ಜಾಗತೀಕರಣದ ನಂತರ ಈ ವಿಶ್ವ ಕಂಡ ಅತ್ಯಂತ ಭೀಕರ ಕಾಯಿಲೆ ಕೊರೊನಾ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಸದ್ಯಕ್ಕೆ ಇಡೀ ವಿಶ್ವದ ಆರ್ಥಿಕತೆ ಮೇಲೆ ಇದರ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರ ನಡೆದಿದೆ. ಕೊರೊನಾಗೆ ಈ ತನಕ 3 ಸಾವಿರ ಮಂದಿ ಸಾವನ್ನಪ್ಪಿದ್ದರೆ, 80 ಸಾವಿರ ಕೊರೊನಾ ಪ್ರಕರಣಗಳು ಅಧಿಕೃತವಾಗಿಯೇ ಕಂಡುಬಂದಿವೆ.
ಆಕ್ಸ್ ಫರ್ಡ್ ಅರ್ಥಶಾಸ್ತ್ರ ವಿಭಾಗದವರ ಲೆಕ್ಕಾಚಾರದ ಪ್ರಕಾರ ಹೇಳಬೇಕೆಂದರೆ, ಜಾಗತಿಕ ಜಿಡಿಪಿಯ 1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಕೊಚ್ಚಿಹೋಗಿದೆ. ಇದನ್ನು ಭಾರತೀಯ ರುಪಾಯಿಗಳಲ್ಲಿ ಹೇಳಬೇಕೆಂದರೆ, 71 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೊತ್ತ.
ಕೊರೊನಾ ಭೀತಿ ಕಾರಣಕ್ಕೆ ಉದ್ಯೋಗಿಗಳು ರಜಾ ತೆಗೆದುಕೊಂಡಿರುವುದು, ಉತ್ಪಾದನೆ ಕುಸಿತ, ಪ್ರವಾಸಗಳಲ್ಲಿ ಇಳಿಮುಖ, ಪೂರೈಕೆ ಕುಂಠಿತ, ವ್ಯಾಪಾರ- ಹೂಡಿಕೆಯಲ್ಲಿ ಇಳಿಕೆ ಇತ್ಯಾದಿ ಕಾರಣಗಳನ್ನೆಲ್ಲ ಪಟ್ಟಿ ಮಾಡಿಕೊಂಡು, ಇವೆಲ್ಲದರ ಪರಿಣಾಮವಾಗಿ ಜಾಗತಿಕ ಜಿಡಿಪಿಗೆ ಇಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಷೇರು ಮಾರುಕಟ್ಟೆ ಹೂಡಿಕೆದಾರರು ಆತಂಕಕ್ಕೆ ಗುರಿಯಾಗಿದ್ದಾರೆ. ಷೇರು ಮಾರುಕಟ್ಟೆ ಸೂಚ್ಯಂಕಗಳು ನಷ್ಟ ಕಂಡಿವೆ. ಇನ್ನು ಕೇಂದ್ರ ಬ್ಯಾಂಕ್ ಗಳು ಮತ್ತು ಸರ್ಕಾರಗಳು ಹೇಳುವ ಪ್ರಕಾರ, ಕೊರೊನಾದಿಂದ ವಿಶ್ವ ಆರ್ಥಿಕತೆಗೆ ಹೆಚ್ಚಿನ ಧಕ್ಕೆ ಇಲ್ಲ. ಕಾಯಿಲೆ ಇಳಿಮುಖವಾಗಿ, ನಿಯಂತ್ರಣಕ್ಕೆ ಬಂದ ತಕ್ಷಣ ಮತ್ತೆ ವಿಶ್ವಾಸ ಮೂಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.


Click it and Unblock the Notifications