ಮೊದಲ ತ್ರೈಮಾಸಿಕದಲ್ಲಿ ಚೇತರಿಕೆ ಕಂಡ ಚಿನ್ನದ ಬೇಡಿಕೆ

ರಷ್ಯಾ- ಉಕ್ರೇನ್ ಯುದ್ಧದ ನಡುವೆಯೂ ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಈ ವರ್ಷ ಉತ್ತಮ ಆರಂಭ ಕಂಡಿದೆ. ಮೊದಲ ತ್ರೈಮಾಸಿಕದಲ್ಲಿ ಬೇಡಿಕೆ (ಒಟಿಸಿ ಹೊರತುಪಡಿಸಿ) ವರ್ಷದಿಂದ ವರ್ಷಕ್ಕೆ ಶೇ.34 ರಷ್ಟು ಹೆಚ್ಚಾಗಿದೆ. ಸದೃಢ ಇಟಿಎಫ್‌ ಹರಿವಿನಿಂದ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ.

ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ಪರಿಣಾಮವಾಗಿ ಜಾಗತಿಕ ಆರ್ಥಿಕತೆಯ ಮೇಲೆ ಹೆಚ್ಚು ಹೊರೆ ಉಂಟಾಗಿತ್ತು. ಇದರಿಂದ ಹೂಡಿಕೆದಾರರು ಹೆಚ್ಚಿನ ಹೂಡಿಕೆ ಮಾಡಲು ಆಸಕ್ತಿ ತೋರಿರಲಿಲ್ಲ. ಮಾರ್ಚ್‌ನಲ್ಲಿ ಚಿನ್ನದ ಬೆಲೆ 2,070 ಅಮೆರಿಕನ್‌ ಡಾಲರ್‌ಗೆ ಏರಿಕೆಯಾಗಿತ್ತು. ಇದು ಇಲ್ಲಿಯವರೆಗಿನ ಸಾರ್ವಕಾಲಿಕ ಏರಿಕೆಗೆ ಕಾರಣವಾಗಿತ್ತು. ವಿಶ್ವ ಚಿನ್ನ ಪರಿಷತ್ತಿನ ಇತ್ತೀಚಿನ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್‌ಗಳ ವರದಿ ಪ್ರಕಾರ, ಚಿನ್ನದ ಇಟಿಎಫ್‌ಗಳು 2020 ರ 3ನೇ ತ್ರೈಮಾಸಿಕದಿಂದ 269 ಟನ್‌ ಒಳಹರಿವು ದಾಖಲಿಸಿದ್ದು, ಇದು 2021 ರಿಂದ 173 ಟನ್‌ನ ವಾರ್ಷಿಕ ನಿವ್ವಳ ಹೊರಹರಿವಿನ ದಾಖಲೆಯನ್ನು ಮುರಿದಿದೆ.

ಈ ನಡುವೆ, ಚಿನ್ನದ ಬಾರ್ ಮತ್ತು ನಾಣ್ಯದ ಬೇಡಿಕೆಯು 282 ಟನ್‌ಗೆ ತಲುಪಿದ್ದು, 2021 ರ ಅತ್ಯುತ್ತಮ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ, ಇದು ಐದು ವರ್ಷಗಳ ಸರಾಸರಿಗಿಂತ ಶೇ. 11 ರಷ್ಟು ಹೆಚ್ಚಿದೆ. ಆದಾಗ್ಯೂ ಚೀನಾದಲ್ಲಿ ನವೀಕರಿಸಲಾದ ಲಾಕ್‌ಡೌನ್‌ ಗಳು ಮತ್ತು ಟರ್ಕಿಯಲ್ಲಿನ ಹೆಚ್ಚಿನ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇ. 20 ರಷ್ಟು ಕುಸಿತಕ್ಕೆ ಕಾರಣವಾಗಿವೆ.

ಭಾರತದಲ್ಲಿನ ಕಡಿಮೆ ಬೇಡಿಕೆ ಕಾರಣ

ಭಾರತದಲ್ಲಿನ ಕಡಿಮೆ ಬೇಡಿಕೆ ಕಾರಣ

ಆಭರಣ ವಲಯದಲ್ಲಿ, ಜಾಗತಿಕ ಚಿನ್ನದ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಶೇ.7 ರಷ್ಟು ಕುಸಿದು 474 ಟನ್‌ಗೆ ತಲುಪಿದೆ. ಇದಕ್ಕೆ ಮುಖ್ಯ ಕಾರಣ, ಚೀನಾ ಮತ್ತು ಭಾರತದಲ್ಲಿನ ಕಡಿಮೆ ಬೇಡಿಕೆ ಕಾರಣವಾಗಿದೆ. ಹೊಸ ವರ್ಷದಲ್ಲಿ ಚೀನಾದಲ್ಲಿ ಉತ್ತಮ ಬೇಡಿಕೆ ವ್ಯಕ್ತವಾದರೂ, ನಂತರ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕೋವಿಡ್ ಕಾರಣದಿಂದ ಬೇಡಿಕೆ ಏಕಾಏಕಿ ಕಡಿಮೆಯಾಯಿತು. ಸದ್ಯ ಚೀನಾ ಶೂನ್ಯ-ಕೋವಿಡ್‌ ನೀತಿ ಅನುಸರಿಸುತ್ತಿದೆ.

ಮದುವೆ ಸಮಾರಂಭಗಳ  ಸಂಖ್ಯೆಯ ಕುಸಿತ

ಮದುವೆ ಸಮಾರಂಭಗಳ ಸಂಖ್ಯೆಯ ಕುಸಿತ

ಭಾರತದಲ್ಲಿ, ಮದುವೆ ಸಮಾರಂಭಗಳ ಸಂಖ್ಯೆಯ ಕುಸಿತ ಮತ್ತು ಮೊದಲ ತ್ರೈಮಾಸಿಕದಲ್ಲಿ ಶುಭ ದಿನಗಳ ಕೊರತೆಯು ದೇಶದಲ್ಲಿ ಚಿನ್ನದ ಖರೀದಿಯ ಮೇಲೆ ನೇರ ಪರಿಣಾಮ ಬೀರಿತು. ಇದು ಜಾಗತಿಕವಾಗಿ ಹೆಚ್ಚುತ್ತಿರುವ ಚಿನ್ನದ ಬೆಲೆ ಕೂಡ ಅನೇಕ ಭಾರತೀಯ ಗ್ರಾಹಕರು ಚಿನ್ನ ಖರೀದಿಯಿಂದ ಹಿಂದೆ ಸರಿಯುವಂತೆ ಮಾಡಿತು.

ತಂತ್ರಜ್ಞಾನದಲ್ಲಿ ಚಿನ್ನದ ಬೇಡಿಕೆಯು ಕಳೆದ ನಾಲ್ಕು ವರ್ಷಗಳಲ್ಲಿ ಗರಿಷ್ಠ ಮಟ್ಟವಾದ 82 ಟನ್‌ಗೆ ತಲುಪಿದೆ. 2021ರ ಮೊದಲ ತ್ರೈಮಾಸಿದಲ್ಲಿ ಶೇ.1 ರಷ್ಟು ಏರಿಕೆ ದಾಖಲಾಗಿದೆ. ಚಿನ್ನಾಭರಣ ಕ್ಷೇತ್ರ ಸಾಧಾರಣ ಬೆಳವಣಿಗೆ ಕಂಡರೂ, ಸವಾಲುಗಳಿಂದ ಮುಕ್ತವಾಗಿಲ್ಲ. ಚೀನಾದಂತಹ ಪ್ರಮುಖ ಹಣಕಾಸು ಮತ್ತು ಕೈಗಾರಿಕಾ ದೇಶಗಳು ಲಾಕ್‌ಡೌನ್‌ಗಳ ಅಡಿಯಲ್ಲಿವೆ. ಇದು ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದೆ.

ಚಿನ್ನದ ಕಾರ್ಯಕ್ಷಮತೆ

ಚಿನ್ನದ ಕಾರ್ಯಕ್ಷಮತೆ

ಕೇಂದ್ರೀಯ ಬ್ಯಾಂಕ್‌ಗಳಿಂದ ನಿವ್ವಳ ಖರೀದಿಯು ಹಿಂದಿನ ತ್ರೈಮಾಸಿಕಕ್ಕಿಂತ ದ್ವಿಗುಣಗೊಂಡಿದೆ. ಈಜಿಪ್ಟ್ ಮತ್ತು ಟರ್ಕಿಯಂತಹ ದೇಶಗಳ ಪ್ರಾಬಲ್ಯ ಹೊಂದಿರುವ ವಲಯದಲ್ಲಿ ಖರೀದಿಯನ್ನು ಮಾಡುವ ಮೂಲಕ ಭಾರತ 2022 ರ ಮೊದಲ ಅವಧಿಯಲ್ಲಿ ಅಧಿಕೃತ ಚಿನ್ನದ ನಿಕ್ಷೇಪಗಳಿಗೆ 84ಟನ್‌ಗಿಂತ ಹೆಚ್ಚಿನ ಚಿನ್ನ ಸೇರ್ಪಡೆಯಾಗಿದೆ. 2021ರ ಮೊದಲ ತ್ರೈಮಾಸಿಕಕ್ಕಿಂತ ಶೇ.29ರಷ್ಟು ಕುಸಿತದೊಂದಿಗೆ ಕೇಂದ್ರ ಬ್ಯಾಂಕ್‌ಗಳು ಚಿನ್ನದ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸುವುದನ್ನು ಮುಂದುವರಿಸಿವೆ. ಚಿನ್ನದ ಒಟ್ಟು ಪೂರೈಕೆಯು ವರ್ಷದಿಂದ ವರ್ಷಕ್ಕೆ ಶೇ.4ರಷ್ಟು ಹೆಚ್ಚಾಗಿದ್ದು, 856 ಟನ್‌ಗೆ ತಲುಪಿದೆ. ಇದಕ್ಕೆ ಉತ್ತಮ ಗಣಿಗಾರಿಕೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಮರುಬಳಕೆಯು ಹಿಂದಿನ ವರ್ಷಕ್ಕಿಂತ ಶೇ.15 ರಷ್ಟು ಏರಿಕೆಯಾಗಿದೆ.

ಇಎಂಇಎ ಲೂಯಿಸ್ ಸ್ಟ್ರೀಟ್

ಇಎಂಇಎ ಲೂಯಿಸ್ ಸ್ಟ್ರೀಟ್

ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಹಿರಿಯ ವಿಶ್ಲೇಷಕ ಇಎಂಇಎ ಲೂಯಿಸ್ ಸ್ಟ್ರೀಟ್ ಪ್ರತಿಕ್ರಿಯಿಸಿ ''2022 ರ ಮೊದಲ ತ್ರೈಮಾಸಿಕವು ಏರುಪೇರುಗಳಿಂದ ಕೂಡಿತ್ತು. ಇದಕ್ಕೆ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು, ಪೂರೈಕೆ ಸರಪಳಿ ತೊಂದರೆಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರ ಕಾರಣವಾಗಿದೆ'' ಎಂದರು.

"ಪ್ರಸ್ತುತ ಮಾರುಕಟ್ಟೆ ಬೆಳವಣಿಗೆ ಗಮನಿಸಿದರೆ, ಹೂಡಿಕೆದಾರರ ಆಸಕ್ತಿ ಹೆಚ್ಚಾಗಿದೆ. ಇದು ಮುಂದೆಯೂ ಬಲವಾಗಿ ಉಳಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ಗ್ರಾಹಕರು ಜಾಗತಿಕ ಜೀವನ ವೆಚ್ಚದ ಬಿಕ್ಕಟ್ಟನ್ನು ಎದುರಿಸುವುದನ್ನು ಪರಿಶೀಲಿಸುತಿದ್ದಾರೆ'' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+