For Quick Alerts
ALLOW NOTIFICATIONS  
For Daily Alerts

ಚಿನ್ನದ ಫ್ಯೂಚರ್ಸ್ ದರ 348 ರುಪಾಯಿ ಏರಿಕೆ, ಬೆಳ್ಳಿ ಕೇಜಿಗೆ ರು. 345 ಇಳಿಕೆ

|

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಫ್ಯೂಚರ್ಸ್ ದರವು ಬುಧವಾರ ಗಳಿಕೆ ಕಂಡಿದೆ. ಯುಎಸ್ ಡಾಲರ್ ಏರಿಕೆಗೆ ತಡೆ ಬಿದ್ದ ಹಿನ್ನೆಲೆಯಲ್ಲಿ ಚಿನ್ನಕ್ಕೆ ಹೊಳಪು ತಂದಿದೆ. ಇದರ ಜತೆಗೆ ಕೊರೊನಾ ಸೋಂಕು ಪ್ರಕರಣಗಳು ಸಹ ಹೆಚ್ಚಾಗುತ್ತಿರುವುದರಿಂದ ಚಿನ್ನದ ಬೆಲೆ ಏರಿಕೆಗೆ ಬಲ ನೀಡಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾ ಸೋಂಕು ಪ್ರಕರಣ 9.1 ಕೋಟಿ ದಾಟಿದೆ. ಏಷ್ಯನ್ ಮತ್ತು ಯುರೋಪಿಯನ್ ಹಲವು ದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಹೇರುತ್ತಿವೆ. ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ 348 ರುಪಾಯಿ ಏರಿಕೆ ಕಂಡು, ಪ್ರತಿ 10 ಗ್ರಾಮ್ ಗೆ ರು. 49,393 ತಲುಪಿದೆ. ಬೆಳ್ಳಿಯ ಫ್ಯೂಚರ್ಸ್ ರು. 345 ಅಥವಾ 0.52% ಇಳಿಕೆಯಾಗಿ, ಕೇಜಿಗೆ ರು. 66,251 ಇದೆ.

SGB ಗೋಲ್ಡ್ 2020- 21 ಸಿರೀಸ್ X ಸಬ್ ಸ್ಕ್ರಿಪ್ಷನ್ ಆರಂಭSGB ಗೋಲ್ಡ್ 2020- 21 ಸಿರೀಸ್ X ಸಬ್ ಸ್ಕ್ರಿಪ್ಷನ್ ಆರಂಭ

ಲಸಿಕೆ ಬೆಳವಣಿಗೆ ಹಿನ್ನೆಲೆಯಲ್ಲಿ ಇಟಿಎಫ್ ಖರೀದಿ ಕಡಿಮೆ ಆಗಿದೆ. ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣಬಹುದು. ಆದರೂ ಸಾಮಾನ್ಯ ಆಲೋಚನೆಯು ಏರಿಕೆ ಆಗುವ ಕಡೆಗೆ ಇದೆ. ಕೊರೊನಾ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ನಿರೀಕ್ಷೆಗಳಿವೆ.

ಚಿನ್ನದ ಫ್ಯೂಚರ್ಸ್ 348 ರು. ಏರಿಕೆ, ಬೆಳ್ಳಿ ಕೇಜಿಗೆ ರು. 345 ಇಳಿಕೆ

ಸ್ಪಾಟ್ ಮಾರ್ಕೆಟ್ ನಲ್ಲಿ ದೆಹಲಿಯಲ್ಲಿ ಸತತ ಎರಡನೇ ದಿನ, ಮಂಗಳವಾರ ಚಿನ್ನದ ದರ 297 ರುಪಾಯಿ ಏರಿಕೆ ಕಂಡು, ಪ್ರತಿ 10 ಗ್ರಾಮ್ ಗೆ ರು. 48,946ರಲ್ಲಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆ ಅನುಸರಿಸಿ, ಈ ವಿದ್ಯಮಾನ ನಡೆಯಿತು. ಇನ್ನು ಬೆಳ್ಳಿ ಬೆಲೆಯು ಪ್ರತಿ ಕೇಜಿಗೆ 1404 ರುಪಾಯಿ ಮೇಲೇರಿ, 65,380 ತಲುಪಿತು.

English summary

Gold Futures Increased By Rs 348 And Silver Futures Decreased Rs 345

Gold futures for 10 gms increased by Rs 348 and silver futures decreased by Rs 345 on January 13, 2021.
Story first published: Wednesday, January 13, 2021, 10:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X