ಕೊರೊನಾ ಲಸಿಕೆ ಘೋಷಣೆಗೆ ಚಿನ್ನದ ಬೆಲೆ 10 ಗ್ರಾಮ್ ಗೆ 2,566 ರುಪಾಯಿ ಇಳಿಕೆ

MCXನಲ್ಲಿ (ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ಆಫ್ ಇಂಡಿಯಾ) ಸೋಮವಾರ ರಾತ್ರಿ (ನವೆಂಬರ್ 9, 2020) ಹೊತ್ತಿಗೆ ಚಿನ್ನದ ದರವು ಪ್ರತಿ 10 ಗ್ರಾಮ್ ಗೆ 2,566 ರುಪಾಯಿ ಇಳಿಕೆ ಕಂಡಿತು. ಕೊರೊನಾ ಲಸಿಕೆ ಕೊನೆ ಹಂತದ ಪರೀಕ್ಷೆಗಳಲ್ಲಿ Pfizer ಯಶಸ್ಸು ಕಂಡಿದೆ ಎಂಬ ಸುದ್ದಿ ಬಂದ ಕೆಲವೇ ನಿಮಿಷಗಳಲ್ಲಿ ಮಹತ್ವವಾದ 5% ಇಳಿಕೆ ಕಂಡು, 49,602 ರುಪಾಯಿ ತಲುಪಿತು. ಬೆಳ್ಳಿ ಬೆಲೆಯಲ್ಲಿ 4 ಸಾವಿರ ಇಳಿಕೆ ಕಂಡಿತು.

ಮೂರನೇ ಹಂತದ ಪರೀಕ್ಷೆ ವೇಳೆ ಕೊರೊನಾ ಲಸಿಕೆ ಶೇಕಡಾ 90ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು Pfizer Inc ತಿಳಿಸಿತು. Pfizer ಹಾಗೂ ಜರ್ಮನ್ ಸಹಭಾಗಿ BioNTech SE ತಿಳಿಸಿರುವ ಪ್ರಕಾರ, ತುರ್ತು ಬಳಕೆ ಮಾಡುವುದಕ್ಕೆ ಯುಎಸ್ ನಿಂದ ಈ ತಿಂಗಳ ಕೊನೆಗೆ ಅನುಮತಿ ಕೇಳುತ್ತವೆ.

ಕೋವಿಡ್- 19 ತಡೆಯುವ ಸಾಮರ್ಥ್ಯ ಇದೆ

ಕೋವಿಡ್- 19 ತಡೆಯುವ ಸಾಮರ್ಥ್ಯ ಇದೆ

"ನಮ್ಮ ಮೂರನೇ ಹಂತದ ಕೋವಿಡ್- 19 ಲಸಿಕೆ ಪ್ರಯೋಗದ ಮೊದಲ ಕಂತಿನ ಫಲಿತಾಂಶವು ನಮ್ಮ ಲಸಿಕೆಗೆ ಕೋವಿಡ್- 19 ತಡೆಯುವ ಸಾಮರ್ಥ್ಯ ಇದೆ ಎಂಬುದಕ್ಕೆ ಆರಂಭಿಕ ಸಾಕ್ಷ್ಯ ನೀಡುತ್ತಿವೆ," ಎಂದು Pfizer ಅಧ್ಯಕ್ಷ ಮತ್ತು ಸಿಇಒ ಅಲ್ಬರ್ಟ್ ಬೋರ್ಲಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 4 ಪರ್ಸೆಂಟ್ ಇಳಿಕೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 4 ಪರ್ಸೆಂಟ್ ಇಳಿಕೆ

ಈ ಹೇಳಿಕೆ ಬಂದ ಕೂಡಲೇ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಎಂದು ಭಾವಿಸಿದ್ದ ಚಿನ್ನದಿಂದ ದೂರವಾಗಿದ್ದಾರೆ. ಆ ಕಾರಣಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 4 ಪರ್ಸೆಂಟ್ ಇಳಿಕೆ ಕಂಡಿದೆ. ಸ್ಪಾಟ್ ಚಿನ್ನ 4.2 ಪರ್ಸೆಂಟ್ ಇಳಿಕೆ ಕಂಡು, ಪ್ರತಿ ಔನ್ಸ್ ಗೆ $1,870.51 ತಲುಪಿದೆ. ಎರಡು ತಿಂಗಳ ಹಿಂದಿನ ಗರಿಷ್ಠ ಬೆಲೆಯಾದ $1,965.33ಕ್ಕೆ ಹೋಲಿಸಿದಲ್ಲಿ ಇದು ಭಾರೀ ಕುಸಿತ ಆಗುತ್ತದೆ.

ಷೇರು ಮಾರುಕಟ್ಟೆಗಳು ಭಾರೀ ಏರಿಕೆ

ಷೇರು ಮಾರುಕಟ್ಟೆಗಳು ಭಾರೀ ಏರಿಕೆ

ಇನ್ನೊಂದು ಕಡೆ ಕೊರೊನಾ ಬಿಕ್ಕಟ್ಟಿನ ಅಂತ್ಯಕ್ಕೆ ಆರಂಭವಾಗಿದೆ ಎಂಬ ಭರವಸೆ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗಳು ಭಾರೀ ಏರಿಕೆ ಕಂಡವು. ಯುಎಸ್ ನಲ್ಲಿ ಡೌ ಜೋನ್ಸ್ ಸಾವಿರ ಪಾಯಿಂಟ್ ಗೂ ಹೆಚ್ಚಿನ ಏರಿಕೆ ಕಂಡು, ಸಾರ್ವಕಾಲಿಕ ದಾಖಲೆ ಬರೆಯಿತು. ದಿನದ ಗರಿಷ್ಠವಾಗಿ 1,600 ಪಾಯಿಂಟ್ ಗೂ ಹೆಚ್ಚು ಏರಿಕೆ ಕಂಡಿತ್ತು. S&P 500 ಕೂಡ ದಾಖಲೆಯ 2.8 ಪರ್ಸೆಂಟ್ ಹೆಚ್ಚಳ ದಾಖಲಿಸಿತು. ಕೊರೊನಾ ಲಸಿಕೆ ಬಗ್ಗೆ ಹೇಳಿಕೆ ಬಂದ ವೇಳೆ ಭಾರತದ ಷೇರು ಮಾರುಕಟ್ಟೆ ದಿನದ ವಹಿವಾಟು ಮುಗಿಸಿತ್ತು. ಸೆನ್ಸೆಕ್ಸ್- ನಿಫ್ಟಿ ಎರಡೂ ಸಾರ್ವಕಾಲಿಕ ದಾಖಲೆ ಬರೆದಿತ್ತು.

ಈ ವರ್ಷದಲ್ಲಿ 24% ಏರಿಕೆ ಕಂಡಿದೆ ಚಿನ್ನ

ಈ ವರ್ಷದಲ್ಲಿ 24% ಏರಿಕೆ ಕಂಡಿದೆ ಚಿನ್ನ

ಈ ವರ್ಷದಲ್ಲಿ ಇಲ್ಲಿಯ ತನಕ ಚಿನ್ನದ ಬೆಲೆಯು 24% ಏರಿಕೆ ಕಂಡಿದೆ. ಭಾರತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಕೊರೊನಾ ಬಿಕ್ಕಟ್ಟು ಯಾವಾಗ ಕೊನೆ ಆಗಬಹುದು ಎಂಬ ಅನಿಶ್ಚಿತತೆಯಲ್ಲಿ ಈ ಬೆಳವಣಿ ಆಗಿತ್ತು. ಕೊರೊನಾಗೆ ಲಸಿಕೆ ಹಾಗೂ ವಿಶ್ವ ಆರ್ಥಿಕತೆಯಲ್ಲಿ ಶೀಘ್ರ ಚೇತರಿಕೆಯನ್ನು ಹೂಡಿಕೆದಾರರು ಎದುರು ನೋಡುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+