For Quick Alerts
ALLOW NOTIFICATIONS  
For Daily Alerts

ಆರಂಭದ ವಹಿವಾಟಿನಲ್ಲಿ ಚಿನ್ನ ಸಾರ್ವಕಾಲಿಕ ದಾಖಲೆ; 10 ಗ್ರಾಮ್ ರು. 53,000

|

ಭಾರತದ MCXನಲ್ಲಿ ಚಿನ್ನದ ಬೆಲೆ ಗುರುವಾರ (ಜುಲೈ 30, 2020) ಬೆಳಗ್ಗೆ ಹೊಸ ದಾಖಲೆ ಬರೆಯಿತು. ಚಿನ್ನದ ಬೆಲೆ 10 ಗ್ರಾಮ್ ಗೆ 184 ರುಪಾಯಿ ಹೆಚ್ಚಳವಾಗಿ, 53,371 ರುಪಾಯಿ ತಲುಪಿ, ಸಾರ್ವಕಾಲಿಕ ದಾಖಲೆ ಬರೆಯಿತು. ಇನ್ನು ಬೆಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳವಾಗಿ ಕೇಜಿಗೆ 65,276 ರುಪಾಯಿ ಮುಟ್ಟಿತು.

ಸಾರ್ವಕಾಲಿಕ ಎತ್ತರಕ್ಕೆ ಏರಿದ ಚಿನ್ನ, ಎಂಟು ವರ್ಷದ ಗರಿಷ್ಠ ಮಟ್ಟಕ್ಕೆ ಬೆಳ್ಳಿಸಾರ್ವಕಾಲಿಕ ಎತ್ತರಕ್ಕೆ ಏರಿದ ಚಿನ್ನ, ಎಂಟು ವರ್ಷದ ಗರಿಷ್ಠ ಮಟ್ಟಕ್ಕೆ ಬೆಳ್ಳಿ

ಚಿನಿವಾರ ಪೇಟೆ ಹಾಗೂ ಫ್ಯೂಚರ್ಸ್ ಎರಡರಲ್ಲೂ ಇದೇ ಮೊದಲ ಬಾರಿಗೆ ಹತ್ತು ಗ್ರಾಮ್ ಚಿನ್ನದ ಬೆಲೆ 53 ಸಾವಿರ ರುಪಾಯಿಯ ಗಡಿ ದಾಟಿದೆ. ಅಮೆರಿಕದಲ್ಲಿ ಹೆಚ್ಚುವರಿ ಆರ್ಥಿಕ ಪ್ಯಾಕೇಜ್ ಬಗ್ಗೆ ಅನಿಶ್ಚಿತತೆ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಬುಧವಾರ ಇಳಿಕೆ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಿಸಿಕಲ್ ಗೋಲ್ಡ್ ಬೇಡಿಕೆ 36% ಇಳಿಕೆ ಆಗಿದೆ. 2019ರ ಮೊದಲ ತ್ರೈ ಮಾಸಿಕದ ನಂತರ ಇದೇ ಮೊದಲ ಬಾರಿಗೆ ಬೇಡಿಕೆ ಕಡಿಮೆ ಆಗಿದೆ.

ಆರಂಭದ ವಹಿವಾಟಿನಲ್ಲಿ ಚಿನ್ನ ಸಾರ್ವಕಾಲಿಕ ದಾಖಲೆ; 10 ಗ್ರಾಮ್ 53,000

ಆದರೆ, ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಳಿತ ಇರಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಅಮೆರಿಕದ ಫೆಡ್ ನೀತಿ ಘೋಷನೆ ನಂತರ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಬಹುದು ಎಂಬುದು ತಜ್ಞರ ವಿಶ್ಲೇಷಣೆ. ಅಲ್ಪಾವಧಿಯಲ್ಲಿ ಹತ್ತು ಗ್ರಾಮ್ ಚಿನ್ನದ ಬೆಲೆಯು 52,160ರಿಂದ 52,950 ರುಪಾಯಿ ಮಧ್ಯೆ ವಹಿವಾಟು ಆಗಬಹುದು ಎನ್ನಲಾಗುತ್ತಿದೆ.

English summary

Gold Price Record All Time High In India MCX; Crossed 53000

Gold price crossed 53,000 mark in MCX on Thursday, made all time high record. Here is the complete details, along with silver rate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X