2 ದಿನದಲ್ಲಿ ಕೇಜಿಗೆ 2500 ರುಪಾಯಿ ಕುಸಿದ ಬೆಳ್ಳಿಯ ದರ; ಚಿನ್ನದಲ್ಲೂ ಇಳಿಕೆ

ಭಾರತದಲ್ಲಿ ಸತತ ಎರಡನೇ ದಿನವಾದ ಬುಧವಾರ (ಅಕ್ಟೋಬರ್ 7, 2020) ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಕೊರೊನಾ ಆರ್ಥಿಕ ಉತ್ತೇಜನದ ಬಗ್ಗೆ ಡೆಮಾಕ್ರಟ್ ಜತೆಗಿನ ಮಾತುಕತೆ ಅಮಾನತು ಮಾಡಿದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಕುಸಿದಿದೆ.

ಭಾರತದ ಎಂಸಿಎಕ್ಸ್ ನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ ದರದಲ್ಲಿ 0.9% ಇಳಿದು, ಪ್ರತಿ 10 ಗ್ರಾಮ್ ಗೆ 50,888 ರುಪಾಯಿಗೆ ವಹಿವಾಟು ನಡೆಸಿತು. ಬೆಳ್ಳಿ ಫ್ಯೂಚರ್ಸ್ 1.5% ಇಳಿದು, 59,658 ರುಪಾಯಿ ತಲುಪಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರದಲ್ಲಿ 0.32% ಕುಸಿದರೆ, ಬೆಳ್ಳಿಯ ದರದಲ್ಲಿ ಪ್ರತಿ ಕೇಜಿಗೆ 1450 ರುಪಾಯಿ ಇಳಿದಿತ್ತು.

ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ ಡಾಲರ್ ಸೂಚ್ಯಂಕ ಏರಿಕೆ

ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ ಡಾಲರ್ ಸೂಚ್ಯಂಕ ಏರಿಕೆ

ಆರ್ಥಿಕ ಉತ್ತೇಜನಾ ಪ್ಯಾಕೇಜ್ ಬಗೆಗಿನ ಮಾತುಕತೆಯನ್ನು ಡೊನಾಲ್ಡ್ ಟ್ರಂಪ್ ದಿಢೀರ್ ನಿಲ್ಲಿಸಿದ ಕಾರಣಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರವು ನಿಂತುಬಿಟ್ಟಿತು. ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್ ಗೆ (28.3495) $ 1877.15ರಂತೆ ವಹಿವಾಟು ನಡೆಸಿತು. ಈ ಹಿಂದಿನ ಸೆಷನ್ ಗೆ ಹೋಲಿಸಿದಲ್ಲಿ 2% ಕುಸಿತ ಕಂಡಿತು. ಇನ್ನು ಡಾಲರ್ ಮೌಲ್ಯ ಬಲಗೊಳ್ಳುತ್ತಿದ್ದಂತೆ ಅದು ಕೂಡ ಚಿನ್ನದ ದರಕ್ಕೆ ಸಮಸ್ಯೆ ತಂದೊಡ್ಡಿತು. ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ ಡಾಲರ್ ಸೂಚ್ಯಂಕವು 0.2% ಏರಿಕೆ ಕಂಡಿತು. ಇನ್ನು ಉಳಿದ ಬೆಲೆ ಬಾಳುವ ಲೋಹಗಳ ಬಗ್ಗೆ ಹೇಳುವುದಾದರೆ, ಬೆಳ್ಳಿ 0.7% ಹೆಚ್ಚಳವಾಗಿ ಪ್ರತಿ ಔನ್ಸ್ ಗೆ $ 23.25, ಪ್ಲಾಟಿನಂ 1% ಏರಿಕೆ ಕಂಡು, $ 856.51ರಲ್ಲಿ ಹಾಗೂ ಪಲಾಡಿಯಂ 0.1% ಕುಸಿದ್ಯ್ $ 2339.81ರಲ್ಲಿ ವಹಿವಾಟು ನಡೆಸಿದೆ.

ಆರ್ಥಿಕ ಉತ್ತೇಜನಾ ಘೋಷಣೆ ಮಾತುಕತೆ ಬಂದ್

ಆರ್ಥಿಕ ಉತ್ತೇಜನಾ ಘೋಷಣೆ ಮಾತುಕತೆ ಬಂದ್

ಯುರೋಪ್ ನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಹಾಗೂ ಯಾವುದೇ ಒಪ್ಪಂದ ಇಲ್ಲದೆ ಬ್ರೆಕ್ಸಿಟ್ ಆಗಿಬಿಡಬಹುದು ಎಂಬ ಆತಂಕ ಇವೆಲ್ಲ ಸೇರಿ ಯುಎಸ್ ಡಾಲರ್ ಗೆ ನೆಲೆ ಒದಗಿಸಿವೆ. ಯುಎಸ್ ಡಾಲರ್ ದುರ್ಬಲವಾದಲ್ಲಿ ಚಿನ್ನಕ್ಕೆ ಅನುಕೂಲ ಆಗುತ್ತದೆ. ಅಪಾಯದ ಪ್ರಮಾಣ ಕಡಿಮೆ ಆಗಿದೆ ಎಂಬ ಭಾವವೇ ಚಿನ್ನವು ಹೂಡಿಕೆಗೆ ಸುರಕ್ಷಿತ ಎಂಬ ಆಲೋಚನೆಯನ್ನು ತಗ್ಗಿಸಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಇನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ಮೇಲೆ ಮೊದಲ ಸಭೆಯಲ್ಲೇ ಡೆಮಾಕ್ರಟಿಕ್ ಜನಪ್ರತಿನಿಧಿಗಳ ಜತೆಗೆ ಮಾತುಕತೆ ಕೊನೆ ಮಾಡಿದ್ದಾರೆ ಟ್ರಂಪ್. ಕೊರೊನಾದ ಹಿನ್ನೆಲೆಯಲ್ಲಿ ಆರ್ಥಿಕ ಉತ್ತೇಜನಾ ಕ್ರಮಗಳನ್ನು ಘೋಷಣೆ ಮಾಡಬೇಕಿತ್ತು. ಯುಎಸ್ ನಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಪರಿಹಾರ ಪ್ಯಾಕೇಜ್ ಕುರಿತು ಡೊನಾಲ್ಡ್ ಟ್ರಂಪ್ ಯಾವ ನಿರ್ಧಾರವನ್ನೂ ಮಾಡಿಲ್ಲ.

ಇಟಿಎಫ್ ಹೂಡಿಕೆದಾರರು ಖರೀದಿಯಿಂದ ದೂರ

ಇಟಿಎಫ್ ಹೂಡಿಕೆದಾರರು ಖರೀದಿಯಿಂದ ದೂರ

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಟ್ರಂಪ್, ಚುನಾವಣೆ ತನಕ ಅಥವಾ ಚುನಾವಣೆ ಆಗುವ ತನಕ ಈ ಒಪ್ಪಂದವನ್ನು ನಿಲ್ಲಿಸಿರಿ ಎಂದು ನನ್ನ ಪ್ರತಿನಿಧಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಗೆದ್ದ ತಕ್ಷಣವೇ ಪ್ರಮುಖವಾದ ಆರ್ಥಿಕ ಉತ್ತೇಜನಾ ಮಸೂದೆಯನ್ನು ಪಾಸ್ ಮಾಡಬಹುದು. ಅದು ಶ್ರಮಿಕ ಅಮೆರಿಕನ್ನರು ಹಾಗೂ ಸಣ್ಣ ಪ್ರಮಾಣದ ವ್ಯವಹಾರಸ್ಥರನ್ನು ಗಮನದಲ್ಲಿ ಇಟ್ಟುಕೊಂಡಿರುತ್ತದೆ ಎಂದಿದ್ದಾರೆ. ಈ ಮಧ್ಯೆ ಆರ್ಥಿಕತೆ ಚೇತರಿಕೆಗೆ ಹಾನಿಯನ್ನು ತಡೆಯಬೇಕು ಎಂದಾದಲ್ಲಿ ದೊಡ್ಡ ಪ್ರಮಾಣದ ಖರ್ಚು ಮಾಡಬೇಕು ಎಂದು ಎಂದು ಫೆಡರಲ್ ರಿಸರ್ವ್ ನ ಜೆರೋಮ್ ಪೊವೆಲ್ ಮನವಿ ಮಾಡಿದ್ದಾರೆ. ವಿವಿಧೆಡೆಗಳಲ್ಲಿ ಘೋಷಣೆ ಮಾಡುವ ಆರ್ಥಿಕ ಉತ್ತೇಜನಾ ಕ್ರಮಗಳಿಂದಾಗಿ ಚಿನ್ನದ ಬೆಲೆಗೆ ಅನುಕೂಲ ಆಗುತ್ತದೆ. ಇನ್ನು ಇಟಿಎಫ್ ಹೂಡಿಕೆದಾರರು ಖರೀದಿಯಿಂದ ದೂರ ಉಳಿದಿದ್ದಾರೆ. ವಿಶ್ವದ ಅತಿ ದೊಡ್ಡ ಚಿನ್ನದ ಬೆಂಬಲಿತ ಇಟಿಎಫ್ ಎಸ್ ಡಿಪಿಆರ್ ಗೋಲ್ಡ್ ಟ್ರಸ್ಟ್ 0.32% ಇಳಿದು, ಮಂಗಳವಾರ 1271.52 ಟನ್ ತಲುಪಿತು

ಚಿನ್ನದ ದರದಲ್ಲಿ ಏರಿಳಿತ ಮುಂದುವರಿಯಲಿದೆ

ಚಿನ್ನದ ದರದಲ್ಲಿ ಏರಿಳಿತ ಮುಂದುವರಿಯಲಿದೆ

ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಚಿನ್ನದ ದರದಲ್ಲಿ ಏರಿಳಿತ ಮುಂದುವರಿಯಲಿದೆ. ಯುಎಸ್ ಡಾಲರ್ ಮತ್ತು ಸಾಮಾನ್ಯ ಮಾರ್ಕೆಟ್ ನ ಅಪಾಯದ ಬಗ್ಗೆ ಇರುವ ಎಚ್ಚರಿಕೆ ಕಾರಣ ಇದು. ಭಾರತಕ್ಕೆ ಚಿನ್ನದ ಆಮದು ಸೆಪ್ಟೆಂಬರ್ ನಲ್ಲಿ 59% ಇಳಿಕೆ ಆಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಕನಿಷ್ಠ ಮಟ್ಟ ಇದು ಎಂದು ಮೂಲಗಳನ್ನು ಉದಾಹರಿಸಿ ರಾಯಿಟರ್ಸ್ ವರದಿ ಮಾಡಿದೆ. ಭಾರತದ ಅಗತ್ಯದ ಪೈಕಿ ಬಹುಪಾಲನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇನ್ನು ಮುಂದೆ ಹಬ್ಬದ ಋತು ಆರಂಭವಾಗುವುದರಿಂದ ಚಿನ್ನದ ಬೇಡಿಕೆ ಭಾರತದಲ್ಲಿ ಕುದುರಿಕೊಳ್ಳಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಆಗಸ್ಟ್ ನಲ್ಲಿ ಗರಿಷ್ಠ ಎತ್ತರ ತಲುಪಿದ್ದ ಚಿನ್ನದ ಬೆಲೆಯಲ್ಲೂ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+