ಬಿಲಿಯನೇರ್ ಗೌತಮ್ ಅದಾನಿಯ ಸಂಸ್ಥೆಯಾದ ಅದಾನಿ ಗ್ರೂಪ್ ವಿರುದ್ಧವಾಗಿ ಹಿಂಡನ್‌ಬರ್ಗ್ ವರದಿಯನ್ನು ಪ್ರಕಟಿಸಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ವಂಚನೆ ಮಾಡಿದೆ, ಮನಿ ಲಾಂಡರಿಂಗ್‌ನಲ್ಲಿ ಭಾಗಿಯಾಗಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡಿದೆ. ಇದಾದ ಬೆನ್ನಲ್ಲೇ ಅದಾನಿ ಗ್ರೂಪ್ ಭಾರೀ ನಷ್ಟವನ್ನು ಕಂಡಿದೆ. ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲಿಯನರ್ ಗೌತಮ್ ಅದಾನಿ ವಿಶ್ವದ 25 ಶ್ರೀಮಂತರ ಪಟ್ಟಿಯಿಂದ ಹೊರಕ್ಕುಳಿದಿದ್ದಾರೆ.
ಫೆಬ್ರವರಿ 23, ಬುಧವಾರ ಬಿಲಿಯನೇರ್ ಗೌತಮ್ ಅದಾನಿ ಆದಾಯವು ಬುಧವಾರ 43.4 ಬಿಲಿಯನ್ ಡಾಲರ್ ಕುಸಿದಿದೆ. ಇದರ ಬೆನ್ನಲ್ಲೇ ಗೌತಮ್ ಅದಾನಿ ವಿಶ್ವದ 25 ಶ್ರೀಮಂತರ ಪಟ್ಟಿಯಿಂದ ಹೊರಕ್ಕುಳಿದಿದ್ದಾರೆ. ಈ ಹಿಂದೆ ಗೌತಮ್ ಅದಾನಿ ವಿಶ್ವದ ಎರಡನೇ ಅತೀ ಶ್ರೀಮಂತ ವ್ಯಕ್ತಿಯಾಗಿದ್ದರು. ಹಾಗೆಯೇ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ಈ ಎರಡರಿಂದಲೂ ಗೌತಮ್ ಅದಾನಿ ಔಟ್ ಆಗಿದ್ದಾರೆ. ಪ್ರಸ್ತುತ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯಾಗಿದ್ದಾರೆ.

ಗೌತಮ್ ಅದಾನಿ ಈಗ ಯಾವ ಸ್ಥಾನದಲ್ಲಿ?
ಗೌತಮ್ ಅದಾನಿ ಪ್ರಸ್ತುತ ವಿಶ್ವದ 26ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹಿಂಡನ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಆದಾಯವು 75 ಬಿಲಿಯನ್ ಡಾಲರ್ ಕುಸಿದಿದೆ. ಇನ್ನು ಅದಾನಿ ಸ್ಟಾಕ್‌ಗಳು ಸುಮಾರು 130 ಬಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಕಂಡಿದೆ. ಇನ್ನು ಅದಾನಿ ಗ್ರೂಪ್‌ನ ಮಾರುಕಟ್ಟೆ ಮೌಲ್ಯವು ಕೂಡಾ ಭಾರೀ ಇಳಿಕೆಯಾಗಿದೆ. ಅದಾನಿ ಗ್ರೂಪ್‌ನ ಮಾರುಕಟ್ಟೆ ಮೌಲ್ಯವು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಕ್ಯಕ್ಕಿಂತ ಕೆಳಕ್ಕಿಳಿದಿದೆ.
ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ, ಮ್ಯಾನಿಪುಲೇಟ್ ಮಾಡಿದೆ ಹಿಂಡನ್‌ಬರ್ಗ್ ಜನವರಿಯಲ್ಲಿ ವರದಿ ಮಾಡಿದೆ. ಅದಾನಿ ಗ್ರೂಪ್ ಮಾತ್ರ ಈ ಆರೋಪವನ್ನು ಅಲ್ಲಗಳೆದಿದೆ. ಅದಕ್ಕಾಗಿ ಸುಮಾರು 413 ಪುಟಗಳ ಉತ್ತರವನ್ನು ಕೂಡಾ ನೀಡಿದೆ. ಇದಾದ ಬಳಿಕವೂ ಅದಾನಿ ಷೇರುಗಳು ಸ್ಟಾಕ್ ಮಾರುಕಟ್ಟೆಯಲ್ಲಿ ಲಾಭವನ್ನು ಗಳಿಸಿಲ್ಲ. ಅದಾನಿ ಸ್ಟಾಕ್‌ನ ಎಲ್ಲ 10 ಸ್ಟಾಕ್‌ಗಳು ಕೂಡಾ ನಷ್ಟವನ್ನು ಕಂಡಿದೆ. ಹೂಡಿಕೆದಾರರು ಸ್ಟಾಕ್ ಮೇಲೆ ಅಧಿಕ ಆಸಕ್ತಿಯನ್ನು ತೋರಿಸಿಲ್ಲ.
ಅದಾನಿ ಗ್ರೂಪ್‌ನ 10 ಸ್ಟಾಕ್‌ಗಳು ಒಟ್ಟು ಸೇರಿದಾಗ ಮಂಗಳವಾರದ ವೇಳೆಗೆ ಮಾರುಕಟ್ಟೆ ಮೌಲ್ಯವು 8,09,182 ಕೋಟಿ ರೂಪಾಯಿ ಆಗಿದೆ. ಈ ಮೌಲ್ಯವು ಎಚ್‌ಡಿಎಫ್‌ಸಿ ಬ್ಯಾಂಕ್ ಒಂದರ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಯಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಮೌಲ್ಯ 9,18,703.53 ಕೋಟಿ ರೂಪಾಯಿ ಆಗಿದೆ. ಜನವರಿ 24ರಂದು ಅದಾನಿ ಗ್ರೂಪ್‌ನ ಎಲ್ಲ ಸ್ಟಾಕ್‌ಗಳ ಮಾರುಕಟ್ಟೆ ಮೌಲ್ಯ ಸೇರಿದಾಗ 19.19 ಲಕ್ಷ ಕೋಟಿ ರೂಪಾಯಿ ಆಗಿತ್ತು. ರಿಲಯನ್ಸ್ ಇಂಡಸ್ಟ್ರೀಯ ಮೌಲ್ಯಕ್ಕಿಂತ ಅಧಿಕವಾಗಿತ್ತು. ಹಿಂಡನ್‌ಬರ್ಗ್ ಆರೋಪದ ಬಳಿಕ ಅದಾನಿ ಗ್ರೂಪ್ 11,10,706 ಕೋಟಿ ರೂಪಾಯಿ ಅಥವಾ 134 ಬಿಲಿಯನ್ ಡಾಲರ್‌ನಷ್ಟು ಮೌಲ್ಯವನ್ನು ಕಳೆದುಕೊಂಡಿದೆ.


Click it and Unblock the Notifications