ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶುರುವಾಗಿದೆ. ಇರಾನ್ ಮೇಲೆ ಇಸ್ರೇಲ್-ಅಮೆರಿಕ ರಣದಾಳಿ ನಡೆಸುತ್ತಿವೆ. ಇರಾನ್ ಕೂಡ ಇಸ್ರೇಲ್-ಅಮೆರಿಕ ವಿರುದ್ಧ ತೊಡೆ ತಟ್ಟಿ ನಿಂತಿದೆ. ಈ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ಕೊಂಚ ಸಂಚಲನ ಸೃಷ್ಟಿಯಾಗಿದೆ. ಇದರಿಂದ ತೈಲ ಬೆಲೆ ಏರಿಕೆ, ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಇದ್ದರೂ ಇಂದು ಚಿನ್ನದ ಬೆಲೆ ಇಳಿಕೆಯಾಗಿರುವುದು ನಿಜಕ್ಕೂ ಒಂದು ಖುಷಿ ಸಂಗತಿ. ಇಂತಹ ಜಾಗತಿಕ ಬೆಳವಣಿಗೆಗಳು ಕಂಡಾಗ ಚಿನ್ನದ ಬೆಲೆಯು ಏರಿಕೆ ಹಾದಿ ಹಿಡಿಯುತ್ತವೆ. ಆದ್ರೆ ಕೆಲವೊಮ್ಮೆ ಇಂತಹ ಪಾಸಿಟಿವ್ ಸೂಚನೆಗಳೂ ಕೂಡ ಕಂಡುಬರುತ್ತವೆ.

ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ಭರ್ಜರಿ ಇಳಿಕೆ ನೋಡಿದೆ. ನಿನ್ನೆ ಭಾನುವಾರ, ಷೇರು ಮಾರುಕಟ್ಟೆ ತೆರೆದಿರಲ್ಲ. ಹಾಗೆಯೇ ಚಿನ್ನದ ಬೆಲೆಯು ಏರಿಕೆಯಾಗಲ್ಲ. ಹೀಗಿದ್ದರೂ ನಿನ್ನೆ ಊಹೆಗೂ ಮೀರಿದ ಏರಿಕೆಯಾಗಿತ್ತು. ಇಂದು ಕೂಡ ಚಿನ್ನದ ಬೆಲೆ ಏರಿಕೆಯಾಗಬಹುದು ಎಂದು ಊಹೆಯೂ ಇತ್ತು. ಆದರೆ ಇಂದು ಬೆಲೆ ಇಳಿಕೆಯಾಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? ಇಲ್ಲಿನ ಬೆಲೆ ವಿವರಗಳನ್ನು ಓದಿ ತಿಳಿಯಿರಿ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 16,980 ರೂ.ಗಳಲ್ಲಿ ನಡೆಯುತ್ತಿದ್ದು, ನಿನ್ನೆ ಈ ಬೆಲೆ 17,309 ಇತ್ತು. ಇಂದು 1 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 329 ರೂ. ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ 1,69,800 ರೂ. ಆಗಿದ್ದು, ನಿನ್ನೆ 1,73,090 ರೂ. ಆಗಿತ್ತು. ಇಂದು 10 ಗ್ರಾಂನಲ್ಲಿ 3,290 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 16,98,000 ಆಗಿದ್ದು, ನಿನ್ನೆ ಈ ಬೆಲೆ 17,30,900 ಆಗಿತ್ತು. ನಿನ್ನೆಗಿಂತ ಇಂದಿನ 100 ಗ್ರಾಂ ಚಿನ್ನದಲ್ಲಿ 32,900 ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಇದೇ ರೀತಿ 22 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆ ಹಾದಿ ಹಿಡಿದಿದೆ. ಇಂದು ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 15,565 ರೂ. ಆಗಿದೆ. ನಿನ್ನೆ ಇದು 15,865 ರೂ. ಆಗಿತ್ತು. ಇಂದು 300 ರೂ. ಇಳಿಕೆಯಾಗಿದೆ. ನಿನ್ನೆ 1,58,650 ರೂ. ಇದ್ದ 22 ಕ್ಯಾರೆಟ್ 10 ಗ್ರಾಂ ಚಿನ್ನ ಇಂದು 1,55,650 ರೂ. ಆಗಿದ್ದು ಬರೋಬ್ಬರಿ 3,000 ರೂ. ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು 15,56,500 ಆಗಿದ್ದು, ನಿನ್ನೆ ಇದು 15,86,500 ರೂ. ಇತ್ತು. ಬರೋಬ್ಬರಿ 30,000 ರೂ. ಇಳಿಕೆಯಾಗಿ ಆಭರಣ ಪ್ರಿಯರಿಗೆ ಖುಷಿ ನೀಡಿದೆ.
ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ:
18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 12,735 ರೂ. ಆಗಿದೆ. ನಿನ್ನೆ 12,981 ರೂ. ಇದ್ದ ಬೆಲೆಯಲ್ಲಿ ಇಂದು 246 ರೂ. ಕುಸಿತವಾಗಿದೆ. ಹಾಗೆಯೇ 10 ಗ್ರಾಂನ 18 ಕ್ಯಾರೆಟ್ ಚಿನ್ನ ಇಂದು, 1,27,350 ರೂ. ಆಗಿದೆ. ನಿನ್ನೆ ಇದು 1,29,810 ರೂ. ಆಗಿದ್ದು ಇದು 2,460 ರೂ. ಇಳಿಕೆ ನೋಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆಯು ಕೂಡ 12,73,500 ರೂ. ಆಗಿದ್ದು, ನಿನ್ನೆ 12,98,100 ರೂ. ಆಗಿತ್ತು. ಇದರರ್ಥ ಇಂದು 24,600 ರೂ. ಇಳಿಕೆ ನೋಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 330 ರೂ. ಆಗಿದೆ. ನಿನ್ನೆ ಈ ಬೆಲೆ 295 ರೂ. ಇತ್ತು. ಅಂದರೆ ನಿನ್ನೆಗಿಂತ ಇದು ಇಂದು 35 ರೂ. ಏರಿಕೆ ನೋಡಿದೆ. 10 ಗ್ರಾಂ ಬೆಳ್ಳಿ ಬೆಲೆ ನಿನ್ನೆ 2,950 ರೂ. ಇದ್ದು, ಇಂದು 3,300 ರೂ.ಗೆ ಬಂದು ತಲುಪಿದೆ. ಅಂದರೆ ನಿನ್ನೆಗಿಂತ ಇಂದು 350 ರೂ. ಏರಿಕೆ ನೋಡಿದೆ. 100 ಗ್ರಾಂ ಬೆಳ್ಳಿಯಲ್ಲಿ 3,500 ರೂ. ಏರಿಕೆಯಾಗಿದ್ದು ಬೆಲೆಯು 33,000 ರೂ. ತಲುಪಿದೆ. ನಿನ್ನೆ ಈ ಬೆಲೆ 29,500 ರೂ. ಆಗಿತ್ತು. ಇನ್ನು ಒಂದು ಕೆ.ಜಿ (1000 ಗ್ರಾಂ) ಬೆಳ್ಳಿ ಬೆಲೆಯು 3,30,000 ರೂ. ಆಗಿದೆ, ನಿನ್ನೆ ಈ ಬೆಲೆ 2,95,000 ರೂ. ಇದ್ದು ನಿನ್ನೆಗಿಂತ ಇಂದು 35,000 ರೂ. ಏರಿಕೆಯಾಗಿದೆ.
ಸ್ಪಾಟ್ ಚಿನ್ನದ ಬೆಲೆ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಮಾರ್ಚ್ 2ರಂದು ಸ್ಪಾಟ್ ಚಿನ್ನದ ಬೆಲೆಯು ಏರಿಕೆಯಾಗಿದೆ. 02:01 GMT ವೇಳೆಗೆ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್ಗೆ $5,329.39ಕ್ಕೆ ಏರಿಕೆಯಾಗಿದ್ದು, ಇದು ಸುಮಾರು 1% ಹೆಚ್ಚಳವನ್ನು ಸೂಚಿಸುತ್ತದೆ.
ಒಟ್ಟಿನಲ್ಲಿ ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಜಾಗತಿಕ ಚಿನ್ನದ ಬೆಲೆಯಲ್ಲಿ ಏರಿಕೆಯ ನಡೆಯಾಗಿದೆ. ಇತ್ತ ಭಾರತದಲ್ಲಿ ಬೆಲೆಯು ಇಳಿಕೆಯಾಗಿದೆ. ಇಂದು ಚಿನ್ನದ ಮೇಲೆ ಹೂಡಿಕೆ ಮಾಡುವವರು ಇಂದಿನ 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಯನ್ನು ತಿಳಿದು ಮುಂದುವರಿಯಿರಿ.
More From GoodReturns

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Israel-Iran War: ಭಾರತದ ಚಿತ್ತ ಕಚ್ಚಾ ತೈಲದತ್ತ; ಅತ್ತ ಏರಿಕೆಯಾಗುತ್ತಿದ್ದಂತೆ, ಹೊಸ ದಾರಿ ಹುಡುಕುತ್ತಿರುವ ಭಾರತ!

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Oil Prices Surge: ರಣಭೂಮಿಯಾದ ಇರಾನ್-ಇಸ್ರೇಲ್… ಜಾಗತಿಕ ತೈಲ ಬೆಲೆ 8% ಜಿಗಿತ, ಆತಂಕದ ಕೇಂದ್ರವಾದ ಹಾರ್ಮುಜ್ ಜಲಸಂಧಿ!

Middle East tensions: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ…ಈ ಹೊತ್ತಲ್ಲಿ ಚಿನ್ನ-ಬೆಳ್ಳಿ ಹೂಡಿಕೆದಾರರು ಏನು ಮಾಡಬೇಕು?



Click it and Unblock the Notifications