Gold And Silver Rate: ಎಂಸಿಎಕ್ಸ್ ನಲ್ಲಿ ಇಳಿಕೆ ಕಂಡ ಚಿನ್ನ, ಬೆಳ್ಳಿ

ಜಾಗತಿಕ ಪ್ರಭಾವದ ಕಾರಣಕ್ಕೆ ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬುಧವಾರ (ಡಿಸೆಂಬರ್ 2, 2020) ಇಳಿಕೆ ಆಗಿದೆ. ಎಂಸಿಎಕ್ಸ್ ನಲ್ಲಿ ಫೆಬ್ರವರಿ ಚಿನ್ನದ ಫ್ಯೂಚರ್ಸ್ 0.24% ಇಳಿಕೆ ಆಗಿ, ಪ್ರತಿ 10 ಗ್ರಾಮ್ ಗೆ 48,449 ರುಪಾಯಿಗೆ ತಲುಪಿದೆ. ಪ್ರತಿ 1 ಕೇಜಿ ಬೆಳ್ಳಿ ಬೆಲೆ 62,559 ರುಪಾಯಿ ಮುಟ್ಟಿದೆ.

ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕಳೆದ ಸೆಷನ್ ಏರಿಕೆ ಕಂಡಿತ್ತು. ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಮ್ ಗೆ 1.4 ಪರ್ಸೆಂಟ್ ಅಥವಾ 700 ರುಪಾಯಿ ಹಾಗೂ ಬೆಳ್ಳಿ ಬೆಲೆಯಲ್ಲಿ 3,000 ರುಪಾಯಿ ಹೆಚ್ಚಳವಾಗಿತ್ತು. ಚಿನ್ನದ ದರವು ಕಳೆದ ಆಗಸ್ಟ್ ನಲ್ಲಿ 56,200 ರುಪಾಯಿ ತಲುಪಿದ ನಂತರ ಇಳಿಮುಖದ ಹಾದಿಯಲ್ಲಿ ಸಾಗುತ್ತಿದೆ.

ಬೆಲೆ ಬಾಳುವ ಇತರ ಲೋಹಗಳ ಬೆಲೆ ಎಷ್ಟು?

ಬೆಲೆ ಬಾಳುವ ಇತರ ಲೋಹಗಳ ಬೆಲೆ ಎಷ್ಟು?

ಈ ಹಿಂದಿನ ಸೆಷನ್ ನಲ್ಲಿ 2%ಗೂ ಹೆಚ್ಚು ಏರಿಕೆ ಕಂಡ ಮೇಲೆ ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಕೊರೊನಾ ಲಸಿಕೆಗೆ ಅನುಮತಿ ಸಿಗಬಹುದು ಹಾಗೂ 2021ರಲ್ಲಿ ಆರ್ಥಿಕತೆ ಚೇತರಿಕೆ ಕಾಣಿಸಬಹುದು ಎಂಬ ಭರವಸೆ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಮತ್ತೊಂದು ಕಡೆ ಯು.ಎಸ್.ನಲ್ಲಿ ಆರ್ಥಿಕ ಉತ್ತೇಜನಾ ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿ ಚಿನ್ನದ ದರಕ್ಕೆ ಬೆಂಬಲ ನೀಡುತ್ತಿದೆ. ಸ್ಮಾಟ್ ಗೋಲ್ಡ್ ದರವು ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.1% ಇಳಿಕೆ ಕಂಡು, $ 1,813.75ಗೆ ತಲುಪಿದೆ. ಇತರ ಬೆಲೆಬಾಳುವ ಲೋಹಗಳಲ್ಲಿ ಬೆಳ್ಳಿ ದರ ಪ್ರತಿ ಔನ್ಸ್ ಗೆ 0.5% ಇಳಿದು, $ 23.89ರಂತೆ ವಹಿವಾಟು ನಡೆಸಿದೆ. ಪ್ಲಾಟಿನಂ 0.6% ಕುಸಿದು, $ 994ನಲ್ಲಿ ಇದೆ ಮತ್ತು ಪಲಾಡಿಯಂ 0.4% ಕುಸಿದು, $ 2397.00 ತಲುಪಿದೆ.

2020ರ ಜೂನ್ ನಂತರದಲ್ಲಿ ಕನಿಷ್ಠ ಮಟ್ಟದಲ್ಲಿದೆ

2020ರ ಜೂನ್ ನಂತರದಲ್ಲಿ ಕನಿಷ್ಠ ಮಟ್ಟದಲ್ಲಿದೆ

"ಕಳೆದ ಕೆಲವು ವಾರಗಳಿಂದ ಚಿನ್ನವು ಇಳಿಕೆ ಹಾದಿಯಲ್ಲಿದೆ. 2020ರ ಜೂನ್ ನಂತರದಲ್ಲಿ ಕನಿಷ್ಠ ಮಟ್ಟದಲ್ಲಿದೆ. ಲಸಿಕೆಯಲ್ಲಿ ಪ್ರಗತಿ ಮತ್ತು ಯು.ಎಸ್.ನಲ್ಲಿ ಅಧ್ಯಕ್ಷೀಯ ಚುನಾವಣೆ ನಂತರ ಸುಲಭವಾಗಿ ಅಧಿಕಾರ ಹಸ್ತಾಂತರ ಆಗಬಹುದು ಎಂಬ ಕಾರಣಕ್ಕೆ ಚಿನ್ನದ ಬೇಡಿಕೆ ಕಡಿಮೆ ಆಗಿದೆ. ಇನ್ನು ಇಟಿಎಫ್ ಹೊರಹರಿವು ದತ್ತಾಂಶ ಸೂಚಿಸುವಂತೆ ಹೂಡಿಕೆದಾರರು ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ," ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಯುಎಸ್ ಡಾಲರ್ ದುರ್ಬಲವಾಗಿರುವುದರ ಮಧ್ಯೆಯೂ ಚಿನ್ನವು ಒತ್ತಡದಲ್ಲಿದೆ. ಪ್ರಮುಖ ಆರ್ಥಿಕತೆಯಲ್ಲಿ ಮಿಶ್ರ ಆರ್ಥಿಕ ದತ್ತಾಂಶಗಳು, ಕೊರೊನಾ ವೈರಾಣು ಸನ್ನಿವೇಶ ಮತ್ತು ಹೆಚ್ಚುವರಿ ಉತ್ತೇಜನ ಕ್ರಮಗಳ ಘೋಷಣೆ ಭರವಸೆ ಇದೆ," ಎಂದು ಹೇಳಲಾಗಿದೆ.

ಚಿನ್ನದ ಇಟಿಎಫ್ ಹೊರಹರಿವು

ಚಿನ್ನದ ಇಟಿಎಫ್ ಹೊರಹರಿವು

ಈಚಿನ ಬೆಲೆ ಕುಸಿತದ ಮಧ್ಯೆಯೂ ಚಿನ್ನದ ಇಟಿಎಫ್ ಹೊರಹರಿವು ಕಂಡುಬಂದಿದೆ. ವಿಶ್ವದ ಅತಿ ದೊಡ್ಡ ಚಿನ್ನ ಬೆಂಬಲಿತ ಎಸ್ ಪಿಡಿಆರ್ ಗೋಲ್ಡ್ ಟ್ರಸ್ಟ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಅಥವಾ ಚಿನ್ನದ ಇಟಿಎಫ್ ಹೋಲ್ಡಿಂಗ್ಸ್ ಸೋಮವಾರ 1194.78 ಟನ್ ಇದ್ದದ್ದು ಮಂಗಳವಾರ 1191.28 ಟನ್ ಗೆ ಕುಸಿದಿದೆ. ಇನ್ನು ಮಾಡೆರ್ನಾ ಹಾಗೂ ಪಿಫೈಜರ್- ಬಯೋನ್ ಟೆಕ್ ಎರಡೂ ಕೂಡ ಕೊರೊನಾ ಲಸಿಕೆಗೆ ತುರ್ತು ಮಂಜೂರಾತಿಗಾಗಿ ಕೇಳಿಕೊಂಡಿವೆ. "ಚಿನ್ನದ ಬೆಲೆಯ ತೀಕ್ಷ್ಣ ಕುಸಿತವು ಮಾರುಕಟ್ಟೆ ಭಾವನೆಗೆ ತೀವ್ರ ಘಾಸಿಯಾಗಿದೆ. ಆದರೂ ಮಿಶ್ರ ಸಂಗತಿಗಳಿವೆ. ಹೊಸದಾಗಿ 'ಶಾರ್ಟ್' ಮಾಡುವ ಮುನ್ನ ಮೇಲೇರುವುದಕ್ಕೆ ಕಾಯಬೇಕು ಎನ್ನುತ್ತಾರೆ ವಿಶ್ಲೇಷಕರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+