ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (FPI) ಸತತವಾಗಿ ಎರಡನೇ ತಿಂಗಳಾದ ಜುಲೈನಲ್ಲಿ ನಿವ್ವಳ ಖರೀದಿಯಾಗಿ ಭಾರತೀಯ ಮಾರುಕಟ್ಟೆಗೆ 3,301 ಕೋಟಿ ರುಪಾಯಿ ಹರಿಸಿದ್ದಾರೆ. ಕೊರೊನಾ ವೈರಾಣುವಿಗೆ ಲಸಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಇಷ್ಟು ಮಟ್ಟದ ಹೂಡಿಕೆ ಹರಿದುಬಂದಿದೆ.
ಎಫ್ ಪಿಐ ಅಂದರೆ ವಿದೇಶದಲ್ಲಿ ಇರುವ ಹೂಡಿಕೆದಾರರು. ಅವರು ಸೆಕ್ಯೂರಿಟೀಸ್ ಮತ್ತು ಇತರ ಹಣಕಾಸು ಆಸ್ತಿಯಲ್ಲಿ ಬಂಡವಾಳ ಹೂಡುವವರು. ಡೆಪಾಸಿಟರಿ ದತ್ತಾಂಶದ ಪ್ರಕಾರ, ಜುಲೈ 1ರಿಂದ 31ರ ಮಧ್ಯೆ 7,563 ಕೋಟಿ ರುಪಾಯಿಯನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಿದ್ದು, 4,262 ಕೋಟಿ ರುಪಾಯಿ ಹಣವನ್ನು ತೆಗೆದುಕೊಂಡಿದ್ದಾರೆ.
ನಿವ್ವಳ ಹೂಡಿಕೆ 3,301 ರುಪಾಯಿ ಬಂದಿದೆ. ಈ ಹಿಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಎಫ್ ಪಿಐ ಕಡೆಯಿಂದ 24,053 ಕೋಟಿ ನಿವ್ವಳ ಹೂಡಿಕೆ ಬಂದಿತ್ತು.

ಕೊರೊನಾಗೆ ಔಷಧ ಕಂಡುಹಿಡಿಯಬಹುದು ಎಂಬ ನಿರೀಕ್ಷೆ, ಒಳ್ಳೆ ಲಾಭ ಬಂದಿದ್ದರಿಂದ ಎಫ್ ಪಿಐ (ಹೂಡಿಕೆದಾರರು) ಲಾಭವನ್ನು ತೆಗೆದುಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇನ್ನು ಜೂನ್ ಗೆ ಹೋಲಿಸಿದಲ್ಲಿ ಜುಲೈನಲ್ಲಿ ಹೂಡಿಕೆ ಕಡಿಮೆ ಇದೆ. ಏಕೆಂದರೆ, ಎಫ್ ಪಿಐನಿಂದ ಎಚ್ಚರಿಕೆ ಹೆಜ್ಜೆಗಳನ್ನು ಇಟ್ಟಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ತರಲು ಇನ್ನೂ ಕೆಲ ಸಮಯ ಹಲವೆಡೆ ಲಾಕ್ ಡೌನ್ ಮುಂದುವರಿದಿರುವುದರಿಂದ ದೇಶೀಯ ಆರ್ಥಿಕತೆ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು ಎಂಬುದು ಲೆಕ್ಕಾಚಾರ. ಇನ್ನು ದಕ್ಷಿಣ ಕೊರಿಯಾ ಹಾಗೂ ಭಾರತದ ಮಾರುಕಟ್ಟೆ ಬಗ್ಗೆ ಸಕಾರಾತ್ಮಕ ಭಾವನೆ ಇದ್ದು, ಜುಲೈ ಕೊನೆಗೆ ಎಫ್ ಪಿಐ ಬಂಡವಾಳ ಬಂದಿದೆ.
ಆದರೆ, ಉಳಿದ ಮಾರುಕಟ್ಟೆಯಲ್ಲಿ ಹೊರಹರಿವು ಹೆಚ್ಚಿದೆ. ಚಲನೆ ಇಲ್ಲದ ಯು.ಎಸ್. ಮಾರುಕಟ್ಟೆ, ಡಾಲರ್ ಮೌಲ್ಯ ಇಳಿಕೆಯಿಂದಾಗಿ ಎಫ್ ಪಿಐನಿಂದ ಬೆಳೆಯುತ್ತಿರುವ ಮಾರುಕಟ್ಟೆ ಕಡೆಗೆ ನೋಡಲಾಯಿತು ಎನ್ನುತ್ತಾರೆ ತಜ್ಞರು.


Click it and Unblock the Notifications