ಚಿನ್ನ, ಬೆಳ್ಳಿಯ ಭಾರೀ ಕುಸಿತದ ನಂತರ ಮತ್ತೆ ಅಲ್ಪ ಏರಿಕೆ

ಭಾರತದ ಎಂಸಿಎಕ್ಸ್ ನಲ್ಲಿ ಮಂಗಳವಾರ (ಸೆಪ್ಟೆಂಬರ್ 22, 2020) ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಚಿನ್ನದ ದರ ಪ್ರತಿ ಹತ್ತು ಗ್ರಾಮ್ ಗೆ 0.14% ಹೆಚ್ಚಳವಾಗಿ, 50,544 ರುಪಾಯಿ ಮುಟ್ಟಿದೆ. ಇನ್ನು ಬೆಳ್ಳಿ ಫ್ಯೂಚರ್ಸ್ 0.9% ಏರಿಕೆ ಕಂಡು, ಪ್ರತಿ ಕೇಜಿಗೆ 61,867 ರುಪಾಯಿ ತಲುಪಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆ ಹತ್ತು ಗ್ರಾಮ್ ಗೆ 1200 ರುಪಾಯಿ ಹಾಗೂ ಬೆಳ್ಳಿ ಕೇಜಿಗೆ 6,300 ರುಪಾಯಿ ಇಳಿದಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿತು. ಇದಕ್ಕೂ ಮುಂಚಿನ ಸೆಷನ್ ನಲ್ಲಿ 3%ಗೂ ಹೆಚ್ಚು ಇಳಿಕೆ ಕಂಡಿತ್ತು. ಇನ್ನು ಸ್ಪಾಟ್ ಗೋಲ್ಡ್ 0.3% ಏರಿಕೆಯಾಗಿ, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1918.20 ತಲುಪಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನವು ತಿಂಗಳಲ್ಲೇ ಕನಿಷ್ಠ ಮಟ್ಟವಾದ 1882.70 ಡಾಲರ್ ತಲುಪಿಕೊಂಡಿತ್ತು. ಅಮೆರಿಕ ಡಾಲರ್ ಮೌಲ್ಯ ಆರು ವಾರಗಳ ಗರಿಷ್ಠ ಮಟ್ಟ ತಲುಪಿದ ಪರಿಣಾಮ ಇದು.

ಮತ್ತೊಂದು ಸುತ್ತು ಕೊರೊನಾ ಹಬ್ಬುವ ಆತಂಕ

ಮತ್ತೊಂದು ಸುತ್ತು ಕೊರೊನಾ ಹಬ್ಬುವ ಆತಂಕ

ಮತ್ತೆ ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯ ಆತಂಕದಲ್ಲಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಇನ್ನು ಡಾಲರ್ ಮೌಲ್ಯವು ಪ್ರತಿಸ್ಪರ್ಧಿ ಕರೆನ್ಸಿಗಳ ವಿರುದ್ಧ ಜಾರಿತು. ಇನ್ನು ಚಿನ್ನವನ್ನು ಹೂಡಿಕೆಗೆ ಸುರಕ್ಷಿತ ಎಂದು ಭಾವಿಸುವುದರಿಂದ ರಾಜಕೀಯ ಹಾಗೂ ಆರ್ಥಿಕ ಅಸ್ಥಿರತೆಯು ಈ ವರ್ಷದ ಚಿನ್ನದ ಬೆಲೆಯಲ್ಲಿ 26% ಹೆಚ್ಚಳ ಆಗಲು ಕಾರಣವಾಗಿದೆ.

ಬೆಳ್ಳಿಯು ಪ್ರತಿ ಔನ್ಸ್ ಗೆ 25 ಡಾಲರ್ ಹೆಚ್ಚಳ

ಬೆಳ್ಳಿಯು ಪ್ರತಿ ಔನ್ಸ್ ಗೆ 25 ಡಾಲರ್ ಹೆಚ್ಚಳ

ಅದೇ ರೀತಿ ಬೆಳ್ಳಿಯು ಪ್ರತಿ ಔನ್ಸ್ ಗೆ 25 ಡಾಲರ್ ಹೆಚ್ಚಳ ಕಂಡಿತು. ಇನ್ನು ಪ್ಲಾಟಿನಂ $ 886.20ಕ್ಕೆ ಹಾಗೂ ಪಲಾಡಿಯಂ 2,285.44 ಡಾಲರ್ ತಲುಪಿತು. ಷೇರು, ಚಿನ್ನವೂ ಸೇರಿದಂತೆ ಇತರ ಆಸ್ತಿಗಳನ್ನು ಸೋಮವಾರ ಮಾರಾಟ ಮಾಡಲಾಗಿದೆ. ಯುರೋಪ್ ನಲ್ಲಿ ಮತ್ತೆ ಲಾಕ್ ಡೌನ್ ಹೇರಬಹುದು ಎಂಬ ಆತಂಕ ಎದುರಾಗಿದೆ. ಇನ್ನು ನಿರುದ್ಯೋಗಿಗಳಿಗೆ ಭರವಸೆ ನೀಡಿದಂತೆ ಆರ್ಥಿಕ ಉತ್ತೇಜನ ನೀಡಲು ಯುಎಸ್ ಗೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಹೂಡಿಕೆದಾರರು ಯುಎಸ್ ಡಾಲರ್ ಕಡೆಗೆ ನೋಡುತ್ತಿದ್ದಾರೆ.

ಯಾವ ಅಂಶಗಳು ನಿರ್ಣಾಯಕವಾಗಲಿವೆ?

ಯಾವ ಅಂಶಗಳು ನಿರ್ಣಾಯಕವಾಗಲಿವೆ?

ಇನ್ನು ಮುಂದೆ ಕೊರೊನಾಗೆ ಸಂಬಂಧಿಸಿದಂತೆ ಆಗುವ ಬೆಳವಣಿಗೆಗಳು, ಯುಎಸ್- ಚೀನಾ ಮಧ್ಯೆ ಉದ್ವಿಗ್ನತೆ, ಬ್ರೆಕ್ಸಿಟ್ ಒಪ್ಪಂದಗಳು, ಯುಎಸ್ ನಿಂದ ಘೋಷಣೆ ಆಗುವ ಆರ್ಥಿಕ ಉತ್ತೇಜನ ಕ್ರಮಗಳು ಹಾಗೂ ಅದರ ಮೂಲಕ ಯುಎಸ್ ಡಾಲರ್ ಮೇಲೆ ಆಗುವ ಪರಿಣಾಮಗಳನ್ನು ಅವಲಂಬಿಸಿದೆ. ಇದರ ಜತೆಜತೆಗೆ ಸಾಮಾನ್ಯ ಸವಾಲುಗಳು, ಚಿನ್ನ ಮೊದಲಾದವುಗಳ ಟ್ರೆಂಡ್ ಗಳನ್ನು ಅವಲಂಬಿಸಿರುತ್ತದೆ ಎಂದು ಕೊಟಕ್ ಸೆಕ್ಯೂರಿಟೀಸ್ ತಿಳಿಸಿದೆ. ಯು.ಎಸ್. ಫೆಡ್ ಅಧ್ಯಕ್ಷ ಜೆರೊಮ್ ಪೊವೆಲ್ ಸೋಮವಾರ ಮಾತನಾಡಿ, ಕೊರೊನಾ ವೈರಸ್ ಹೊಡೆತದಿಂದ ಯುಎಸ್ ಆರ್ಥಿಕತೆ ಚೇತರಿಸಿಕೊಳ್ಳಲು ಬೇಕಾದ ಎಲ್ಲ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+