ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂಬ ಹಿಂಡನ್‌ಬರ್ಗ್ ವರದಿ ಆರೋಪದ ಬಳಿಕ ಷೇರುಪೇಟೆಯಲ್ಲಿ ಅದಾನಿ ಗ್ರೂಪ್ ಸ್ಟಾಕ್‌ಗಳು ಭಾರೀ ಕುಸಿತ ಕಂಡಿದೆ. ಆದರೆ ಕೆಲವು ದಿನಗಳಿಂದ ಅದಾನಿ ಸ್ಟಾಕ್ ಕೊಂಚ ಏರಿಕೆಯನ್ನು ಕಾಣುತ್ತಾ ಬಂದಿದೆ. ಸೋಮವಾರ ಅಂದರೆ ಆಗಸ್ಟ್ 21ರಂದು ಎಲ್ಲಾ ಅದಾನಿ ಗ್ರೂಪ್ ಷೇರುಗಳು ಏರಿಕೆ ಕಂಡಿದೆ. ಇದರಿಂದಾಗಿ ಗೌತಮ್ ಅದಾನಿ ನಿವ್ವಳ ಮೌಲ್ಯವು ಒಂದು ದಿನದಲ್ಲೇ 140 ಕೋಟಿ ಯುಎಸ್ ಡಾಲರ್ ಜಿಗಿತ ಕಂಡಿದೆ.
ಅದಾನಿ ಪವರ್ ಷೇರು ಬಿಎಸ್‌ಇಯಲ್ಲಿ ವಹಿವಾಟಿನ ನಡುವೆ ಶೇಕಡ 6.76ರಷ್ಟು ಏರಿಕೆಯನ್ನು ಕಂಡ ಬಳಿಕ ಅದಾನಿ ಪವರ್‌ನ ಪ್ರಸ್ತುತ ಪ್ರತಿ ಷೇರಿನ ಮಾರುಕಟ್ಟೆ ಬೆಲೆಯು 325.25 ರೂಪಾಯಿ ಆಗಿದೆ. ಅದಾನಿ ಪವರ್ ಕಂಪನಿಯ ಒಟ್ಟು ಮೌಲ್ಯ 1,25,446.94 ಕೋಟಿ ರೂಪಾಯಿಗಳಾಗೊದೆ. ಅದಾನಿ ಪವರ್ ಸ್ಟಾಕ್ ಕಳೆದ 6 ತಿಂಗಳಲ್ಲಿ, ಶೇಕಡ 90 ಏರಿದರೆ, ಕಳೆದ 1 ವರ್ಷದಲ್ಲಿ ಶೇಕಡ 21 ರಷ್ಟು ಕುಸಿದಿದೆ. 3 ವರ್ಷದಲ್ಲಿ ಶೇಕಡ 728ರಷ್ಟು ಏರಿಕೆಗೆ ಸಾಕ್ಷಿಯಾಗಿದೆ.

ಅದಾನಿ ಸಂಸ್ಥೆಗಳು ಷೇರು ಎಷ್ಟಿದೆ ನೋಡಿ
ಅದಾನಿ ಎಂಟರ್‌ಪ್ರೈಸಸ್ ಷೇರು ಸೋಮವಾರ ಮಧ್ಯಾಹ್ನ 2 ಗಂಟೆವರೆಗೆ ಶೇಕಡ 2.42 ರಷ್ಟು ಏರಿಕೆ ಕಂಡಿದ್ದು, ಪ್ರತಿ ಷೇರು ದರ 2639.35 ರೂಪಾಯಿ ಆಗಿದೆ. ಕಂಪನಿಯು 3,00,943.20 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಅದಾನಿ ಎಂಟರ್‌ಪ್ರೈಸಸ್ ಕಳೆದ 6 ತಿಂಗಳಲ್ಲಿ ಶೇಕಡ 68ರಷ್ಟು ಗಳಿಸಿದರೆ. 3 ವರ್ಷಗಳಲ್ಲಿ ಷೇರುದಾರರಿಗೆ ಶೇಕಡ 1032 ರಷ್ಟು ಲಾಭವನ್ನು ನೀಡಿದೆ.
ಅದಾನಿ ಪೋರ್ಟ್ಸ್ ಷೇರು ಈ ಸಮಯಕ್ಕೆ ಶೇಕಡ 2.59ರಷ್ಟು ಅಥವಾ 21.65 ಪಾಯಿಂಟ್‌ಗಳು ಹೆಚ್ಚಳವಾಗಿ 857.55 ರೂಪಾಯಿ ಆಗಿದ್ದು, ಒಟ್ಟು ನಿವ್ವಳ ಮೌಲ್ಯವು 1,85,275.12 ಕೋಟಿ ರೂಪಾಯಿಗಳಾಗಿದೆ. ಅದಾನಿ ಪೋರ್ಟ್ಸ್ ಷೇರುಗಳು ಕಳೆದ 6 ತಿಂಗಳಲ್ಲಿ ಶೇಕಡ 47 ರಷ್ಟು ಜಿಗಿದಿದ್ದು, ಕಳೆದ 1 ವರ್ಷದಲ್ಲಿ ಶೇಕಡ 1 ಕ್ಕಿಂತ ಹೆಚ್ಚು ಕುಸಿದಿದೆ. ಕಳೆದ 3 ವರ್ಷಗಳಲ್ಲಿ ಶೇಕಡ 42ರಷ್ಟು ಏರಿಕೆಯಾಗಿದೆ.
ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ ಷೇರುಗಳು ಸಹ ಶೇಕಡ 5.84ರಷ್ಟು ಏರಿಕೆಯಾಗಿ ಪ್ರತಿ ಷೇರಿನ ಬೆಲೆಯು 922.80 ರೂಪಾಯಿ ಆಗಿದೆ. ಅದಾನಿ ಟ್ರಾನ್ಸ್‌ಮಿಷನ್ ಮಾರುಕಟ್ಟೆ ಮೌಲ್ಯವು 1,02,636.48 ಕೋಟಿ ರೂಪಾಯಿ ಆಗಿದೆ. ಅದಾನಿ ಟ್ರಾನ್ಸ್‌ಮಿಷನ್ ಕಳೆದ 1 ತಿಂಗಳಿನಲ್ಲಿ ಶೇಕಡ 19ರಷ್ಟು ಲಾಭ ಗಳಿಸಿದರೆ, ಕಳೆದ 1 ವರ್ಷದಲ್ಲಿ, ಶೇಕಡ 74ರಷ್ಟು ಕುಸಿದಿದೆ. ಕಳೆದ 2 ವರ್ಷಗಳಲ್ಲಿ ಶೇಕಡ 17ರಷ್ಟು ಕುಸಿದಿದ್ದು, ಕಳೆದ 3 ವರ್ಷಗಳಲ್ಲಿ ಶೇಕಡ 238ರಷ್ಟು ಲಾಭ ನೀಡಿದೆ.
ಅದಾನಿ ಗ್ರೀನ್ ಎನರ್ಜಿ ಸ್ಟಾಕ್ ಈ ಸಮಯಕ್ಕೆ ಶೇಕಡ 2.63ರಷ್ಟು ಏರಿಕೆಯಾಗಿ 1,020.90 ರೂಪಾಯಿಗೆ ತಲುಪಿದೆ. ಪ್ರಸ್ತುತ ಮಾರುಕಟ್ಟೆ ಬೆಲೆ 1023.10 ರೂಪಾಯಿ ಆಗಿದ್ದು, ಮಾರುಕಟ್ಟೆ ಮೌಲ್ಯವು 1,62,062.36 ಕೋಟಿ ರೂಪಾಯಿ ಆಗಿದೆ. ಅದಾನಿ ಗ್ರೀನ್ ಷೇರುಗಳು ಕಳೆದ 6 ತಿಂಗಳಲ್ಲಿ ಶೇಕಡ 79 ರಷ್ಟು ಜಿಗಿದಿದ್ದು, ಕಳೆದ 1 ವರ್ಷದಲ್ಲಿ ಶೇಕಡ 58ರಷ್ಟು ಹೆಚ್ಚಳವಾಗಿದೆ. 5 ವರ್ಷಗಳಲ್ಲಿ ಶೇಕಡ 1685ರಷ್ಟು ಲಾಭ ಗಳಿಸಿದೆ.
ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್‌ನ ಷೇರುಗಳು ಶೇಕಡ 1.57ರಷ್ಟು ಏರಿಕೆಯಾಗಿ 664.75 ರೂಪಾಯಿ ಆಗಿದೆ. ಮಾರುಕಟ್ಟೆ ಮೌಲ್ಯವು 73,208.86 ಕೋಟಿ ರೂಪಾಯಿ ಆಗಿದೆ. ಕಳೆದ 1 ವರ್ಷದಲ್ಲಿ, ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಶೇಕಡ 80ರಷ್ಟು ಕುಸಿದಿದೆ. ಕಳೆದ 2 ವರ್ಷಗಳಲ್ಲಿ ಶೇಕಡ 37ರಷ್ಟು ಕುಸಿದಿದೆ, ಕಳೆದ 3 ವರ್ಷಗಳಲ್ಲಿ, ಅದಾನಿ ಟೋಟಲ್ ಗ್ಯಾಸ್ ಶೇಕಡ 302ರಷ್ಟು ಏರಿಕೆಯಾಗಿದೆ.
ಅದಾನಿ ವಿಲ್ಮರ್ ಸ್ಟಾಕ್ ಶೇಕಡ 0.17ರಷ್ಟು ಲಾಭ ಗಳಿಸಿದ್ದು, 382.60 ರೂಪಾಯಿ ಆಗಿದೆ. ಅದಾನಿ ವಿಲ್ಮಾರ್ ಮಾರುಕಟ್ಟೆ ಮೌಲ್ಯವು 49,933.65 ಕೋಟಿ ರೂಪಾಯಿ ಆಗಿದೆ. ಅದಾನಿ ವಿಲ್ಮರ್ ವರ್ಷದಿಂದ ವರ್ಷಕ್ಕೆ ಶೇಕಡ 36 ರಷ್ಟು ಇಳಿದಿದ್ದು, ಕಳೆದ 1 ವರ್ಷದಲ್ಲಿ ಮತ್ತೆ ಶೇಕಡ 48ರಷ್ಟು ಕುಸಿತ ಕಂಡಿದೆ.
ಅದಾನಿ ಆದಾಯ ಎಷ್ಟಿದೆ ನೋಡಿ
ಶುಕ್ರವಾರ, ಆಗಸ್ಟ್ 18, 2023 ರಂದು ಎಲ್ಲಾ ಅದಾನಿ ಗ್ರೂಪ್ ಷೇರುಗಳು ಗಗನಕ್ಕೇರಿದೆ. ಎಲ್ಲಾ ಅದಾನಿ ಗ್ರೂಪ್ ಷೇರುಗಳು ಏರಿಕೆಯಾದ ಬಳಿಕ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ನಿವ್ವಳ ಮೌಲ್ಯವು 1.4 ಬಿಲಿಯನ್ ಯುಎಸ್ ಡಾಲರ್ ಅಥವಾ 140 ಕೋಟಿ ರೂಪಾಯಿಗಳಷ್ಟು ಏರಿಕೆಯಾಗಿದೆ.
ಮೇ 24, 2023 ರ ವರದಿಯ ಪ್ರಕಾರ, ಅದಾನಿ 64.2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಹಾಗೆಯೇ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ 18 ನೇ ಸ್ಥಾನವನ್ನು ಹೊಂದಿದ್ದಾರೆ. ಅದಾನಿ ನಿವ್ವಳ ಮೌಲ್ಯವು 4.38 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ದಿನದ ಆರಂಭದಲ್ಲಿ ಅದಾನಿ ಗ್ರೂಪ್ ಷೇರುಗಳು ಏರಿಕೆ ಕಂಡವು. ಇಂದು ಗೌತಮ್ ಅದಾನಿ ನಿವ್ವಳ ಮೌಲ್ಯ ಏರಿಕೆಯಾದರೂ ಕೂಡಾ ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಉಳಿಸಿಕೊಂಡಿದ್ದಾರೆ.
ಗಮನಿಸಿ: ಅದಾನಿ ಗ್ರೂಪ್ ಷೇರುಗಳು ಶುಕ್ರವಾರದಂದು ಗಗನಕ್ಕೇರಿದ ನಂತರ ಇಂದು ಮತ್ತೆ ಏರಿಕೆ ಕಂಡಿದೆ. ಈ ಲೇಖನದ ಆಧಾರದ ಮೇಲೆ ನೀವು ತೆಗೆದುಕೊಂಡ ನಿರ್ಧಾರಗಳ ಪರಿಣಾಮದಿಂದ ಉಂಟಾಗುವ ಯಾವುದೇ ನಷ್ಟಗಳಿಗೆ ಗ್ರೇನಿಯಮ್ ಮಾಹಿತಿ ತಂತ್ರಜ್ಞಾನಗಳು ಮತ್ತು ಲೇಖಕರು ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಜ್ಞರೊಂದಿಗೆ ಸಲಹೆ ಪಡೆಯುವಂತೆ ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications