ಚಿನ್ನದ ದರವು ಬುಧವಾರ ಗರಿಷ್ಠ ಮಟ್ಟ ಮುಟ್ಟುವ ಮೂಲಕ ಹೊಸ ದಾಖಲೆ ಬರೆದಿದೆ. ಬೆಳಗ್ಗೆ ಪ್ರತಿ ಹತ್ತು ಗ್ರಾಮ್ ಗೆ 48,333 ರುಪಾಯಿಗೆ ವಹಿವಾಟು ನಡೆಸಿತು. ಮಾರ್ಚ್ ನಲ್ಲಿ 10 ಗ್ರಾಮ್ ಚಿನ್ನದ ಬೆಲೆ 38,500 ರುಪಾಯಿ ಇದ್ದಿದ್ದು, 25 ಪರ್ಸೆಂಟ್ ಏರಿಕೆ ದಾಖಲಿಸಿದೆ. ಆಗಸ್ಟ್ ತಿಂಗಳ ಚಿನ್ನದ ಫ್ಯೂಚರ್ ವಹಿವಾಟು 10 ಗ್ರಾಮ್ ಗೆ 48,264 ರುಪಾಯಿ ಇದೆ.
ಇನ್ನು ಎಂಸಿಎಕ್ಸ್ ನಲ್ಲಿ ಜುಲೈ ತಿಂಗಳ ಬೆಳ್ಳಿ ಫ್ಯೂಚರ್ಸ್ ಒಂದು ಕೇಜಿಗೆ 48,770 ರುಪಾಯಿ ಇದೆ. ಯು.ಎಸ್.ನಲ್ಲಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹಣ ಹಾಕಲು ಆಸಕ್ತಿ ತೋರಿಸಿದ್ದಾರೆ. ಯು.ಎಸ್.- ಚೀನಾ ಮಧ್ಯೆ ಮತ್ತೆ ತಲೆದೋರಿರುವ ವ್ಯಾಪಾರ ಬಿಕ್ಕಟ್ಟು ಹಾಗೂ ದುರ್ಬಲವಾಗಿರುವ ಡಾಲರ್ ಕಾರಣಕ್ಕೆ ಚಿನ್ನ ಬೆಂಬಲ ಪಡೆಯುತ್ತಿದೆ ಎನ್ನುತ್ತಾರೆ ತಜ್ಞರು.

ಚಿನ್ನದ ಬೆಲೆ 48,600ರಿಂದ 48,800 ರುಪಾಯಿ ತನಕ ಏರಬಹುದು ಎಂಬುದು ವಿಶ್ಲೇಷಕರ ಅಭಿಮತ. ಈ ಹಿಂದೆ ಚಿನ್ನವು ಹತ್ತು ಗ್ರಾಮ್ ಗೆ ದಾಖಲಿಸಿದ್ದ ಹತ್ತು ಗ್ರಾಮ್ ಗೆ 48,299 ರುಪಾಯಿ ಬೆಲೆಯನ್ನೂ ಈ ದಿನ ದಾಟಿತು. ಜಾಗತಿಕ ಮಟ್ಟದಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications