For Quick Alerts
ALLOW NOTIFICATIONS  
For Daily Alerts

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು 20,000 ಕೋಟಿ ಇರಿಸಿರುವುದು ಸುಳ್ಳು: ಕೇಂದ್ರ ಸರ್ಕಾರ

|

ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಹಣವು 2020ರಲ್ಲಿ 20,700 ಕೋಟಿಗೆ ಏರಿದೆ ಎಂಬ ಹೇಳಿಕೆಯನ್ನು ಹಣಕಾಸು ಸಚಿವಾಲಯ ಶನಿವಾರ ನಿರಾಕರಿಸಿದೆ. ಇದು ಸತ್ಯಕ್ಕೆ ದೂರವಾದ ಮಾತು ಎಂಬುದು ಹಣಕಾಸು ಸಚಿವಲಾಯದ ಅಭಿಪ್ರಯಾವಾಗಿದೆ.

 

ಭಾರತದ ಮೂಲದ ಹಣಕಾಸು ಸಂಸ್ಥೆಗಳು, ಶಾಖೆಗಳು ಸೇರಿದಂತೆ ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣವು 2020ರಲ್ಲಿ 2.55 ಬಿಲಿಯನ್ ಸ್ವಿಸ್ ಫ್ರಾಂಕ್‌ (20,700 ಕೋಟಿ ರೂ.ಗಳಿಗಿಂತಲೂ ಹೆಚ್ಚು) ಏರಿದೆ ಎಂದು ವರದಿಯಾಗಿತ್ತು. ಇದು ಕಳೆದ 13 ವರ್ಷಗಳಲ್ಲಿ ಅತಿ ಹೆಚ್ಚು ಠೇವಣಿಗಳಾಗಿದೆ. ಸ್ವಿಸ್‌ ಬ್ಯಾಂಕ್‌ಗಳು ಈ ಕುರಿತಾಗಿ ಅಧಿಕೃತವಾಗಿ ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ಗೆ ಮಾಹಿತಿಯನ್ನ ನೀಡಿವೆ ಎಂದು ಸುದ್ದಿ ಹರಿದಾಡಿತ್ತು.

 
ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು 20,000 ಕೋಟಿ ಇರಿಸಿಲ್ಲ!

''ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಹಣವು 2020ರ ಕೊನೆಯಲ್ಲಿ, 6,625 ಕೋಟಿಯಿಂದ (ಸಿಎಚ್ಎಫ್ 899 ಮಿಲಿಯನ್) 20,700 ಕೋಟಿಗೆ (ಸಿಎಚ್ಎಫ್ 2.55 ಬಿಲಿಯನ್) ಏರಿದೆ ಎಂದು 18.06.2021 ರಂದು ಕೆಲವು ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಕಳೆದ 13 ವರ್ಷಗಳಲ್ಲಿ ಇದು ಅತಿ ಹೆಚ್ಚು ಠೇವಣಿ ಎಂದು ಸಹ ಹೇಳಲಾಗಿದೆ "ಎಂದು ಸಚಿವಾಲಯ ತಿಳಿಸಿದೆ.

ವರದಿ ಮಾಡಿದ ಅಂಕಿಅಂಶಗಳು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ಗೆ ಬ್ಯಾಂಕುಗಳು ವರದಿ ಮಾಡಿದ ಅಧಿಕೃತ ಅಂಕಿ ಅಂಶಗಳಾಗಿವೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭಾರತೀಯರು ಹೊಂದಿರುವ ಹೆಚ್ಚು ಚರ್ಚಾಸ್ಪದ ಕಪ್ಪು ಹಣದ ಪ್ರಮಾಣವನ್ನು ಸೂಚಿಸುವುದಿಲ್ಲ ಎಂದು ಸಚಿವಾಲಯ ಹೇಳಿದೆ.

ಇದು 13 ವರ್ಷಗಳಲ್ಲಿ ಇಡಲಾದ ಅತಿಹೆಚ್ಚಿನ ಮೊತ್ತವಾಗಿದ್ದು, ಸ್ವಿಸ್‌ ಬ್ಯಾಂಕ್‌ಗಳು ಈ ಕುರಿತಾಗಿ ಅಧಿಕೃತವಾಗಿ ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ಗೆ ಮಾಹಿತಿಯನ್ನ ನೀಡಿವೆ. ಈ ಮೂಲಕ ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಇರಿಸಿರುವ ಹಣ 'ಕಪ್ಪು ಹಣ'ವೆಂಬ ವಾದ ಮುಂದುವರಿದಿದ್ದು, ಇದನ್ನ ಅಲ್ಲಿನ ಅಧಿಕಾರಿಗಳು ಹಿಂದಿನಿಂದಲೂ ಒಪ್ಪಿಕೊಳ್ಳಲು ತಯಾರಿಲ್ಲ.

ಇದಲ್ಲದೆ, ಈ ಅಂಕಿಅಂಶಗಳು ಸ್ವಿಸ್ ಬ್ಯಾಂಕುಗಳಲ್ಲಿ ಮೂರನೇ ರಾಷ್ಟ್ರದ ಸಂಸ್ಥೆಗಳ ಹೆಸರಿನಲ್ಲಿ ಭಾರತೀಯರು, ಎನ್‌ಆರ್‌ಐಗಳು ಅಥವಾ ಇತರರು ಹೊಂದಿರಬಹುದಾದ ಹಣವನ್ನು ಒಳಗೊಂಡಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

English summary

Funds's Of Indians In Swiss Banks Over 20,000 Crore Not True: Central Govt

The Finance Ministry on Saturday refuted claims that funds of Indians in Swiss Banks have risen to over Rs 20,700 crore in 2020
Story first published: Saturday, June 19, 2021, 21:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X