 ಬಿಲಿಯನ್ ಡಾಲರ್ (7.97 ಲಕ್ಷ ಕೋಟಿ ರು.) ಗಳಿಸಿದ್ದಾರೆ.


Click it and Unblock the Notifications