ಸತತ 3 ದಿನ ಏರಿಕೆ ಕಂಡರೂ ಗರಿಷ್ಠ ಮಟ್ಟದಿಂದ 5 ಸಾವಿರ ಕೆಳಗಿದೆ ಚಿನ್ನ

ಚಿನ್ನ ಹಾಗೂ ಬೆಳ್ಳಿ ಬೆಲೆಯು ಭಾರತದ ಮಾರುಕಟ್ಟೆಯಲ್ಲಿ ಸೋಮವಾರ (ಅಕ್ಟೋಬರ್ 12, 2020) ಏರಿಕೆ ಕಂಡಿತು. ಎಂಸಿಎಕ್ಸ್ ನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ ದರ 0.4% ಹೆಚ್ಚಳವಾಗಿ, ಪ್ರತಿ 10 ಗ್ರಾಮ್ ಗೆ 51,016 ರುಪಾಯಿಯಂತೆ ವಹಿವಾಟು ನಡೆಸಿತು. ಸತತವಾಗಿ ಮೂರನೇ ದಿನ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಿಸಿತು.

ಇನ್ನು ಬೆಳ್ಳಿ ದರವು 1.4% ಹೆಚ್ಚಳವಾಗಿ, ಕೇಜಿಗೆ ರು. 63,769 ತಲುಪಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ದರವು ಪ್ರಬಲವಾದ ಏರಿಕೆಯೊಂದಿಗೆ ವಹಿವಾಟು ಮುಗಿಸಿತ್ತು. ಕ್ರಮವಾಗಿ 1.2% ಹಾಗೂ 4% ಏರಿಕೆ ದಾಖಲಿಸಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂತು. ಇದಕ್ಕೂ ಮುನ್ನ ಮೂರು ವಾರಗಳ ಗರಿಷ್ಠ ಮಟ್ಟದಲ್ಲಿದ್ದ ಬೆಲೆಯು ಕೆಳಗೆ ಇಳಿಯಿತು.

ಜಾಗತಿಕ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆ ಕುಸಿತ

ಜಾಗತಿಕ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆ ಕುಸಿತ

ಯುಎಸ್ ಡಾಲರ್ ಮೌಲ್ಯ ಬಲಿಷ್ಠವಾಗಿದ್ದು ಹಾಗೂ ಯುಎಸ್ ಕೊರೊನಾ ಆರ್ಥಿಕ ಪ್ಯಾಕೇಜ್ ನಲ್ಲಿನ ಅನಿಶ್ಚಿತತೆ ಚಿನ್ನದ ಮೇಲೆ ಒತ್ತಡವಾಗಿ ಕಂಡುಬಂತು. ಸ್ಪಾಟ್ ಗೋಲ್ಡ್ 0.2% ಕುಸಿದು, ಔನ್ಸ್ ಗೆ (28.3495 ಗ್ರಾಮ್) $ 1,925.29ರಲ್ಲಿ ವಹಿವಾಟು ನಡೆಸಿತು. ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ ಡಾಲರ್ ಸೂಚ್ಯಂಕವು 0.07% ಹೆಚ್ಚಳ ಕಂಡಿತು. ಇತರ ಕರೆನ್ಸಿಗಳ ಮೂಲಕ ಚಿನ್ನವನ್ನು ಖರೀದಿ ಮಾಡುವುದು ದುಬಾರಿಯಾಗಿ ಪರಿಣಮಿಸಿತು. ಇನ್ನು ಯುಎಸ್ ಸರ್ಕಾರದಿಂದ ಕೊರೊನಾ ಆರ್ಥಿಕ ಪ್ಯಾಕೇಜ್ ಘೋಷಣೆ ಅನಿಶ್ಚಿತತೆ ಮುಂದುವರಿದಿದೆ. ಈ ಮಾತುಕತೆಯಲ್ಲಿ ಬೆಳವಣಿಗೆ ಕಾಣದಿರುವುದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೊಸಿ ಪರಸ್ಪರ ದೋಷಾರೋಪದಲ್ಲಿ ತೊಡಗಿದ್ದಾರೆ.

ಇತರ ಬೆಲೆಬಾಳುವ ಲೋಹಗಳ ಬೆಲೆ

ಇತರ ಬೆಲೆಬಾಳುವ ಲೋಹಗಳ ಬೆಲೆ

ಇತರ ಬೆಲೆಬಾಳುವ ಲೋಹಗಳ ಪೈಕಿ ಬೆಳ್ಳಿ 0.4% ಇಳಿಕೆ ಕಂಡು, ಪ್ರತಿ ಔನ್ಸ್ ಗೆ $ 25.02ರಂತೆ ವಹಿವಾಟು ನಡೆಸಿದರೆ, ಪ್ಲಾಟಿನಂ 1% ಇಳಿಕೆ ಕಂಡು, $ 876.80ಗೆ ವ್ಯವಹಾರ ನಡೆಸಿತು. ಇನ್ನು ಪಲಾಡಿಯಂ 0.2% ಇಳಿಕೆ ಕಂಡು, $ 2,435.35 ತಲುಪಿತು. ಭಾನುವಾರದಂದು ಅಮೆರಿಕದ ಶ್ವೇತಭವನ ಯುಎಸ್ ಆರ್ಥಿಕತೆ ಚೇತರಿಕೆಗೆ ಉತ್ತೇಜನ ನೀಡಲು ಮತ್ತೊಮ್ಮೆ ತಂತ್ರ ಬದಲಾಯಿಸಿತು. ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ವಾರಗಳು ಬಾಕಿ ಇರುವಾಗ ಸಣ್ಣ- ಪುಟ್ಟ ವ್ಯಾಪಾರಗಳಿಗೆ ಸಹಾಯ ಮಾಡಲು ಒತ್ತಾಯಿಸಲಾಯಿತು. ಕೊರೊನಾ ಆರ್ಥಿಕ ಉತ್ತೇಜನ ಪ್ಯಾಕೇಜ್ $ 1.8 ಟ್ರಿಲಿಯನ್ ಅನ್ನು ಟ್ರಂಪ್ ರ ರಿಪಬ್ಲಿಕನ್ ಪಕ್ಷ ಹಾಗೂ ಡೆಮಾಕ್ರಟ್ಸ್ ತಿರಸ್ಕರಿಸಿದ ಮೇಲೆ ಈ ಬೆಳವಣಿಗೆ ಆಗಿದೆ.

ದೊಡ್ಡ ಮಟ್ಟದ ಆರ್ಥಿಕ ಪ್ಯಾಕೇಜ್ ಘೋಷಣೆ ನಿರೀಕ್ಷೆ

ದೊಡ್ಡ ಮಟ್ಟದ ಆರ್ಥಿಕ ಪ್ಯಾಕೇಜ್ ಘೋಷಣೆ ನಿರೀಕ್ಷೆ

ವಿಶ್ವದಾದ್ಯಂತ ವಿವಿಧ ಸರ್ಕಾರಗಳು, ಕೇಂದ್ರ ಬ್ಯಾಂಕ್ ಗಳು ಕೊರೊನಾ ಬಿಕ್ಕಟ್ಟಿನ ಸಲುವಾಗಿ ಘೋಷಿಸಿದ ಪ್ಯಾಕೇಜ್ ಗಳಿಂದ ಈ ವರ್ಷ ಚಿನ್ನದ ದರ ಮೇಲೇರಿದೆ. ಆಗಸ್ಟ್ ತಿಂಗಳ ಗರಿಷ್ಠ ಎತ್ತರದಿಂದ ಇಳಿಕೆ ಕಂಡಿದ್ದರೂ ಚಿನ್ನದ ದರವೂ ಈ ವರ್ಷ 29% ಏರಿಕೆ ದಾಖಲಿಸಿದೆ. ಜಾಗತಿಕ ಮಟ್ಟದ ಏರಿಕೆಯನ್ನು ಚಿನ್ನವು ಅನುಸರಿಸಿದೆ. ಒಂದು ವೇಳೆ ಯುಎಸ್ ನಲ್ಲಿ ಡೆಮಾಕ್ರಟ್ ಗಳು ಅಧಿಕಾರಕ್ಕೆ ಬಂದು, ದೊಡ್ಡ ಮಟ್ಟದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದಲ್ಲಿ ಚಿನ್ನದ ದರಕ್ಕೆ ತಳ ಮಟ್ಟದಲ್ಲಿ ಬೆಂಬಲ ದೊರೆಯುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಕಳೆದ ಆಗಸ್ಟ್ ನಲ್ಲಿ ಚಿನ್ನದ ಫ್ಯೂಚರ್ಸ್ ಪ್ರತಿ 10 ಗ್ರಾಮ್ ಗೆ ದಾಖಲೆಯ 56,200 ರುಪಾಯಿ ಮುಟ್ಟಿತ್ತು.

ಭಾರತದಲ್ಲಿ ಡೀಲರ್ ಗಳಿಂದ ಪ್ರೀಮಿಯಂಗೆ ಮಾರಾಟ

ಭಾರತದಲ್ಲಿ ಡೀಲರ್ ಗಳಿಂದ ಪ್ರೀಮಿಯಂಗೆ ಮಾರಾಟ

ಭಾರತದಲ್ಲಿ ಇನ್ನೇನು ಹಬ್ಬಗಳ ಋತು ಆರಂಭವಾಗಲಿದೆ. ಸರ್ಕಾರದಿಂದ ಮತ್ತೊಂದು ಕಂತಿನ ಸವರನ್ ಗೋಲ್ಡ್ ಬಾಂಡ್ ಬಿಡುಗಡೆ ಮಾಡಲಾಗುತ್ತಿದ್ದು, ಸೋಮವಾರದಿಂದ (ಅಕ್ಟೋಬರ್ 12, 2020) ಸಬ್ ಸ್ಕ್ರಿಪ್ಷನ್ ಆರಂಭವಾಗಿದೆ. ಸರ್ಕಾರದ ಪರವಾಗಿ ಆರ್ ಬಿಐ ಚಿನ್ನದ ಬಾಂಡ್ ವಿತರಿಸಲಿದ್ದು, ಪ್ರತಿ ಗ್ರಾಮ್ ಗೆ 5,051 ರುಪಾಯಿ ಬೆಲೆ ನಿಗದಿ ಮಾಡಲಾಗಿದೆ. ಆನ್ ಲೈನ್ ಮೂಲಕ ಅಪ್ಲೈ ಮಾಡಿದಲ್ಲಿ ಹಾಗೂ ಡಿಜಿಟಲ್ ಪಾವತಿ ಮಾಡಿದಲ್ಲಿ ಪ್ರತಿ ಗ್ರಾಮ್ ಗೆ 50 ರುಪಾಯಿ ರಿಯಾಯಿತಿ ಸಿಗುತ್ತದೆ. ಈ ಸಬ್ ಸ್ಕ್ರಿಪ್ಷನ್ ಅಕ್ಟೋಬರ್ 16ಕ್ಕೆ ಮುಕ್ತಾಯ ಆಗುತ್ತದೆ. ಈ ಮಧ್ಯೆ ಡೀಲರ್ ಗಳು ಫಿಸಿಕಲ್ ಚಿನ್ನವನ್ನು ಭಾರತದಲ್ಲಿ ಎರಡು ತಿಂಗಳಲ್ಲೇ ಮೊದಲ ಬಾರಿಗೆ ಪ್ರೀಮಿಯಂನಲ್ಲಿ ಮಾರಾಟ ಮಾಡಿದ್ದಾರೆ. ಹಬ್ಬದ ಋತುವಿನ ಕಾರಣಕ್ಕೆ ಹೀಗೆ ಬೆಳವಣಿಗೆ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆಯಲ್ಲಿ 12.5% ಆಮದು ಸುಂಕ ಹಾಗೂ 3% ಜಿಎಸ್ ಟಿ ಒಳಗೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+