For Quick Alerts
ALLOW NOTIFICATIONS  
For Daily Alerts

ಕಳೆದ 1 ವರ್ಷದಲ್ಲಿ ದಿನಕ್ಕೆ 1002 ಕೋಟಿ ಗಳಿಸಿದ ಗೌತಮ್ ಅದಾನಿ: ಏಷ್ಯಾದ 2ನೇ ಅತಿದೊಡ್ಡ ಶ್ರೀಮಂತ

|

ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಕಳೆದ ಒಂದು ವರ್ಷದಲ್ಲಿ ದಿನಕ್ಕೆ ಬರೋಬ್ಬರಿ 1,002 ಕೋಟಿ ರೂಪಾಯಿ ಆದಾಯಗಳಿಸಿದೆ.

ಏಷ್ಯಾದ 2ನೇ ಅತಿದೊಡ್ಡ ಶ್ರೀಮಂತನಾಗಿರುವ ಗೌತಮ್ ಅದಾನಿ ಅವರ ಸಂಪತ್ತು ನಾಲ್ಕು ಪಟ್ಟು ಹೆಚ್ಚಾಗಿದ್ದು, ಒಂದು ವರ್ಷದ ಹಿಂದೆ 1,40,200 ಕೋಟಿ ರೂಪಾಯಿನಷ್ಟಿದ್ದ ಆಸ್ತಿ ಬರೋಬ್ಬರಿ 5,05,900 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಈ ಮೂಲಕ ಚೀನಾದ ಬಾಟಲ್ ವಾಟರ್‌ ಉತ್ಪಾದಕ ಜಾಂಗ್‌ ಶಂಶನ್ ಅವರನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಅತಿದೊಡ್ಡ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.

ಐಐಎಫ್‌ಎಲ್ ವೆಲ್ತ್‌ ಹುರುನ್ ಇಂಡಿಯಾ ರಿಚ್‌ ಲಿಸ್ಟ್ 2021 ರ ಪ್ರಕಾರ ಅದಾನಿ ಸಂಪತ್ತು ಬೇರೆ ಶ್ರೀಮಂತ ಉದ್ಯಮಿಗಳಿಗಿಂತ ಭಾರೀ ಮಟ್ಟದಲ್ಲಿ ಹೆಚ್ಚಳಗೊಂಡಿದೆ.

ದಿನಕ್ಕೆ 169 ಕೋಟಿ ಗಳಿಸಿದ ಮುಕೇಶ್ ಅಂಬಾನಿ

ದಿನಕ್ಕೆ 169 ಕೋಟಿ ಗಳಿಸಿದ ಮುಕೇಶ್ ಅಂಬಾನಿ

ಅದಾನಿಗೆ ಹೋಲಿಸಿದ್ರೆ, ಭಾರತದ ಶ್ರೀಮಂತ ಕುಟುಂಬ ಮುಕೇಶ್ ಅಂಬಾನಿಯು ವರ್ಷದಲ್ಲಿ ದಿನಕ್ಕೆ 169 ಕೋಟಿ ಗಳಿಸಿದರು, ಮತ್ತು ಅವರ ಸಂಪತ್ತು ಶೇಕಡ 9 ರಷ್ಟು ಏರಿಕೆಯಾಗಿ 7,18,000 ಕೋಟಿ ರೂಪಾಯಿಗೆ ತಲುಪಿದೆ ಎಂದು ಐಐಎಫ್ಎಲ್ ವೆಲ್ತ್-ಹುರುನ್ ಇಂಡಿಯಾ ವರದಿ ತೋರಿಸಿದೆ.

ಆಭರಣ ಖರೀದಿದಾರರಿಗೆ ಮತ್ತಷ್ಟು ಖುಷಿ: ಚಿನ್ನದ ಬೆಲೆ ಮತ್ತೆ ಇಳಿಕೆಆಭರಣ ಖರೀದಿದಾರರಿಗೆ ಮತ್ತಷ್ಟು ಖುಷಿ: ಚಿನ್ನದ ಬೆಲೆ ಮತ್ತೆ ಇಳಿಕೆ

ಎಚ್‌ಸಿಎಲ್‌ ಶಿವ್‌ ನಾಡಾರ್ ಸಂಪತ್ತು ಶೇ. 67ರಷ್ಟು ಏರಿಕೆ

ಎಚ್‌ಸಿಎಲ್‌ ಶಿವ್‌ ನಾಡಾರ್ ಸಂಪತ್ತು ಶೇ. 67ರಷ್ಟು ಏರಿಕೆ

ಎಚ್‌ಸಿಎಲ್‌ನ ಶಿವ್ ನಾಡಾರ್ ಮತ್ತು ಅವರ ಕುಟುಂಬದ ಸಂಪತ್ತು ಶೇಕಡಾ 67 ರಷ್ಟು ಏರಿಕೆಯಾಗಿ 2,36,600 ಕೋಟಿ ರೂ. ತಲುಪಿದೆ. ದೆಹಲಿ ಮೂಲದ ನಾಡರ್ ದಿನಕ್ಕೆ 260 ಕೋಟಿ ರೂ. ಗಳಿಸಿದ್ದಾರೆ

ಲಕ್ಷೀ ಮಿತ್ತಲ್ ಸಂಪತ್ತು ದುಪ್ಪಟ್ಟು ಏರಿಕೆ

ಲಕ್ಷೀ ಮಿತ್ತಲ್ ಸಂಪತ್ತು ದುಪ್ಪಟ್ಟು ಏರಿಕೆ

ಲಂಡನ್ ಮೂಲದ ಎಲ್ಎನ್ ಮಿತ್ತಲ್ (71) ಮತ್ತು ಆರ್ಸೆಲರ್ ಮಿತ್ತಲ್ ಕುಟುಂಬದ ಸಂಪತ್ತು ಶೇ 187 ರಷ್ಟು ಏರಿಕೆಯಾಗಿ 1,74,400 ಕೋಟಿ ರೂ. ತಲುಪಿದೆ. ಈ ವರ್ಷದಲ್ಲಿ ಅವರು ದಿನಕ್ಕೆ 312 ಕೋಟಿ ರೂ. ಏರಿಕೆಯಾಗಿದೆ.

ಪೂನವಲ್ಲಾ ಕುಟುಂಬಕ್ಕೆ ಅದೃಷ್ಟ ಒಲಿದು ಬಂತು

ಪೂನವಲ್ಲಾ ಕುಟುಂಬಕ್ಕೆ ಅದೃಷ್ಟ ಒಲಿದು ಬಂತು

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಲೀಕತ್ವ ಹೊಂದಿರುವ ಪುಣೆ ಮೂಲದ ಸೈರಸ್ ಎಸ್ ಪೂನವಲ್ಲಾ (80) ಮತ್ತು ಅವರ ಕುಟುಂಬವು ದಿನಕ್ಕೆ 190 ಕೋಟಿ ರೂಪಾಯಿ ಆದಾಯಗಳಿಸಿದೆ. ಕುಟುಂಬದ ಸಂಪತ್ತು ಶೇಕಡಾ 74 ರಷ್ಟು ಏರಿಕೆಯಾಗಿ 1,63,700 ಕೋಟಿ ರೂಪಾಯಿಗಳಿಗೆ ಏರಿಕೆಗೊಂಡಿದೆ.

ರಾಧಾಕಿಶನ್ ದಮಾನಿ ದಿನಕ್ಕೆ ಗಳಿಸಿದ್ದು 184 ಕೋಟಿ

ರಾಧಾಕಿಶನ್ ದಮಾನಿ ದಿನಕ್ಕೆ ಗಳಿಸಿದ್ದು 184 ಕೋಟಿ

ಅವೆನ್ಯೂ ಸೂಪರ್‌ಮಾರ್ಟ್‌ ಮಾಲೀಕತ್ವ ಹೊಂದಿರುವ ಮುಂಬೈ ಮೂಲದ ರಾಧಾಕಿಶನ್ ದಮಾನಿ ಮತ್ತು ಕುಟುಂಬವು ದಿನಕ್ಕೆ 184 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಭಾರತದ ಏಳನೇ ಶ್ರೀಮಂತ ಕುಟುಂಬವಾಗಿದೆ.

ದಮಾನಿ ಹೊರತುಪಡಿಸಿ, ಕುಮಾರ್ ಮಂಗಳಂ ಬಿರ್ಲಾ (54) ಮತ್ತು ಅವರ ಕುಟುಂಬವು ಒಂಬತ್ತನೇ ಶ್ರೀಮಂತರಾಗಿದ್ದು, 1,22,200 ಕೋಟಿ ಸಂಪತ್ತನ್ನು ಹೊಂದಿದೆ. ಇವರ ಸಂಪತ್ತು ಒಟ್ಟಾರೆ ಶೇಕಡಾ 230ರಷ್ಟು ಹೆಚ್ಚಳವಾಗಿದ್ದು, ಈ ಕುಟಂಬವು ದಿನಕ್ಕೆ 240 ಕೋಟಿ ರೂ. ಆದಾಯಗಳಿಸಿದೆ.

ಇದರ ನಡುವೆ ಕ್ಯಾಲಿಫೋರ್ನಿಯಾ ಮೂಲದ ಎಂಟರ್‌ಪ್ರೈಸ್ ಕ್ಲೌಡ್ ಸೆಕ್ಯುರಿಟಿ ಸಂಸ್ಥೆ ZSCALER ಅನ್ನು ಮುನ್ನಡೆಸುತ್ತಿರುವ ಸ್ಯಾನ್ ಜೋಸ್ ಮೂಲದ ಜಯ್ ಚೌಧರಿ ಅವರ ಕುಟುಂಬದ ಸಂಪತ್ತು ಶೇಕಡಾ 85 ರಷ್ಟು ಏರಿಕೆಯಾಗಿ 1,21,600 ಕೋಟಿಗೆ ತಲುಪಿದ್ದು 10 ನೇ ಸ್ಥಾನದಲ್ಲಿದ್ದಾರೆ. ಚೌಧರಿ 2021 ರಲ್ಲಿ ದಿನಕ್ಕೆ 153 ಕೋಟಿ ರೂ. ಗಳಿಸಿದ್ದಾರೆ.

ಈ ಮೇಲಿನ ಎಲ್ಲಾ ಅಂಕಿ-ಅಂಶಗಳು ಸೆಪ್ಟೆಂಬರ್ 15, 2021ರ ವರೆಗಿನ ಲೆಕ್ಕಾಚಾರವಾಗಿದ್ದು, ಅಮೆರಿಕನ್ ಡಾಲರ್‌ಗೆ ವಿನಿಮಯ ದರವನ್ನು ರೂ. 73.46ರಷ್ಟು ತೆಗೆದುಕೊಳ್ಳಲಾಗಿದೆ.

 

English summary

Gautam Adani Earns Rs 1002 Crore A Day: Adani Becomes Asia's 2nd Richest

Gautam adani and family earned Rs 1,002 crore a day in the last one year to quadruple their wealth to Rs 5,05,900 crore from Rs 1,40,200 crore a year-ago.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X