ಹೋಮ್  »  ಬೆಳ್ಳಿ ಬೆಲೆ  »  ಬೆಂಗಳೂರು

ಬೆಂಗಳೂರು ಲೆಕ್ಕದಲ್ಲಿ ಬೆಳ್ಳಿಯ ಬೆಲೆ (8th December 2022)

Dec 8, 2022
71.30 /Gram 0.30

ಭಾರತದಲ್ಲಿ ಬೆಳ್ಳಿಯ ಬೆಲೆ ಅಂತರರಾಷ್ಟ್ರೀಯ ಬೆಲೆಯಿಂದ ನಿರ್ಧರಿಸಲ್ಪಡುತ್ತದೆ. ಮತ್ತೊಂದೆಡೆ ಇದು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಅವಲಂಬಿತವಾಗಿರುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ ಅಂತರಾಷ್ಟ್ರೀಯ ಬೆಲೆಗಳು ಸ್ಥಿರವಾಗಿರುತ್ತವೆ. ಆದರೆ ಬೆಳ್ಳಿ ಹೆಚ್ಚು ದುಬಾರಿಯಾಗುತ್ತದೆ. ಕಳೆದ ಕೆಲವು ತಿಂಗಳಲ್ಲಿ ಬೆಲೆಬಾಳುವ ಲೋಹಗಳ ದರಗಳು ಏರಿಳಿತ ಕಂಡಿವೆ. ಬೆಂಗಳೂರಿನಲ್ಲಿ ಕೂಡ ಬೆಳ್ಳಿಯ ಬೆಲೆಗಳ ಮೇಲೆ ಈ ಪರಿಣಾಮ ಬೀರಿದೆ. ಬೆಳ್ಳಿ ಮತ್ತು ಚಿನ್ನ ಕೂಡ ಒಂದೇ ದಿಕ್ಕಿನಲ್ಲಿ ಚಲಿಸಿವೆ. ಇವು ಭವಿಷ್ಯದಲ್ಲಿ ಹೇಗೆ ಚಲಿಸುತ್ತವೆ ಎನ್ನುವುದು ಅತ್ಯಂತ ಮುಖ್ಯವಾದ ಪ್ರಶ್ನೆ.

ಬೆಂಗಳೂರು ಇಂದಿನ ಬೆಳ್ಳಿ ಬೆಲೆ - ಗ್ರಾಂ ಬೆಳ್ಳಿಗೆ ಎಷ್ಟು? ರು. ಲೆಕ್ಕದಲ್ಲಿ

ಗ್ರಾಂ ಇಂದಿನ
ಬೆಳ್ಳಿ ಬೆಲೆ
ನಿನ್ನೆಯ
ಬೆಳ್ಳಿ ಬೆಲೆ
ಬೆಳ್ಳಿಯ ಪ್ರತಿದಿನದ ಬೆಲೆ ಬದಲಾವಣೆ
1 ಗ್ರಾಂ 71.30 71 0.30
8 ಗ್ರಾಂ 570.40 568 2.40
10 ಗ್ರಾಂ 713 710 3
100 ಗ್ರಾಂ 7,130 7,100 30
1 ಕೆಜಿ 71,300 71,000 300

ಬೆಂಗಳೂರು ಆಧಾರದಲ್ಲಿ ಕೊನೆಯ 10 ದಿನದ ಬೆಳ್ಳಿ ಬೆಲೆ(ಕೆಜಿಗೆ)ಯನ್ನು ಪಡೆದುಕೊಳ್ಳಿ

ದಿನಾಂಕ 10 ಗ್ರಾಂ 100 ಗ್ರಾಂ 1 ಕೆಜಿ
Dec 8, 2022 713.00 7,130.00 71300.00 300
Dec 7, 2022 710.00 7,100.00 71000.00 200
Dec 6, 2022 708.00 7,080.00 70800.00 -1700
Dec 5, 2022 725.00 7,250.00 72500.00 900
Dec 4, 2022 716.00 7,160.00 71600.00 0
Dec 3, 2022 716.00 7,160.00 71600.00 600
Dec 2, 2022 710.00 7,100.00 71000.00 1200
Dec 1, 2022 698.00 6,980.00 69800.00 1800
Nov 30, 2022 680.00 6,800.00 68000.00 -100
Nov 29, 2022 681.00 6,810.00 68100.00 0

ವಾರ ಮತ್ತು ತಿಂಗಳ ಲೆಕ್ಕದಲ್ಲಿ ಭಾರತದ ಬೆಳ್ಳಿಯ ಬೆಲೆಯ ಚಾರ್ಟ್

ಬೆಳ್ಳಿ ದರದ ಐತಿಹಾಸಿಕ ಬೆಲೆ

 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, November 2022
 • ಬೆಳ್ಳಿ ಬೆಲೆ 1 ಕೆಜಿ
  1 st November ದರ Rs.59,500
  30th November ದರ Rs.68,000
  ಅತಿ ಹೆಚ್ಚು ದರ November Rs.68,500 on November 15
  ಕಡಿಮೆ ದರ November Rs.59,500 on November 1
  ಎಲ್ಲಾ ಸಾಧನೆ/ಪ್ರದರ್ಶನ Rising
  % ಬದಲಾವಣೆ +14.29%
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, October 2022
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, September 2022
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, August 2022
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, July 2022
 • ಬೆಳ್ಳಿ ಬೆಲೆ ಬದಲಾವಣೆ/ಮೂವ್ಮೆಂಟ್, June 2022

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಗಳು ಹೇಗೆ ನಡೆಯುತ್ತವೆ?

ಬೆಳ್ಳಿ ಸಹಾ ಒಂದು ಅಮೂಲ್ಯ ಲೋಹವಾಗಿದ್ದು ಚಿನ್ನದ ಬಳಿಕ ಹೆಚ್ಚಿನ ಬೇಡಿಕೆಯುಳ್ಳದ್ದಾಗಿದೆ. ಆದರೆ ವಾಸ್ತವದಲ್ಲಿ ಇದರ ಬೆಲೆ ಹೇಗೆ ಏರಿಳಿಯುತ್ತದೆ ಎಂಬುದನ್ನು ಊಹಿಸಲು ಅಥವಾ ಪರಿಗಣಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಯಾವುದೇ ವಸ್ತುವಿನ ಬೆಲೆ ಕಡಿಮೆ ಇದ್ದಾಗ ಕೊಳ್ಳುವುದು ಹಾಗೂ ಬೆಲೆ ಹೆಚ್ಚಿದ್ದಾಗ ಮಾರುವುದು ಜಾಣತನ. ಆದರೆ ಬೆಳ್ಳಿಯ ವಿಷಯದಲ್ಲಿ ಇದು ಅತ್ಯಂತ ಕಷ್ಟ. ಬೆಂಗಳೂರಿನ ಬೆಳ್ಳಿಯ ಬೆಲೆಗಳನ್ನು ಪರಿಗಣಿಸಿದರೆ ಇಲ್ಲಿಯ ಬೆಲೆ ಹೆಚ್ಚಿನ ಕಾಲ ಏರಿ ಕೆಳಗಿಳಿಯದೇ ಹಾಗೇ ಇರುತ್ತದೆ. ಒಂದು ವೇಳೆ ನಿಮ್ಮಲ್ಲಿ ಹೆಚ್ಚಿನ ಧನವಿದ್ದು ದೀರ್ಘಾವಧಿಯ ಹೂಡಿಕೆಯಲ್ಲಿ ನೀವು ನಂಬಿಕೆಯಿಟ್ಟಿದ್ದರೆ ನಿಮಗೆ ಶೇರು ಮಾರುಕಟ್ಟೆ ಅಥವಾ ಬೆಳ್ಳಿ ಇವೆರಡರಲ್ಲಿಯೂ ಹಣ ತೊಡಗಿಸುವುದು ಕಷ್ಟವಾಗಲಾರದು. ಆದ್ದರಿಂದ, ಒಂದು ವೇಳೆ ಆರ್ಥಿಕ ತೊಂದರೆಗೆ ಗುರಿಯಾಗದೇ ನಿಮ್ಮ ಹಣವನ್ನು ಹೂಡಲು ಇಚ್ಛಿಸಿದರೆ ಶೇರುಗಳಿಗಿಂತಲೂ ಬೆಳ್ಳಿಯೇ ಉತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ಎಲ್ಲಾ ನಗರಗಳ ಬೆಳ್ಳಿಯ ಬೆಲೆ ಬಂಗಾರದಂತೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಅಂತೆಯೇ ಬೆಂಗಳೂರಿನ ಬೆಳ್ಳಿಯ ಬೆಲೆ ಸಹಾ! ಒಂದು ವೇಳೆ ದೀರ್ಘಾವಧಿಯ ಹೂಡಿಕೆಯಲ್ಲಿ ನೀವು ಉತ್ಸುಕರಾಗಿದ್ದರೆ ಬೆಳ್ಳಿಯಲ್ಲಿ ಹಣ ಹೂಡುವುದೇ ಹೆಚ್ಚಿನ ಜಾಣತನದ ಕ್ರಮವಾಗಿದೆ.

ಏರುತ್ತಿರುವ ಬೆಳ್ಳಿಯ ಬೇಡಿಕೆ

ಭಾರತದ ಇತರ ನಗರಗಳ ಜೊತೆಗೇ ಬೆಂಗಳೂರಿನಲ್ಲಿಯೂ ಬೆಳ್ಳಿಯ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕಳೆದ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು ಇದನ್ನು ಭರಿಸಲಾಗದ ಮಧ್ಯಮವರ್ಗ ಬೆಳ್ಳಿಯತ್ತ ಚಿತ್ತ ಹರಿಸಿರುವುದು. ಏಕೆಂದರೆ ಬೆಳ್ಳಿಯ ಬೆಲೆ ಚಿನ್ನಕ್ಕಿಂತಲೂ ಕಡಿಮೆ ಇದ್ದು ಮಧ್ಯಮವರ್ಗದ ಜನರು ಭರಿಸುವಂತಿದೆ. ಅಲ್ಲದೇ ಕಳೆದ ವರ್ಷ ಚಿನ್ನದ ಲೇಪನದ ಆಭರಣಕ್ಕಿಂತಲೂ ಹೆಚ್ಚಾಗಿ ಬೆಳ್ಳಿಯ ಆಭರಗಣಗಳನ್ನು ಜನರು ಹೆಚ್ಚು ಕೊಂಡಿರುವುದನ್ನು ದಾಖಲಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಬೆಳ್ಳಿಗೆ ಇಷ್ಟೊಂದು ಬೇಡಿಕೆ ಇರಲಿಲ್ಲ. ಏಕೆಂದರೆ ಬೆಳ್ಳಿಯನ್ನು ಹೂಡಿಕೆಯಾಗಿ ಪರಿಗಣಿಸುವ ವಣಿಕರು ಇದನ್ನು ಮಾರಿದರೆ ಹೆಚ್ಚಿನ ಲಾಭ ಬರುವುದಿಲ್ಲ ಎಂಬ ಭಾವನೆ ಹೊಂದಿದ್ದು ಬೆಳ್ಳಿಯತ್ತ ಗಮನ ಹರಿಸುತ್ತಿರಲಿಲ್ಲ. ಆದರೆ ಈಗ ಬೆಳ್ಳಿಗೆ ಶುಕ್ರದೆಸೆ ಶುರುವಾಗಿದ್ದು ಈಗ ಬೆಳ್ಳಿಯನ್ನು ಮಾರಾಟ ಮಾಡಿದರೆ ಉತ್ತಮ ಲಾಭ ಸಿಗುತ್ತಿದೆ. ಈಗ ಬೆಳ್ಳಿಯನ್ನು ನಿಜರೂಪದಲ್ಲಿಯೂ ಅಥವಾ ಬೆಳ್ಳಿರೂಪದ ಬಾಂಡ್ ಗಳನ್ನು ಶೇರು ಮಾರುಕಟ್ಟೆಯಲ್ಲಿಯೂ ಖರೀದಿಸಬಹುದು. ಇಂದು ಬೆಳ್ಳಿಯನ್ನು ಖರೀದಿಸಲು ಹಲವಾರು ಮಾರ್ಗಗಳಿವೆ. ಬೆಳ್ಳಿಯನ್ನು ಖರೀದಿಸುವುದಿದ್ದರೆ ಇದನ್ನು ದೀರ್ಘಾವಧಿಯ ಹೂಡಿಕೆಯಾಗಿಯೇ ಖರೀದಿಸುವುದು ಉತ್ತಮ. ಬೆಳ್ಳಿಯನ್ನು ಖರೀದಿಸುವ ಮುನ್ನ ಪ್ರತಿದಿನವೂ ಬೆಳ್ಳಿಯ ಬೆಲೆಯನ್ನು ಗಮನಿಸುತ್ತಾ ಯಾವಾಗ ಖರೀದಿಸುವುದು ಉತ್ತಮ ಎಂದು ಸ್ಥೂಲವಾಗಿ ಅರಿತುಕೊಳ್ಳಬಹುದು. ನಮ್ಮ ಅಂತರ್ಜಾಲ ತಾಣದಲ್ಲಿ ನಾವು ನಿತ್ಯವೂ ನಿಯಮಿತವಾಗಿ ಬೆಳ್ಳಿಯ ಬೆಲೆಯನ್ನು ಪ್ರಕಟಿಸುತ್ತಿರುತ್ತೇವೆ. ಈ ಮಾಹಿತಿಯನ್ನು ಗಮನಿಸುತ್ತಾ ಇದ್ದರೆ ಹೆಚ್ಚಿನ ಸಹಾಯ ದೊರಕುತ್ತದೆ.

ಟಿಪ್ಪಣಿ: ನಿಮಗೆ ನೀಡಿರುವ ಬೆಳ್ಳಿಯ ಬೆಲೆಯನ್ನು ಸ್ಥಳೀಯ ಆಭರಣದ ಅಂಗಡಿಗಳ ವಹಿವಾಟಿನ ಆಧಾರದಲ್ಲಿ ನೀಡಲಾಗಿದೆ. ಕೆಲವು ಕಡೆ ಬೆಲೆಯಲ್ಲಿ ಕೊಂಚ ವ್ಯತ್ಯಾಸಗಳು ಇರಬಹುದು. ಗುಡ್ ರಿಟರ್ನ್ಸ್ ನಿಮಗೆ ನಿಖರವಾದ ಮಾಹಿತಿ ನೀಡಲು ಸದಾ ಶ್ರಮಿಸುತ್ತಿರುತ್ತದೆ. ಈ ಮಾಹಿತಿ ತಪ್ಪಾದಲ್ಲಿ Greynium Information Technologies Pvt Ltd ಜವಾಬ್ದಾರನಾಗಿರುವುದಿಲ್ಲ. ಈ ಬೆಲೆ ಮಾಹಿತಿಗೆ ಮಾತ್ರ. ಆಭರಣದ ನಷ್ಟ ಅಥವಾ ಇನ್ನಿತರ ಪ್ರಮಾದಗಳಿಗೂ ನಾವು ನೀಡುವ ಮಾಹಿತಿಗೂ ಯಾವುದೆ ಸಂಬಂಧ ಇರುವುದಿಲ್ಲ.

COVID-19
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ
ಸಿಲ್ವರ್ ಭಾರತದ ಉನ್ನತ ನಗರಗಳು ರೇಟ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X