ಏಪ್ರಿಲ್ ನಿಂದ ನವೆಂಬರ್ ಮಧ್ಯೆ ಚಿನ್ನದ ಆಮದು 40 ಪರ್ಸೆಂಟ್ ಇಳಿಕೆ

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ನಿಂದ ನವೆಂಬರ್ ತನಕ ಚಿನ್ನದ ಆಮದು $ 12.3 ಬಿಲಿಯನ್ ಅಥವಾ 40 ಪರ್ಸೆಂಟ್ ಇಳಿಕೆ ಕಂಡಿದೆ ಎಂದು ವಾಣಿಜ್ಯ ಸಚಿವಾಲಯದ ದತ್ತಾಂಶ ಬಹಿರಂಗಪಡಿಸಿದೆ. 2019- 20ನೇ ಸಾಲಿಗೆ ಚಿನ್ನದ ಆಮದು ಪ್ರಮಾಣ $ 20.6 ಬಿಲಿಯನ್ ಇತ್ತು.

ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದಲ್ಲಿ ಆಮದು ಪ್ರಮಾಣ 2.65% ಹೆಚ್ಚಳವಾಗಿ, $ 3 ಬಿಲಿಯನ್ ಮುಟ್ಟಿದೆ. ಏಪ್ರಿಲ್ ನಿಂದ ನವೆಂಬರ್ ತನಕದ ಅವಧಿಯಲ್ಲಿ ಬೆಳ್ಳಿಯ ಆಮದು ಪ್ರಮಾಣ ಕೂಡ 65.7 ಪರ್ಸೆಂಟ್ ಇಳಿಕೆ ಆಗಿದ್ದು, $ 752 ಮಿಲಿಯನ್ ನಷ್ಟು ಕಡಿಮೆ ಆಗಿದೆ.

ಚಿನ್ನ ಹಾಗೂ ಬೆಳ್ಳಿ ಆಮದು ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ದೇಶದ ವಾಣಿಜ್ಯ ಕೊರತೆ ಕಡಿಮೆ ಆಗಿದೆ. ಅಂದರೆ ಆಮದು ಹಾಗೂ ರಫ್ತಿನ ಮಧ್ಯದ ವ್ಯತ್ಯಾಸ ಏಪ್ರಿಲ್ ನಿಂದ ನವೆಂಬರ್ ಮಧ್ಯೆ 42 ಬಿಲಿಯನ್ ಯುಎಸ್ ಡಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆ ಪ್ರಮಾಣ 113.42 ಬಿಲಿಯನ್ ಯುಎಸ್ ಡಿ ಇತ್ತು.

ಏಪ್ರಿಲ್ ನಿಂದ ನವೆಂಬರ್ ಮಧ್ಯೆ ಚಿನ್ನದ ಆಮದು 40 ಪರ್ಸೆಂಟ್ ಇಳಿಕೆ

ವಿಶ್ವದ ಅತಿ ದೊಡ್ಡ ಚಿನ್ನದ ಆಮದುದಾರ ದೇಶ ಭಾರತ. ಆಭರಣ ಕ್ಷೇತ್ರದ ಬೇಡಿಕೆಯನ್ನು ಆಮದು ಮಾಡಿಕೊಂಡ ಚಿನ್ನವೇ ಪೂರೈಸುತ್ತದೆ. ಭಾರತವು ಪ್ರತಿ ವರ್ಷ 800- 900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಆಭರಣ ರಫ್ಟು 44% ಇಳಿಕೆ ಆಗಿದ್ದು, 14.30 ಬಿಲಿಯನ್ ಯುಎಸ್ ಡಿ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+