For Quick Alerts
ALLOW NOTIFICATIONS  
For Daily Alerts

ಫ್ಯೂಚರ್ಸ್ ಮಾರ್ಕೆಟ್ ಚಿನ್ನದ ದರ 54,000 ರು.ನಿಂದ ಆಚೆಗೆ ಜಿಗಿತ

|

ಭಾರತದಲ್ಲಿ ಚಿನ್ನದ ಬೆಲೆ ಆಗಸ್ಟ್ 3ರ ಸೋಮವಾರ ಮೊದಲ ಬಾರಿಗೆ ಪ್ರತಿ 10 ಗ್ರಾಮ್ ಗೆ 54,000 ರುಪಾಯಿ ದಾಟಿದೆ. ಫ್ಯೂಚರ್ಸ್ ಮಾರ್ಕೆಟ್ ನಲ್ಲಿನ ಹೊಸ ದಾಖಲೆ ಇದು. ಇದೇ ವೇಳೆ ಬೆಳ್ಳಿ ಕೂಡ 1% ಏರಿಕೆ ಕಂಡಿದೆ. ಕೇಜಿಗೆ 65,564 ರುಪಾಯಿಯಂತೆ ಕೊನೆಯದಾಗಿ ವಹಿವಾಟು ನಡೆಸಿದೆ.

ಸವರನ್ ಗೋಲ್ಡ್ ಬಾಂಡ್ ಸ್ಕೀಮ್: ಆ. 3ರಿಂದ ಖರೀದಿ, ಗ್ರಾಮ್ ಗೆ 5334 ರು.ಸವರನ್ ಗೋಲ್ಡ್ ಬಾಂಡ್ ಸ್ಕೀಮ್: ಆ. 3ರಿಂದ ಖರೀದಿ, ಗ್ರಾಮ್ ಗೆ 5334 ರು.

ಈ ಹಿಂದಿನ ಸೆಷನ್ ನಲ್ಲಿ ಫೂಚರ್ಸ್ ಮಾರ್ಕೆಟ್ ನಲ್ಲಿ 10 ಗ್ರಾಮ್ ಚಿನ್ನ 54,000 ರುಪಾಯಿ ಬಂದಿತ್ತು ಮತ್ತು 53,828 ರುಪಾಯಿಯೊಂದಿಗೆ ವಹಿವಾಟು ಮುಗಿಸಿತ್ತು. ಇನ್ನು ಬೆಳ್ಳಿಯು ಕೇಜಿಗೆ 2314 ರುಪಾಯಿ ಏರಿಕೆ ಕಂಡು 64,984 ರುಪಾಯಿ ತಲುಪಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು ಪ್ರತಿ ಔನ್ಸ್ ಗೆ (28.3495 ಗ್ರಾಮ್ ಗೆ) $ 1950 ತಲುಪಿದ ಮೇಲೆ ಸೋಮವಾರದಂದು ಬೆಲೆಯಲ್ಲಿ ಹೊಸ ದಾಖಲೆ ಬರೆದಿದೆ.

ಫ್ಯೂಚರ್ಸ್ ಮಾರ್ಕೆಟ್ ಚಿನ್ನದ ದರ 54,000 ರು.ನಿಂದ ಆಚೆಗೆ ಜಿಗಿತ

ಕೊರೊನಾ ಪ್ರಕರಣದಲ್ಲಿನ ಏರಿಕೆಯಿಂದ ಡಾಲರ್ ಮೌಲ್ಯಕ್ಕೆ ಪೆಟ್ಟು ಬಿದ್ದಿದೆ. ಸ್ಪಾಟ್ ಚಿನ್ನದ ಔನ್ಸ್ ದರ $ 1976.47 ತಲುಪಿತ್ತು. ಅದಕ್ಕೂ ಮುನ್ನ ಏಷ್ಯನ್ ವಹಿವಾಟಿನಲ್ಲಿ $ 1984.66 ತಲುಪಿತ್ತು. ಇನ್ನು ಗೋಲ್ಡ್ ಫ್ಯೂಚರ್ಸ್ $ 1996.30 ತಲುಪಿತ್ತು. ಡಾಲರ್ ಮೌಲ್ಯದಲ್ಲಿ 10% ಇಳಿಕೆ ಆಗಿರುವುದು ವಿಶ್ವದ ಬಲಿಷ್ಠ ರಾಷ್ಟ್ರವೊಂದು ಕೊರೊನಾ ಎದುರಿಸಲು ಹೇಗೆ ಕಷ್ಟ ಪಡುತ್ತಿದೆ ಎಂಬುದಕ್ಕೆ ನಿದರ್ಶನದಂತಿದೆ.

English summary

Gold Futures Price Cross 54000 Rupees First Time

Gold futures price cross 54,000 rupees first time on August 3, 2020. Even silver price also jumped.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X