ಎರಡು ದಿನಗಳ ಕಾಲ ಗೋ ಫಸ್ಟ್ ವಿಮಾನಗಳನ್ನು ರದ್ದು ಮಾಡಲಾಗಿದೆ. ಮೇ 3 ಮತ್ತು ಮೇ 4ರಂದು ನಿಗದಿಪಡಿಸಿದ್ದ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಗೋ ಫಸ್ಟ್ ತಿಳಿಸಿದೆ. ಇಂಜಿನ್‌ಗಳನ್ನು ಸರಬರಾಜು ಮಾಡದಿರುವ ಬಗ್ಗೆ ಏರ್‌ಲೈನ್ಸ್ ವಿಮಾನ ಎಂಜಿನ್ ತಯಾರಕರಾದ ಪ್ರಾಟ್ ಮತ್ತು ವಿಟ್ನಿ ವಿರುದ್ಧ ಮಂಗಳವಾರ, ಮೇ 2 ರಂದು, ಯುಎಸ್ ನ್ಯಾಯಾಲಯದಲ್ಲಿ ತುರ್ತು ಅರ್ಜಿಯನ್ನು ಸಲ್ಲಿಸಿದೆ ಎಂದು ವರದಿಯಾಗಿದೆ.
ಯುಎಸ್ ಮೂಲದ ಜೆಟ್ ಇಂಜಿನ್ ಉತ್ಪಾದಕರಾದ ಪ್ರಾಟ್ ಮತ್ತು ವಿಟ್ನಿ ಇಂಜಿನ್‌ಗಳನ್ನು ಸರಬರಾಜು ಮಾಡದ ಕಾರಣದಿಂದಾಗಿ ವಿಮಾನಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಗೋ ಫಸ್ಟ್ ವಿಮಾನಯಾನ ಸಂಸ್ಥೆಯು ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗೋ ಫಸ್ಟ್ ಅಧಿಕಾರಿಗಳು ನೀಡಿದ್ದಾರೆ.

"ಯುಎಸ್ ಮೂಲದ ಜೆಟ್ ಇಂಜಿನ್ ಉತ್ಪಾದಕರಾದ ಪ್ರಾಟ್ ಮತ್ತು ವಿಟ್ನಿ (P&W) ಇಂಜಿನ್‌ಗಳನ್ನು ಸರಬರಾಜು ಮಾಡದ ಕಾರಣ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಇದರಿಂದಾಗಿ 50ಕ್ಕೂ ಅಧಿಕ ವಿಮಾನಗಳನ್ನು ರದ್ದು ಮಾಡಬೇಕಾಗಿದೆ," ಎಂದು ಸುದ್ದಿ ಸಂಸ್ಥೆಗೆ ಗೋ ಫಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಡಿಜಿಸಿಎಯ ಅಂಕಿಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ ಏರ್‌ಲೈನ್‌ನ ಮಾರುಕಟ್ಟೆ ಪಾಲು ಒಂದು ವರ್ಷದ ಹಿಂದೆ ಒಂದು ವರ್ಷದ ಹಿಂದೆ ಶೇಕಡ 9.8 ಆಗಿದ್ದು, ಈಗ ಶೇಕಡ 6.9 ಆಗಿದೆ.
ಈ ಸಂದರ್ಭದಲ್ಲೇ ಗೋ ಫಸ್ಟ್ ವೆಬ್‌ಸೈಟ್‌ನಲ್ಲಿ ಮೇ 3 ರಂದು ದೆಹಲಿ-ಮುಂಬೈ ಮಾರ್ಗದಲ್ಲಿ ಯಾವುದೇ ವಿಮಾನವನ್ನು ತೋರಿಸುತ್ತಿಲ್ಲ. ಹಾಗೆಯೇ ಎಲ್ಲಾ ಮುಂಬೈ-ದೆಹಲಿ ವಿಮಾನಗಳನ್ನು ಮೇ 4 ಕ್ಕೆ "ಸೋಲ್ಡ್ ಔಟ್" ಎಂದು ತೋರಿಸುತ್ತದೆ. ಬುಧವಾರ ಮತ್ತು ಗುರುವಾರಕ್ಕೆ ಯಾವುದೇ ಬುಕ್ಕಿಂಗ್ ಅನ್ನು ವಿಮಾನಯಾನ ಸಂಸ್ಥೆಯು ಸ್ವೀಕಾರ ಮಾಡುತ್ತಿಲ್ಲ. ಈ ಎರಡು ದಿನಗಳ ಅವಧಿಗೆ ಕೆಲವು ವಿಮಾನಯಾನ ಪೋರ್ಟಲ್‌ಗಳಲ್ಲಿ ಗೋ ಫಸ್ಟ್ ಆಯ್ಕೆ ಲಭ್ಯವಾಗುತ್ತಿಲ್ಲ.
ವಿಮಾನ ರದ್ದು ಮಾಡಿರುವುದಕ್ಕೆ ಪ್ರಯಾಣಿಕರ ಪ್ರತಿಕ್ರಿಯೆ ಹೇಗಿದೆ?
ಗೋ ಫಸ್ಟ್ ವಿಮಾನವನ್ನು ಬುಕ್ ಮಾಡಿಕೊಂಡಿದ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರ್ವ ನೋಟಿಸ್ ಅಥವಾ ಮಾಹಿತಿಯನ್ನು ನೀಡದೆಯೇ ವಿಮಾನವನ್ನು ರದ್ದು ಮಾಡಲಾಗಿದೆ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ. ಕಾರ್ಯಾಚರಣೆಯ ಕಾರಣಗಳಿಂದಾಗಿ ವಿಮಾನವನ್ನು ರದ್ದು ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆಯು ತಿಳಿಸಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.
"ಗೋ ಫಸ್ಟ್ ವಿಮಾನಯಾನ ಸಂಸ್ಥೆಯ ಅತ್ಯಂತ ವೃತ್ತಿಪರವಲ್ಲದ ನಡೆ ಇದಾಗಿದೆ. ನನಗೆ 24 ಗಂಟೆಗೂ ಮುನ್ನವೇ ಯಾವುದೇ ಮಾಹಿತಿಯನ್ನು ನೀಡದೆಯೇ ನಾನು ಪ್ರಯಾಣ ಮಾಡಲಿದ್ದ ದೆಹಲಿ- ಹೈದಾರಾಬಾದ್ ವಿಮಾನವನ್ನು ಕಾರ್ಯಾಚರಣೆಯ ಕಾರಣವನ್ನು ನೀಡಿ ಗೋ ಫಸ್ಟ್ ವಿಮಾನಯಾನ ಸಂಸ್ಥೆಯು ರದ್ದು ಮಾಡಿದೆ. ಯಾವುದೇ ರಿಫಂಡ್ ಅನ್ನು ಮಾಡಿಲ್ಲ, ಹಾಗೆಯೇ ಮುಂದಿನ ಬುಕ್ಕಿಂಗ್ ಆಯ್ಕೆಯನ್ನು ಕೂಡಾ ನೀಡಿಲ್ಲ," ಎಂದು ಟ್ವಿಟ್ಟರ್ ಬಳಕೆದಾರ ಪ್ರಖಾರ್ ಶುಕ್ಲಾ ತಿಳಿಸಿದ್ದಾರೆ.
ಪ್ರವಾಸ ನಿರ್ವಹಣೆ ಕಾರ್ಯವನ್ನು ಮಾಡಲು ಅನುಜ್ ಶರ್ಮಾ ಎಂಬವರು ಕೂಡಾ ಅಸಮಾಧಾನವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. "ನಾನು ಗೋ ಫಸ್ಟ್‌ನಲ್ಲಿ ಲೇಹ್‌ನಿಂದ ಜಮ್ಮುವಿಗೆ 17 ಟಿಕೆಟ್‌ಗಳನ್ನು ಬುಕ್ ಮಾಡಿದ್ದೆ. ಮೇ 3ರಂದು ಬೆಳಿಗ್ಗೆ 8:30ಗೆ ವಿಮಾನವಿತ್ತು. ಆದರೆ ನನಗೆ ಈಗ ಕರೆ ಬಂದಿದೆ. ಗೋ ಫಸ್ಟ್ ವಿಮಾನವನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ನಾವು ದಿಡೀರ್ ಆಗಿ ಹೇಗೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ," ಎಂದು ಪ್ರಶ್ನಿಸಿದ್ದಾರೆ.
ಮಾರ್ಚ್‌ನಲ್ಲಿ ಶೂನ್ಯ ಪ್ರಯಾಣಿಕರ ದೂರು
ಮಾರ್ಚ್ ತಿಂಗಳಿನಲ್ಲಿ ಗೋ ಫಸ್ಟ್ ವಿರುದ್ಧ ಯಾವುದೇ ಪ್ರಯಾಣಿಕರ ದೂರು ಬಂದಿಲ್ಲ. ಸಂಸ್ಥೆಯು ಶೂನ್ಯ ದೂರನ್ನು ಹೊಂದಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿದ ಕೆಲವು ದಿನಗಳಲ್ಲಿ ಗೋ ಫಸ್ಟ್ ವಿಮಾನವನ್ನು ರದ್ದು ಮಾಡಬೇಕಾದ ಸ್ಥಿತಿ ಉಂಟಾಗಿದೆ. ಪ್ರಸ್ತುತ ಸಂಸ್ಥೆಯ ವಿರುದ್ದ ಸಾಕಷ್ಟು ದೂರುಗಳು ಕೇಳಿಬರುತ್ತಿದೆ.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್‌ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications