ಸತತ ಮೂರು ದಿನ ಏರಿಕೆ ಕಂಡರೂ ಚಿನ್ನದ ದರ ದಾಖಲೆ ಬೆಲೆಯಿಂದ 4 ಸಾವಿರ ಕೆಳಗೆ

ಭಾರತೀಯ ಮಾರುಕಟ್ಟೆಯಲ್ಲಿ ಸೋಮವಾರ (ನವೆಂಬರ್ 9, 2020) ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂತು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಬಾಳುವ ಲೋಹಗಳ ಗಳಿಕೆ ವಿಸ್ತರಣೆ ಆದ ಹಿನ್ನೆಲೆಯಲ್ಲಿ ಅದರ ಪರಿಣಾಮ ಭಾರತದಲ್ಲೂ ಆಗಿದೆ. MCXನಲ್ಲಿ ಚಿನ್ನದ ಫ್ಯೂಚರ್ಸ್ 0.16% ಏರಿಕೆ ಕಂಡು, ಪ್ರತಿ 10 ಗ್ರಾಮ್ ಗೆ 52,252 ರುಪಾಯಿ ತಲುಪಿದೆ.

ಇನ್ನು ಬೆಳ್ಳಿ ಬೆಲೆಯಲ್ಲಿ 0.8% ಹೆಚ್ಚಳವಾಗಿ, ಪ್ರತಿ ಕೇಜಿಗೆ 65,880 ರುಪಾಯಿಯಂತೆ ವಹಿವಾಟು ನಡೆಸಿದೆ. ಈ ವಾರ ಚಿನ್ನದ ದರದಲ್ಲಿ ಭರ್ಜರಿ ಏರಿಕೆ ಆಗಿದೆ. 5 ದಿನಗಳಲ್ಲಿ 10 ಗ್ರಾಮ್ ಗೆ 1,500 ರುಪಾಯಿಯಷ್ಟು ಗಳಿಕೆ ಕಂಡಿದೆ. ಇನ್ನೊಂದು ಕಡೆ, ಬೆಳ್ಳಿ ಬೆಲೆಯಲ್ಲೂ ಈ ವಾರ ಉತ್ತಮ ಏರಿಕೆ ಆಗಿದೆ. ಕೇಜಿಗೆ 4,000 ರುಪಾಯಿಯಷ್ಟು ಗಳಿಕೆ ಕಂಡಿದೆ. ಕಳೆದ ಆಗಸ್ಟ್ ನಲ್ಲಿ ಪ್ರತಿ ಹತ್ತು ಗ್ರಾಮ್ ಗೆ 56,200 ರುಪಾಯಿ ತಲುಪಿದ್ದ ಚಿನ್ನ, ಹೊಸ ದಾಖಲೆ ಬರೆದಿತ್ತು.

ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆ

ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆ

ಜೋ ಬೈಡೆನ್ ಅಧ್ಯಕ್ಷರಾದ ಮೇಲೆ ಯುಎಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಕೊರೊನಾ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡುಬಹುದು ಎಂಬ ನಿರೀಕ್ಷೆ, ದುರ್ಬಲ ಡಾಲರ್ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ದಾಖಲಿಸಿತು. ಚಿನ್ನದ ದರವು ಪ್ರತಿ ಔನ್ಸ್ ಗೆ 0.2% ಏರಿಕೆ ಕಂಡು, $ 1,955.76 ಮುಟ್ಟಿತು. ಇನ್ನು ಬೆಳ್ಳಿ ದರವು ಔನ್ಸ್ ಗೆ 0.5% ಹೆಚ್ಚಳವಾಗಿ, $25.72 ತಲುಪಿತು. ಪ್ಲಾಟಿನಂ 0.8% ಗಳಿಕೆ ಕಂಡು, $896 ಮುಟ್ಟಿತು. ಡಾಲರ್ ಸೂಚ್ಯಂಕವು ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಯ ಕನಿಷ್ಠ ಮಟ್ಟವಾದ 92.177ರ ಸಮೀಪವಿದೆ. ಹೀಗೆ ಡಾಲರ್ ದುರ್ಬಲವಾದಲ್ಲಿ ಇತರ ಕರೆನ್ಸಿಗಳನ್ನು ಇರಿಸಿಕೊಂಡವರಿಗೆ ಚಿನ್ನ ಖರೀದಿ ಕೈಗೆಟುಕುತ್ತದೆ. ಏಕೆಂದರೆ ಚಿನ್ನದ ವಹಿವಾಟು ಬಹುತೇಕ ನಡೆಯುವುದು ಡಾಲರ್ ಮೂಲಕ. ಭಾರತ ಅದರಲ್ಲಿ ಅತಿ ದೊಡ್ಡ ಆಮದುದಾರ ದೇಶ.

ಇಟಿಎಫ್ ಹೂಡಿಕೆದಾರರು ಇಷ್ಟು ಸಮಯ ನಿರೀಕ್ಷೆಯಲ್ಲಿದ್ದರು

ಇಟಿಎಫ್ ಹೂಡಿಕೆದಾರರು ಇಷ್ಟು ಸಮಯ ನಿರೀಕ್ಷೆಯಲ್ಲಿದ್ದರು

ಇಷ್ಟು ಸಮಯ ಇಟಿಎಫ್ ಹೂಡಿಕೆದಾರರು ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಏನಾಗಬಹುದು ಎಂದು ಎದುರು ನೋಡುತ್ತಿದ್ದರು. ಈಗ ಜೋ ಬೈಡೆನ್ ಆಯ್ಕೆ ಖಚಿತವಾದಂತೆ ಆಗಿದೆ. ಆ ಹಿನ್ನೆಲೆಯಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಚಿನ್ನದ ಇಟಿಎಫ್ ಎಸ್ ಪಿಡಿಆರ್ ಗೋಲ್ಡ್ ಟ್ರಸ್ಟ್ ನಲ್ಲಿನ ಹೋಲ್ಡಿಂಗ್ಸ್ ಶುಕ್ರವಾರದಂದು 0.63% ಹೆಚ್ಚಳವಾಗಿ, 1,260.30 ಟನ್ ತಲುಪಿದೆ. ಇನ್ನು ವಿಶ್ವದಾದ್ಯಂತ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿರುವಂತೆಯೇ ಅದರಿಂದ ಕೂಡ ಚಿನ್ನಕ್ಕೆ ಅನುಕೂಲ ಒದಗಿ ಬರಲಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಐದು ಕೋಟಿ ದಾಟಿದೆ.

ಜನವರಿಗೆ ಮುಂಚೆ ಆರ್ಥಿಕ ಉತ್ತೇಜನ ಘೋಷಣೆ ಸಾಧ್ಯತೆ

ಜನವರಿಗೆ ಮುಂಚೆ ಆರ್ಥಿಕ ಉತ್ತೇಜನ ಘೋಷಣೆ ಸಾಧ್ಯತೆ

ಯಾವಾಗ ಬೈಡೆನ್ ಗೆಲುವು ಘೋಷಣೆ ಆಯಿತೋ ಆಗಿನಿಂದಲೇ ಅಮೆರಿಕ ಆರ್ಥಿಕ ಸ್ಥಿತಿ ಚೇತರಿಕೆಗೆ ಅಗತ್ಯ ಕ್ರಮಗಳ ರೂಪು- ರೇಷೆ ಸಿದ್ಧವಾಗುತ್ತಿದೆ. ಜನವರಿಗೂ ಮುಂಚೆ ಪ್ರಮುಖ ಆರ್ಥಿಕ ಉತ್ತೇಜನ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನುತ್ತಾರೆ ವಿಶ್ಲೇಷಕರು. ಆರ್ಥಿಕ ಉತ್ತೇಜನ ಕ್ರಮಗಳು ಹೆಚ್ಚೆಚ್ಚು ಘೋಷಣೆ ಮಾಡಿದಷ್ಟೂ ಅದರಿಂದ ಚಿನ್ನದ ದರಕ್ಕೆ ಬೆಂಬಲ ಸಿಗುತ್ತದೆ. ಏಕೆಂದರೆ, ಹಣದುಬ್ಬರ ತಡೆಗೆ ಚಿನ್ನವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಇನ್ನು ಕೊರೊನಾ ವಿರುದ್ಧ ಕ್ಷಿಪ್ರ ಕ್ರಮ ಕೈಗೊಳ್ಳುವ ಬಗ್ಗೆ ಬೈಡೆನ್ ಭರವಸೆ ನೀಡಿದ್ದರು. ಮತ್ತು ಅಧಿಕಾರದ ಸರಿಯಾದ ವರ್ಗಾವಣೆ ಕೂಡ ಮಾತನಾಡಿದ್ದರು.

ಸವರನ್ ಗೋಲ್ಡ್ ಬಾಂಡ್ ಸಬ್ ಸ್ಕ್ರಿಪ್ಷನ್

ಸವರನ್ ಗೋಲ್ಡ್ ಬಾಂಡ್ ಸಬ್ ಸ್ಕ್ರಿಪ್ಷನ್

ಈಚಿನ ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2020- 21 ಸಿರೀಸ್ VIIIರ ಸಬ್ ಸ್ಕ್ರಿಪ್ಷನ್ ನವೆಂಬರ್ 9ರಿಂದ 13, 2020ರ ಮಧ್ಯೆ ಲಭ್ಯವಾಗಲಿದೆ. ಪ್ರತಿ ಗ್ರಾಮ್ ಗೆ 5,177 ರುಪಾಯಿ ಎಂದು ನಿಗದಿ ಮಾಡಲಾಗಿದೆ. ಯಾವ ಹೂಡಿಕೆದಾರರು ಆನ್ ಲೈನ್ ಮೂಲಕ ಅಪ್ಲೈ ಮಾಡುತ್ತಾರೋ ಹಾಗೂ ಡಿಜಿಟಲ್ ಪಾವತಿ ಮಾಡುತ್ತಾರೋ ಅಂಥವರಿಗೆ ಪ್ರತಿ ಗ್ರಾಮ್ ಗೆ ಐವತ್ತು ರುಪಾಯಿ ರಿಯಾಯಿತಿ ನೀಡುತ್ತದೆ. ಅಂಥ ಹೂಡಿಕೆದಾರರಿಗೆ ಪ್ರತಿ ಗ್ರಾಮ್ ಗೆ 5127 ರುಪಾಯಿಯಂತೆ ದೊರೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+