ಹೋಟೆಲ್ ಮಾಲೀಕರಂತೆ ನಟಿಸಿ ಕೇರಳ ಮೂಲದ ಸಂಸ್ಥೆಗೆ 165 ಕೋಟಿಗೆ 3 ಸ್ಟಾರ್ ಲಕ್ಸುರಿ ಹೋಟೆಲ್ ಮಾರಾಟ ಮಾಡಲು ಯತ್ನಿಸಿದ ಮೂವರು ವಂಚಕರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈನಲ್ಲಿರುವ 3 ಸ್ಟಾರ್ ಹೋಟೆಲ್ ಅಂಬಿಕಾ ಎಂಪೈರ್ ನಮ್ಮದೇ ಎಂದು ಮಾಲೀಕರಂತೆ ನಟಿಸಿದ್ದ ವಂಚಕರ ತಂಡವೊಂದು ಹೋಟೆಲ್‌ನ ಲಾಬಿಯಲ್ಲಿ ಮಾರಾಟದ ಮಾತುಕತೆ ನಡೆಸಿದೆ. ಈ ಮಾತುಕತೆ ಅದೇಗೋ ಹೋಟೆಲ್ ಸಿಬ್ಬಂದಿಗೆ ಗೊತ್ತಾಗಿ ಮ್ಯಾನೇಜರ್‌ಗೆ ಸುದ್ದಿ ಮುಟ್ಟಿಸಿದ್ದಾರೆ. ನಿಜವಾದ ಮಾಲೀಕರೊಂದಿಗೆ ಪರಿಶೀಲಿಸಿದ ನಂತರ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಕರೆ ಮಾಡಿದ್ದಾರೆ.

ಹೋಟೆಲ್ ಮಾಲೀಕರಂತೆ ನಟಿಸಿ ಕೇರಳ ಮೂಲದ ಗುಂಪಿಗೆ 165 ಕೋಟಿ ರುಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದಕ್ಕಾಗಿ ಮೂವರು ವಂಚಕರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಅಂಬಿಕಾ ಚೆನ್ನೈನ ಸ್ಟಾರ್ ಹೋಟೆಲ್‌ಗಳಲ್ಲಿ ಒಂದಾಗಿದ್ದು, ಹೋಟೆಲ್ ತಮ್ಮದೇ ಎಂದು ವಂಚಿಸಲು ಈ ಗುಂಪು ಪ್ಲಾನ್ ಮಾಡಿಕೊಡಿದೆ. ಹೆಚ್ಚಿನ ತನಿಖೆಯಲ್ಲಿ ಅವರಲ್ಲಿ ಮೂವರು ಚೆನ್ನೈ ಮೂಲದವರು ಮತ್ತು ಇನ್ನಿಬ್ಬರು ಕೇರಳ ಮೂಲದವರು ಎಂದು ತಿಳಿದುಬಂದಿದೆ. ಸತತ ವಿಚಾರಣೆಯಲ್ಲಿ ಕರುಣಂಕರನ್, (70), ಪರಮಾನಂದಂ, (55) ಮತ್ತು ಚೆನ್ನೈನ ದಕ್ಷಿಣಮೂರ್ತಿ (60) ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಈ ವಂಚಕರು ಕೇರಳದ ಖಾಸಗಿ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿಯಾಗಿ ಚೆನ್ನೈನಲ್ಲಿರುವ ಅಂಬಿಕಾ ಎಂಪೈರ್ ಹೋಟೆಲ್‌ನ ಮೂಲ ಮಾಲೀಕರಂತೆ ನಟಿಸಿದ್ದಾರೆ. ನಂತರ ಹೋಟೆಲ್ ಅನ್ನು 165 ಕೋಟಿಗೆ ಮಾರಾಟ ಮಾಡಲು ಮುಂದಾದರು. ಈ ಆಫರ್‌ಗೆ ಆಕರ್ಷಿತರಾದ ಕೇರಳ ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಚೆನ್ನೈ ತಲುಪಿದರು ಮತ್ತು ಮೂವರ ಸಲಹೆಯಂತೆ ಎರಡು ದಿನಗಳ ಕಾಲ ಅದೇ ಹೋಟೆಲ್‌ನಲ್ಲಿ ತಂಗಿದ್ದರು.
ಹೋಟೆಲ್ ಖರೀದಿಗೂ ಮುನ್ನ ಒಟ್ಟು ಮಾರಾಟ ಮೌಲ್ಯದಲ್ಲಿ 10 ಪರ್ಸೆಂಟ್‌ನಷ್ಟು ಅಡ್ವಾನ್ಸ್ ಆಗಿ ಹಣ ನೀಡಬೇಕೆಂದು ಕೂಡ ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು ಅವರಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಲ್ಪ ಯಾಮಾರಿದ್ರೂ ಯಾರದ್ದೋ ಹೋಟೆಲ್ ಅನ್ನು ಅವರದ್ದೇ ಹೋಟೆಲ್‌ನಲ್ಲಿ ಕುಳಿತು ಮಾರಾಟ ಮಾಡುತ್ತಿದ್ದರು.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications