For Quick Alerts
ALLOW NOTIFICATIONS  
For Daily Alerts

ಅಮೆರಿಕದಲ್ಲಿ ಅಶಾಂತಿ, ಚಿನ್ನದ ಬೆಲೆ ಏರಿಳಿತ ಹೇಗಿದೆ?

|

ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಮತ್ತು ಬೆಂಬಲಿಗರು ದಾಳಿ ನಡೆಸಿದ ನಂತರ ಡೆಮಾಕ್ರಟಿಕ್ ಪಕ್ಷದ ಸಂಸದರು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಎರಡನೇ ಬಾರಿಗೆ ವಾಗ್ದಂಡನೆ ನಡೆಸಿ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇದರಿಂದ ಜಾಗತಿಕವಾಗಿ ಚಿನ್ನದ ದರ ದಲ್ಲಿ ಏರುಪೇರಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ 1,845.19 ಯುಎಸ್ ಡಾಲರ್ ರಂತೆ ಸ್ಥಿರವಾಗಿತ್ತು, ಏಷ್ಯನ್ ಷೇರುಗಳು ಕಡಿಮೆ ವಹಿವಾಟು ನಡೆಸಿದ್ದರಿಂದ (ಭಾರತೀಯ ಮಾರುಕಟ್ಟೆಯ ಪ್ರಾರಂಭಕ್ಕಿಂತ ಮುಂಚೆಯೇ) ಸ್ಥಿರತೆ ಪಡೆದುಕೊಂಡಿತು. ವಾಷಿಂಗ್ಟನ್‌ನಲ್ಲಿನ ರಾಜಕೀಯ ಅಶಾಂತಿ ಮತ್ತು ಜಾಗತಿಕ ಕೊವಿಡ್ 19 ಪ್ರಕರಣಗಳು, ಲಸಿಕೆ ಲಭ್ಯತೆ ಎಲ್ಲವೂ ಹಳದಿ ಲೋಹದ ಮೇಲೆ ಪರಿಣಾಮ ಬೀರಿವೆ.

 

ಎಂಸಿಎಕ್ಸ್ (ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ಆಫ್ ಇಂಡಿಯಾ) ನಲ್ಲಿನ ಫ್ಯೂಚರ್ ಚಿನ್ನ ಸೋಮವಾರ ರಾತ್ರಿ 11.55 ಕ್ಕೆ ಪ್ರತಿ 10 ಗ್ರಾಂಗೆ 49,300 ರೂ ನಂತೆ ಇತ್ತು. ಮಂಗಳವಾರ ಬೆಳಗ್ಗೆ ಕೊಂಚ ಚೇತರಿಕೆ ಕಂಡರೂ 10 ಗ್ರಾಂಗೆ 49, 328 ರು ನಂತೆ ವಹಿವಾಟು ನಡೆಸಿದೆ. ಬೆಳ್ಳಿ 0.22% ಕುಸಿತ ಕಂಡು 65,414 ಪ್ರತಿ ಕೆಜಿಯಷ್ಟಾಗಿದೆ.

ಅಮೆರಿಕದಲ್ಲಿ ಅಶಾಂತಿ, ಚಿನ್ನದ ಬೆಲೆ ಏರಿಳಿತ ಹೇಗಿದೆ?

ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 45, 890 ರು ಪ್ರತಿ 10 ಗ್ರಾಂ ನಷ್ಟಿದೆ. ರಾಜ್ಯದಿಂದ ರಾಜ್ಯಕ್ಕೆ ಅಬಕಾರಿ ಸುಂಕ, ರಾಜ್ಯದ ಸೆಸ್ ಇನ್ನಿತರ ಹೆಚ್ಚುವರಿ ದರ ಸೇರಿಸಲಾಗುತ್ತದೆ.

English summary

Gold Price Decline Pauses after Record Highs

Gold Price Decline Pauses after Record Highs after Democrats began the process of impeaching President Donald Trump for a second time on Monday.
Company Search
COVID-19