ಕಳೆದ ವಾರ ಟಾಪ್ 10 ಕಂಪನಿಗಳ ಪೈಕಿ ರಿಲಯನ್ಸ್ ಸಂಸ್ಥೆಗೆ ಹೆಚ್ಚಿನ ಲಾಭ

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ನಾಲ್ಕು ಕಂಪನಿಗಳು ಹೆಚ್ಚಿನ ಏರಿಕೆ ಕಂಡಿವೆ. ಒಟ್ಟಾರೆ, 2,31,320.37 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡಿವೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಆರ್ ಬಿಐ ರೆಪೋ ದರ ಏರಿಕೆ, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಕಳೆದ ಎರಡು ವಾರದಿಂದ ರಿಲಯನ್ಸ್ ಭಾರಿ ಲಾಭ ಗಳಿಸಿದೆ.

ಜಾಗತಿಕ ವಿದ್ಯಮಾನ, ವಿದೇಶಿ ಫಂಡ್ ಹರಿವು, ಎಲ್ಐಸಿ ಐಪಿಒ, ಆರ್ ಬಿಐ ರೆಪೋ ದರ ಏರಿಕೆ ನಂತರದ ಬದಲಾವಣೆಗಳು ಹೆಚ್ಚಿನ ವಹಿವಾಟು ಕಾಣದಂತೆ ಮಾಡಿವೆ. ಕಳೆದ ವಾರ ಟಿಸಿಎಸ್, ಭಾರತೀಯ ಜೀವವಿಮಾ ನಿಗಮ (ಎಲ್ಐಸಿ) ಮಾತ್ರ ನಷ್ಟ ಅನುಭವಿಸಿವೆ

ಕಳೆದ ವಾರ, ಬೆಂಚ್‌ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್ 884.57 ಪಾಯಿಂಟ್‌ಗಳು ಅಥವಾ 1.61 ಶೇಕಡಾ ಏರಿಕೆ ಕಂಡಿದೆ.

ಕಳೆದ ವಾರ ಟಿಸಿಎಸ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್ ಭಾರಿ ಲಾಭ ಗಳಿಸಿದ್ದರೆ, ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಯಾವ ಕಂಪನಿಗಳಿಗೆ ನಷ್ಟ

ಯಾವ ಕಂಪನಿಗಳಿಗೆ ನಷ್ಟ

ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಭಾರತೀಯ ಜೀವ ವಿಮಾ ನಿಗಮ, ಎಚ್ ಡಿ ಎಫ್ ಸಿ ಹಾಗೂ ಭಾರ್ತಿ ಏರ್ ಟೆಲ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಈ ಎಲ್ಲಾ ಕಂಪನಿಗಳ ಒಟ್ಟಾರೆ ನಷ್ಟ 68,140.72 ಕೋಟಿ ರು ದಾಟಿದೆ.

ಕಂಪನಿಗಳ profile, ಕಳೆದ ವಾರದ ಷೇರು ಏರಿಳಿತ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 1,38,222.46 ಕೋಟಿ ರು ಏರಿಕೆಕೊಂಡು 18,80,350.47 ಕೋಟಿ ರು ಮೌಲ್ಯ ತಲುಪಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 64,618.85 ಕೋಟಿ ರು ಕಳೆದುಕೊಂಡು 12,58,274.59ಕೋಟಿ ರು ಮೌಲ್ಯಕ್ಕೆ ಕುಸಿದಿದೆ.

ಇನ್ಫೋಸಿಸ್

ಇನ್ಫೋಸಿಸ್

ದೇಶದ ಎರಡನೇ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 25,728.52 ಕೋಟಿ ರು ಏರಿಕೆ ಕಂಡು 6,40,373.02 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕ್ 2,750.54 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು 5,17,049.46 ಕೋಟಿ ರು ಆಗಿದೆ.

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್

ಭಾರ್ತಿ ಏರ್ ಟೆಲ್ 25,955.25 ಕೋಟಿ ರು ಮೌಲ್ಯ ಇಳಿಕೆ ಕಂಡು 3,76,972.75 ಕೋಟಿ ರು ತಲುಪಿದೆ. ಇತ್ತೀಚಿನ ಷೇರುಪೇಟೆಗೆ ಎಂಟ್ರಿಕೊಟ್ಟ ಎಲ್ಐಸಿ ಹೆಚ್ಚಿನ ಸದ್ದು ಮಾಡದೆ 13,472.25 ಕೋಟಿ ರು ಮೌಲ್ಯ ಇಳಿಕೆ ಕಂಡು 5,06,157.94 ಕೋಟಿ ರು ತಲುಪಿದೆ.

ಎಚ್‌ಡಿಎಫ್‌ಸಿ ಸಂಸ್ಥೆ

ಎಚ್‌ಡಿಎಫ್‌ಸಿ ಸಂಸ್ಥೆ

ಎಚ್‌ಡಿಎಫ್‌ಸಿ ಸಂಸ್ಥೆಯ ಮೌಲ್ಯ 9,355.02 ಕೋಟಿ ರು ಇಳಿಕೆ ಕಂಡು 4,13,299.36 ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 8,963.69 ಕೋಟಿ ರು ಕುಸಿತ ಕಂಡು 5,38,561.56 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.

ಎಸ್ ಬಿಐ

ಎಸ್ ಬಿಐ

ಎಚ್‌ಡಿಎಫ್‌ಸಿ ಬ್ಯಾಂಕ್ 6,199.94 ಕೋಟಿ ರು ಮೌಲ್ಯ ಇಳಿಕೆ ಕಂಡು 7,66,314.71 ಕೋಟಿ ರು ತಲುಪಿದೆ.
ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ 4,194.57 ಕೋಟಿ ರು ತಗ್ಗಿದ್ದು, 4,14,369.71 ಕೋಟಿ ರು ತಲುಪಿದೆ.

ಕಳೆದ ವಾರದಲ್ಲಿ ಎಸ್ ಬಿಐ ಷೇರುಗಳ ಏರಿಳಿತ, ಕಂಪನಿ ಇತಿಹಾಸ, ವಹಿವಾಟು ವಿವರ ತಿಳಿಯಲು ಕ್ಲಿಕ್ ಮಾಡಿ
ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್,ಎಲ್ಐಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಹಾಗೂ ಭಾರ್ತಿ ಏರ್ ಟೆಲ್.

ಇತ್ತೀಚೆಗೆ ಷೇರುಪೇಟೆ ಪ್ರವೇಶಿಸಿದ ಎಲ್ ಐಸಿ ಹೆಚ್ಚಿನ ಸ್ಥಾನಕ್ಕೇರದೆ. ಎರಡು ವಾರಗಳ ಕಾಲ 6ನೇ ಸ್ಥಾನದಲ್ಲಿ ಉಳಿದಿತ್ತು. ಕಳೆದ ವಾರ ಭಾರಿ ನಷ್ಟ ಅನುಭವಿಸಿ, 7ನೇ ಸ್ಥಾನಕ್ಕೆ ಕುಸಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+