ಸತತವಾಗಿ ಮೂರು ದಿನಗಳ ಕಾಲ ಇಳಿಕೆಯಾಗಿದ್ದ 22 ಕ್ಯಾರೆಟ್‌ನ ಚಿನ್ನದ ದರವು ಇಂದು ಸ್ಥಿರವಾಗಿದೆ. ಆದರೆ 24 ಕ್ಯಾರೆಟ್ ಚಿನ್ನವು ಕಳೆದ ನಾಲ್ಕು ದಿನಗಳಿಂದ ಇಳಿಕೆ ಕಾಣುತ್ತಿದೆ. ನಾವು ಇಂದಿನ ದರ ಪರಿಷ್ಕರಣೆಯನ್ನು ನೋಡಿದಾಗ, 22 ಕ್ಯಾರೆಟ್ ಬೆಲೆ ಸ್ಥಿರ, 24 ಕ್ಯಾರೆಟ್ ಬೆಲೆ ಕೊಂಚ ಇಳಿಕೆಯಾಗಿದೆ. ಆದರೆ ಬಹುತೇಕ ನಗರದಲ್ಲಿ ಎರಡೂ ಶುದ್ಧತೆಯ ಬಂಗಾರ ದರ ಇಳಿಕೆಯಾಗಿದೆ. ಇನ್ನು ಆಗಸ್ಟ್ 5ರಂದು ಗೋಲ್ಡ್ ರೇಟ್ ಏರಿಕೆಯಾಗಿದ್ದು ಅದಾದ ಬಳಿಕ ದರ ಹೆಚ್ಚಳವಾಗಿಲ್ಲ.
ಇನ್ನು ಬೆಳ್ಳಿ ದರವು ಕೂಡಾ ಬಂಗಾರದಂತೆ ನಿರಂತರವಾಗಿ ಇಳಿಕೆ ಕಾಣುತ್ತಾ ಬರುತ್ತಿದೆ. ಸತತವಾಗಿ ನಾಲ್ಕು ದಿನಗಳಿಂದ ಸಿಲ್ವರ್ ರೇಟ್ ಕುಸಿತ ಕಂಡಿದ್ದು, ಆದರೆ ಇಂದು ಸ್ಥಿರವಾಗಿದೆ. ಒಟ್ಟಾಗಿ 4 ದಿನದಲ್ಲಿ 2100 ರೂಪಾಯಿ ಕುಗ್ಗಿದೆ. ಆಗಸ್ಟ್ 5ರಂದು ಬೆಳ್ಳಿ ಬೆಲೆ ಏರಿಕೆಯಾಗಿದ್ದು ಅದಾದ ಬಳಿಕ ಹೆಚ್ಚಳವಾಗಿಲ್ಲ. ಏರಿಕೆಗಿಂತ ಅಧಿಕ ದರ ಇಳಿಕೆ ಕಂಡು ಬಂದಿದೆ.

ಭಾರತದಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
ನಿನ್ನೆ ಇಳಿಕೆಯಾಗಿದ್ದ ಬಂಗಾರ ದರವು ಇಂದು ಮತ್ತೆ ಸ್ಥಿರವಾಗಿದೆ. ಕಳೆದ ಐದು ದಿನದಲ್ಲಿ3 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 2 ಬಾರಿ ಬಂಗಾರ ದರವು ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 5 ಬಾರಿ ಇಳಿಕೆಯಾಗಿದ್ದರೆ 1 ಬಾರಿ ಏರಿಕೆಯಾಗಿದೆ. 4 ಬಾರಿ ಸ್ಥಿರವಾಗಿದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 1 ಬಾರಿ ಬೆಳ್ಳಿ ಬೆಲೆ ಏರಿದ್ದು 2 ಬಾರಿ ಸ್ಥಿರವಾಗಿದೆ. 7 ಬಾರಿ ಇಳಿಕೆಯಾಗಿದೆ.
Gold Rate Today: ಸತತ ಮೂರನೇ ದಿನ ಬಂಗಾರ ದರ ಇಳಿಕೆ, ಪ್ರಸ್ತುತ ಎಷ್ಟಿದೆ?
ಆಗಸ್ಟ್ 11ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಯಥಾಸ್ಥಿತಿ ಕಾಯ್ದುಕೊಂಡಿದ್ದು 54,700 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 160 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 59,510 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಸ್ಥಿರವಾಗಿದ್ದು ಪ್ರಸ್ತುತ 73,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಆಗಸ್ಟ್ 11ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 58930.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 70050.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.10ರಷ್ಟು ಏರಿಕೆ ಕಂಡಿದ್ದು 1,918.86 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.47ರಷ್ಟು ಕುಗ್ಗಿದ್ದು 22.8 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (-160 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 54,700 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (-160 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 54,700 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,660 ರೂಪಾಯಿ (-160 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (-160 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (-160 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 54,550 ರೂಪಾಯಿ (-150 ರೂಪಾಯಿ)
24 ಕ್ಯಾರೆಟ್ ಚಿನ್ನ: 59,510 ರೂಪಾಯಿ (-160 ರೂಪಾಯಿ)


Click it and Unblock the Notifications