ಭಾರತದಲ್ಲಿ ಬುಧವಾರ (ಆಗಸ್ಟ್ 5. 2020) ಆರಂಭದ ವಹಿವಾಟಿನಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಮ್ ಗೆ 54,797 ರುಪಾಯಿ ದಾಟಿತು. ಇದು MCXನಲ್ಲಿನ ದರ. ಇನ್ನು ಬೆಳ್ಳಿ ದರ ಪ್ರತಿ ಕೇಜಿಗೆ 70 ಸಾವಿರ ರುಪಾಯಿ ಸಮೀಪ ಬಂದಿತು. ಕೇಜಿಗೆ 69,902 ರುಪಾಯಿಗೆ ವಹಿವಾಟು ನಡೆಸಿತು.
ಡಾಲರ್ ಮೌಲ್ಯದಲ್ಲಿನ ಕುಸಿತ ಹಾಗೂ ಉತ್ತೇಜನದ ಬೆಂಬಲ ದೊರೆತು ಈ ಹಂತ ತಲುಪಿತು. ಮಂಗಳವಾರದ ವಹಿವಾಟಿನಲ್ಲಿ ಚಿನ್ನದ ಫ್ಯೂಚರ್ಸ್ ಅಕ್ಟೋಬರ್ ಡೆಲಿವರಿ ದರವು ಪ್ರತಿ 10 ಗ್ರಾಮ್ ಗೆ 54,612 ರುಪಾಯಿಗೆ ಜಿಗಿಯಿತು. ಇನ್ನು ಬೆಳ್ಳಿ ದರ ಕೇಜಿಗೆ 4049 ರುಪಾಯಿ ಹೆಚ್ಚಳವಾಗಿ, 69,797 ರುಪಾಯಿ ಮುಟ್ಟಿತು.
ಸಾರ್ವಕಾಲಿಕ ದಾಖಲೆ ಬೆಲೆಯಾದ 2014.20 ಡಾಲರ್ ಮುಟ್ಟಿತು
ಯಾವ ದರವನ್ನು ತಲುಪುವುದು ಮಾನಸಿಕವಾಗಿ ತಡೆಯಂತಿದ್ದ 2 ಸಾವಿರ ಡಾಲರ್ ಬೆಲೆಯನ್ನು ದಾಟಿ, ಸ್ಪಾಟ್ ಗೋಲ್ಡ್ ಔನ್ಸ್ ಗೆ 2009.61 ಡಾಲರ್ ಗೆ ಜಿಗಿಯಿತು. ಯು.ಎಸ್. ಗೋಲ್ಡ್ ಫ್ಯೂಚರ್ಸ್ ಸಾರ್ವಕಾಲಿಕ ದಾಖಲೆ ಬೆಲೆಯಾದ 2014.20 ಡಾಲರ್ ಮುಟ್ಟಿತು. ಇನ್ನು ಸ್ಪಾಟ್ ಗೋಲ್ಡ್ ಔನ್ಸ್ ಗೆ $ 1994.86 ದರದೊಂದಿಗೆ ಎತ್ತರಕ್ಕೆ ಏರಿತು.
ಬೆಳ್ಳಿ ದರವು ಔನ್ಸ್ ಗೆ $ 25.43 ಹೆಚ್ಚಳ
ಜಾಗತಿಕ ಮಟ್ಟದಲ್ಲಿ ಬಹುತೇಕ ಕೇಂದ್ರಬ್ಯಾಂಕ್ ಗಳು ತಮ್ಮ ದೇಶಗಳ ಕರೆನ್ಸಿಗಳ ಮೌಲ್ಯ ಕಡಿಮೆ ಮಾಡುತ್ತಿವೆ. ಜತೆಗೆ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆ ಆಕರ್ಷಕ ಮತ್ತು ಸುರಕ್ಷಿತ ಎಂಬ ಭಾವ ಮೂಡಿಸಿದೆ. ಲೆಬನಾನ್ ನ ಮುಖ್ಯ ಬಂದರಿನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟ ಕೂಡ ಬೆಲೆ ಏರಿಕೆಗೆ ಕಾರಣ ಆಗಿದೆ. ಈ ಮಧ್ಯೆ ಬೆಳ್ಳಿ ದರವು ಔನ್ಸ್ ಗೆ $ 25.43 ಹೆಚ್ಚಳವಾಗಿದೆ.
ಆರ್ ಬಿಐನಿಂದ ಮತ್ತೂ ಹೆಚ್ಚು ಆಶಾದಾಯಕ ಅಂದಾಜು
ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆ ಆಗಬಹುದು ಎಂಬ ವಿಚಾರವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಆದರೆ ಕೆಲವು ಜಾಗತಿಕ ಹೂಡಿಕೆ ಸಂಸ್ಥೆಗಳು ಅಂದಾಜು ಮಾಡುವಂತೆ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ $ 2300 ತಲುಪಬಹುದು. ಆರ್ ಬಿಐನಿಂದ ಮತ್ತೂ ಹೆಚ್ಚು ಆಶಾದಾಯಕ ಅಂದಾಜು ಬೆಲೆಯಾದ $ 3000 ತಲುಪುವ ಬಗ್ಗೆ ಹೇಳಲಾಗಿದೆ.


Click it and Unblock the Notifications