For Quick Alerts
ALLOW NOTIFICATIONS  
For Daily Alerts

ಸತತ 5ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: 10 ಗ್ರಾಂಗೆ 750 ರು. ಕುಸಿತ

|

ಚಿನ್ನ ಕೊಳ್ಳುವವರಿಗೆ ಇದೊಂದು ಶುಭ ಸುದ್ದಿ. ಕಳೆದ 5 ದಿನಗಳಿಂದ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯತ್ತ ಮುಖಮಾಡಿದೆ. ಮಂಗಳವಾರವು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಕಳೆದ 5 ದಿನಗಳಲ್ಲಿ 10 ಗ್ರಾಂ ಚಿನ್ನಕ್ಕೆ 750 ರುಪಾಯಿ ಕಡಿಮೆ ಆಗಿದೆ.

 

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಹಳದಿ ಲೋಹದ ಬೆಲೆ ಗಗನಕ್ಕೇರಿತ್ತು. 10 ಗ್ರಾಂ. ಚಿನ್ನದ ದರ 40,000 ಗಡಿದಾಟಿತ್ತು. ಆದರೆ ಆ ಬಳಿಕ ಇಲ್ಲಿಯವರೆಗೂ 10 ಗ್ರಾಂ. ಚಿನ್ನಕ್ಕೆ ಒಟ್ಟಾರೆ 2,450 ರುಪಾಯಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆಯು ಕೂಡ 0.09 ಪರ್ಸೆಂಟ್ ಇಳಿಕೆ ಕಂಡಿದ್ದು ಕೆಜಿಗೆ 43,465 ರುಪಾಯಿಗೆ ಮುಟ್ಟಿದೆ.

 
ಸತತ 5ನೇ ದಿನವೂ ಚಿನ್ನದ ಬೆಲೆ ಇಳಿಕೆ: 10 ಗ್ರಾಂಗೆ 750 ರು. ಕುಸಿತ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಇಂದು ಔನ್ಸ್ಗೆ 1,460.95 ಅಮೆರಿಕನ್ ಡಾಲರ್ ಇಳಿಸಲಾಗಿದೆ. ಏಕೆಂದರೆ ಚೀನಾದ ಆಮದಿನ ಮೇಲೆ ಅಮೆರಿಕಾ ಮುಂದಿನ ಸುತ್ತಿನ ಸುಂಕಗಳನ್ನು ಜಾರಿಗೆ ತರಲು ಡಿಸೆಂಬರ್ 15 ಗಡುವನ್ನು ವಿಧಿಸಲಾಗಿದ್ದು, ಹೂಡಿಕೆದಾರರು ಜಾಗರೂಕರಾಗಿದ್ದಾರೆ.

'ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದು, ವಾರಾಂತ್ಯದಲ್ಲಿ ಹೊಸ ಅಮೆರಿಕಾ ಸುಂಕಗಳು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಅಮೆರಿಕಾ-ಚೀನಾ ನಡುವೆ ಹೊಸ ವ್ಯಾಪಾರ ಒಪ್ಪಂದವನ್ನು ಆಶಿಸುತ್ತಿದ್ದೇವೆ' ಎಂದು ಚೀನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary

Gold Price Fall For The Fifth Consecutive Day

Gold prices in india were weak today, falling for the 5th consecutive day in row.
Story first published: Tuesday, December 10, 2019, 13:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X