ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ 56 ಸಾವಿರಕ್ಕೆ ಸಮೀಪ ಬಂದಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ಆಫ್ ಇಂಡಿಯಾದಲ್ಲಿ (MCX) ಗೋಲ್ಡ್ ಫ್ಯೂಚರ್ಸ್ ದಿನದ ಗರಿಷ್ಠ ಮಟ್ಟವಾದ ರು. 55,593/10 ಗ್ರಾಮ್ ಗೆ ಹಾಗೂ ಬೆಳ್ಳಿ ಕೇಜಿಗೆ 74,948 ಮುಟ್ಟಿತು.
ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 2,039.75ಗೆ ತಲುಪಿತು. ಬುಧವಾರದಂದು ಸಾರ್ವಕಾಲಿಕ ದಾಖಲೆ ಮೊತ್ತವಾದ $ 2,055.10 ತಲುಪಿದ ನಂತರ ಇಳಿಕೆ ಆಗಿತ್ತು. ಡಾಲರ್ ಮೌಲ್ಯದಲ್ಲಿ ಕುಸಿತವಾಗಿದ್ದರಿಂದ ಚಿನ್ನದ ಬೆಲೆ ಚಿಗಿತುಕೊಳ್ಳುತ್ತಲೇ ಇದೆ. ಯು.ಎಸ್. ಗೋಲ್ಡ್ ಫ್ಯೂಚರ್ಸ್ 0.3% ಹೆಚ್ಚಳವಾಗಿ, 2,055.90 ಮುಟ್ಟಿತ್ತು. ಡಾಲರ್ ಸೂಚ್ಯಂಕ ಇಳಿಕೆ ಆಗಿದ್ದರಿಂದ ಈ ದರಕ್ಕೆ ಬೆಂಬಲ ಸಿಕ್ಕಿದೆ.

ಈ ವರ್ಷದಲ್ಲಿ ಇಲ್ಲಿಯ ತನಕ ಚಿನ್ನದ ದರವು 34% ಗಳಿಕೆ ಕಂಡಿದೆ. ತಜ್ಞರು ಹೇಳುವ ಪ್ರಕಾರ, ಚಿನ್ನವು ಪ್ರತಿ ಹತ್ತು ಗ್ರಾಮ್ ಗೆ 65ರಿಂದ 68 ಸಾವಿರ ಮುಟ್ಟುವ ಸಾಧ್ಯತೆ ಇದೆ. ಮುಂದಿನ ಹನ್ನೆರಡರಿಂದ ಹದಿನೈದು ತಿಂಗಳ ಅವಧಿಯಲ್ಲಿ ಬೆಳ್ಳಿ ದರ ಕೇಜಿಗೆ 82ರಿಂದ 88 ಸಾವಿರ ರುಪಾಯಿ ತಲುಪಬಹುದು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications