'ಸಾಲ' ಸುಲಭವಾಗಿ ಸಿಗಲ್ಲ! ಚಿನ್ನ ಅಡಿವಿಟ್ಟು ಸಾಲ ಪಡೆಯುವವರಿಗೆ ಇನ್ಮುಂದೆ ಹೊಸ ರೂಲ್ಸ್. ನಿಮ್ಮ ಎಲ್ಲಾ ಚಿನ್ನಕ್ಕೂ ಸಿಗಲ್ಲ ಲೋನ್. ಆದರೆ, ಬೆಳ್ಳಿ ಅಡವಿಟ್ಟರೆ ಸಾಲ ಪಡೆಯಬಹುದು. ಅದರಲ್ಲೂ ಕಡಿಮೆ ಸಾಲ ಪಡೆಯುವ ಜನರಿಗೆ ಆರ್‌ಬಿಐ ಸಿಹಿಸುದ್ದಿ ನೀಡಿದೆ. ಹೌದು, ಆರ್‌ಬಿಐ ಚಿನ್ನದ ಸಾಲಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಘೋಷಿಸಿದೆ. ಇದರಿಂದ ಗ್ರಾಹಕರಿಗೆ ಲಾಭ ಸಿಗಲಿದೆ. ಏನಿದು ಆರ್‌ಬಿಐ ಹೊಸ ನಿಯಮ? ಯಾವೆಲ್ಲಾ ಚಿನ್ನಕ್ಕೆ ಸಾಲ ಸಿಗಲ್ಲ? ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಹಣಕಾಸು ಪರಿಶೀಲನಾ ಸಮಿತಿಯ (MPC) ಸಭೆಯಲ್ಲಿ ಚಿನ್ನದ ಸಾಲಕ್ಕೆ ಸಂಬಂಧಿಸಿದ್ದಂತೆ ದೊಡ್ಡ ಘೋಷಣೆಯೊಂದನ್ನು ಮಾಡಲಾಗಿತ್ತು. ಸಣ್ಣ ಸಾಲಗಾರರಿಗೆ ಸಹಾಯವಾಗಲಿ ಎಂದು ರಿಸರ್ವ್ ಬ್ಯಾಂಕ್ ಚಿನ್ನದ ಸಾಲ ನಿಯಮಗಳನ್ನು ಸಡಿಲ ಮಾಡಿದೆ. ಈ ನಿಯಮದಡಿಯಲ್ಲಿ ಕೇಂದ್ರ ಬ್ಯಾಂಕ್ 2.5 ಲಕ್ಷ ರೂ.ವರೆಗಿನ ಚಿನ್ನದ ಸಾಲಗಳಿಗೆ ಸಾಲ-ಮೌಲ್ಯ (LTV) ಅನುಪಾತವನ್ನು ಶೇ. 75 ರಿಂದ ಶೇ.85 ಕ್ಕೆ ಹೆಚ್ಚಿಸಿದೆ, ಇದರಲ್ಲಿ ಬಡ್ಡಿ ಅಂಶವನ್ನು ಸಹ ಒಳಗೊಂಡಿದೆ.

ಆರ್ ಬಿಐ ಹಣಕಾಸು ಪರಿಶೀಲನಾ ಸಮಿತಿಯ (MPC) ಸಭೆ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುತ್ತದೆ. ಈ ಸಭೆಯಲ್ಲಿ ಬಡ್ಡಿದರಗಳು, ಆರ್ಥಿಕ ಪರಿಸ್ಥಿತಿ, ಹಣದುಬ್ಬರ ಮತ್ತು ಇತರ ವಿಷಯಗಳ ಬಗ್ಗ ಸಮಿತಿಯ ಸದಸ್ಯರು ಚರ್ಚೆಯನ್ನು ಮಾಡುತ್ತಾರೆ. ಅಲ್ಲಿ ಸಮ್ಮತಿ ದೊರೆತ ವಿಷಯಗಳನ್ನು ಆರ್ ಬಿಐ ಗರ್ವನರ್ ಘೋಷಣೆಯನ್ನು ಮಾಡುತ್ತಾರೆ.
ಇಂದು ನಡೆಯ ಸಭೆಯಲ್ಲಿಬಡ್ಡಿದರಗಳಲ್ಲಿ ಕಡಿತವನ್ನು ಘೋಷಿಸಿತು, ಇದರಲ್ಲಿ ನೀತಿ ದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಲಾಗಿದೆ. ಸತತ ಮೂರನೇ ಬಾರಿಗೆ ಬಡ್ಡಿದರಗಳನ್ನು ಕಡಿತಗೊಳಿಸಲಾಗಿದೆ. ನಗದು ಮೀಸಲು ಅನುಪಾತ (CRR) ಅನ್ನು ಸಹ ಶೇ.4ರಿಂದ ಶೇ.3 ಕ್ಕೆ ಇಳಿಸಲಾಗಿದೆ. ಇದಲ್ಲದೆ, ಚಿನ್ನದ ಸಾಲದ ಬಗ್ಗೆಯೂ ದೊಡ್ಡ ಬದಲಾವಣೆಯನ್ನು ಮಾಡಿದ್ದಾರೆ.
ಚಿನ್ನದ ಸಾಲದ ನಿಯಮಗಳಲ್ಲಿ ಸಡಿಲಿಕೆ
ರಿಸರ್ವ್ ಬ್ಯಾಂಕ್ ಚಿನ್ನದ ಸಾಲದ ನಿಯಮಗಳಲ್ಲಿ ಮಾಡಿರುವ ಬದಲಾವಣೆಗಳನ್ನು ಉದಾಹರಣೆಯೊಂದಿಗೆ ನೋಡುವುದಾದರೆ ಸಾಲಗಾರನು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನುಅಡವಿಟ್ಟರೆ ಅವನು ಈಗ 85,000 ರಿಂದ 1ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಇದು ಮೊದಲಿಗಿಂತ ಹೆಚ್ಚಾಗಿದೆ. ಇದು ಮನೆಗಳು ಮತ್ತು ಸಣ್ಣ ವ್ಯವಹಾರಗಳಿಗೆ ಸಾಲಗಳನ್ನು ಸುಲಭವಾಗಿ ಪಡೆಯುವ ನಿರೀಕ್ಷೆಯಿದೆ.
ಈ ಪರಿಹಾರವು ರಿಸರ್ವ್ ಬ್ಯಾಂಕ್ ಚಿನ್ನದ ಸಾಲ ಸಂಪ್ರದಾಯದ ಸಮಗ್ರ ಪರಿಶೀಲನೆಯ ಭಾಗವಾಗಿದೆ. ನಿರ್ದಿಷ್ಟವಾಗಿ ಬಗ್ಗೆ ಹೇಳುವುದಾದದರೆ, ಇದು ಬ್ಯಾಂಕೇತರ ಹಣಕಾಸು ಕಂಪನಿಗಳು (NBFC ಗಳು) ನೀಡುವ ಸಾಲಗಳ ಪರಿಶೀಲನೆಯ ಒಂದು ಭಾಗವಾಗಿರುತ್ತದೆ.
ಈ ವರ್ಷದ ಏಪ್ರಿಲ್‌ನಲ್ಲಿ, ಜಂಟಿ ಮೇಲ್ವಿಚಾರಣಾ ಪರಿಶೀಲನೆಯ ಸಮಯದಲ್ಲಿ ಹೆಚ್ಚಿನ ಲೋನ್ ಟು ವ್ಯಾಲ್ಯೂ ಉಲ್ಲಂಘನೆಗಳು, ಮೂರನೇ ವ್ಯಕ್ತಿಯ ಏಜೆಂಟ್‌ಗಳ ಅತಿಯಾದ ಬಳಕೆ, ಬಿಡ್ಡಿಂಗ್ ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ದುರ್ಬಲ ಅಪಾಯ ನಿಯಂತ್ರಣ ವ್ಯವಸ್ಥೆಗಳಂತಹ ಹಲವಾರು ಸಮಸ್ಯೆಗಳನ್ನು ಕೇಂದ್ರ ಬ್ಯಾಂಕ್ ಪಟ್ಟಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕರಡು ಮಾರ್ಗಸೂಚಿಗಳು ಕಠಿಣ ಚೌಕಟ್ಟನ್ನು ಪ್ರಸ್ತಾಪಿಸಿದವು.
ಲೋನ್ ಟು ವ್ಯಾಲ್ಯೂ ಮಿತಿಯನ್ನು ಶೇ. 75 (ಬಡ್ಡಿ ಸೇರಿದಂತೆ) ಗೆ ನಿಗದಿಪಡಿಸಲಾಗಿದೆ. ಬುಲೆಟ್ ಮರುಪಾವತಿ ಅವಧಿಯನ್ನು 12 ತಿಂಗಳುಗಳಿಗೆ ಸೀಮಿತಗೊಳಿಸುವುದು ಕಟ್ಟುನಿಟ್ಟಾದ ಆಂತರಿಕ ನಿಯಂತ್ರಣಗಳು ಮತ್ತು ಅನುಸರಣೆ ವ್ಯವಸ್ಥೆ ಪ್ರಾಥಮಿಕ ವಲಯ ಸಾಲ (PSL) ವರ್ಗದ ಅಡಿಯಲ್ಲಿ ಚಿನ್ನದ ಸಾಲಗಳ ಅಂತಿಮ ಬಳಕೆಯ ಮೇಲ್ವಿಚಾರಣೆ ಸಣ್ಣ ಸಾಲಗಾರರಿಗೆ ಅನುಕೂಲವಾಗುತ್ತದೆ.
ಆರ್ ಬಿಐ ಹೊಸ ನಿಯಮಗಳು ಕಡಿಮೆ ಸಾಲ ಪಡೆಯುವವರಿಗೆ ಅನುಕೂಲ. ಸಣ್ಣ ಸಾಲಗಾರರಿಗೆ ವಿಷಯಗಳನ್ನು ಸುಲಭಗೊಳಿಸಲು, ಸಣ್ಣ ಟಿಕೆಟ್ ಚಿನ್ನದ ಸಾಲಗಳಿಗೆ ಕ್ರೆಡಿಟ್ ವಿಶ್ಲೇಷಣೆ ಅಗತ್ಯವಿಲ್ಲ ಎಂದು ರಿಸರ್ವ್ ಈಗ ಸ್ಪಷ್ಟವಾಗಿ ಹೇಳಿದೆ.


Click it and Unblock the Notifications