For Quick Alerts
ALLOW NOTIFICATIONS  
For Daily Alerts

ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಏರಿಕೆ

|

ದೇಶಾದ್ಯಂತ ಚಿನ್ನದ ಬೆಲೆಯು ಬುಧವಾರ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 398 ರುಪಾಯಿ ಏರಿಕೆಗೊಂಡು 38,407ಕ್ಕೆ ತಲುಪಿದೆ. ರಾಜಧಾನಿ ದೆಹಲಿಯಲ್ಲಿ 225 ರುಪಾಯಿ ಹೆಚ್ಚಾಗಿ 10 ಗ್ರಾಂ ಚಿನ್ನದ ದರ 38,715ಕ್ಕೆ ತಲುಪಿದೆ.

ಡಾಲರ್ ಎದುರು ದುರ್ಬಲಗೊಂಡ ರುಪಾಯಿ:2 ತಿಂಗಳಿನಲ್ಲಿ ಕನಿಷ್ಟಡಾಲರ್ ಎದುರು ದುರ್ಬಲಗೊಂಡ ರುಪಾಯಿ:2 ತಿಂಗಳಿನಲ್ಲಿ ಕನಿಷ್ಟ

ದೇಶಾದ್ಯಂತ ಮಂಗಳವಾರ (ನವೆಂಬರ್ 12)ದಂದು ಚಿನ್ನದ ದರ 10 ಗ್ರಾಂ 38,490 ದಾಖಲಾಗಿತ್ತು. ಆದರೆ ಮದುವೆ ದಿನಗಳ ಬೇಡಿಕೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯಿಂದ ಚಿನ್ನದ ಬೆಲೆ ಹೆಚ್ಚಾಗಿದೆ.

ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಏರಿಕೆ

ಬೆಳ್ಳಿ ದರ ಕೂಡ 440 ರುಪಾಯಿ ಏರಿಕೆಗೊಂಡಿದೆ. 1 ಕೆ.ಜಿ ಬೆಳ್ಳಿ ದರವು 45,040 ರುಪಾಯಿಯಿಂದ 45,480ಕ್ಕೆ ತಲುಪಿದೆ. ಅಮೆರಿಕಾ-ಚೀನಾ ಒಪ್ಪಂದದ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಪಷ್ಟತೆಯ ಕೊರತೆಯಿಂದಾಗಿ ಹೂಡಿಕೆದಾರರಲ್ಲಿ ಅನಿಶ್ಚಿತತೆಯನ್ನು ಹುಟ್ಟುಹಾಕಿತು. ಪರಿಣಾಮ ಸುರಕ್ಷಿತ ಹೂಡಿಕೆಯಾದ ಚಿನ್ನವು ಹೂಡಿಕೆದಾರರನ್ನು ಆಕರ್ಷಿಸಿದೆ.

English summary

Gold Price Rises On Wedding Season Demand

Gold in national capital rised Rs225 per gram on wednesday heped by wedding season demand and rally in international prices.
Story first published: Thursday, November 14, 2019, 9:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X