ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ ನಿಂತ ನೀರಾಗಿತ್ತು. ಯಾವುದೇ ಏರಿಕೆ ಹಾಗೂ ಇಳಿಕೆ ಕಾಣದೇ ಇದ್ದ ಚಿನ್ನದ ಬೆಲೆ, ಮುಂಬರುವ ದಿನಗಳಲ್ಲಿ ಇಳಿಕೆಯಾಗಬಹುದೇನೋ ಎಂಬ ಭರವಸೆಯನ್ನು ಕೆಲವರಿಗೆ ಮೂಡಿಸಿತ್ತು. ಆದರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ ನೋಡಿದೆ. ಈ ಏರಿಕೆ ಸಣ್ಣ ಮಟ್ಟದ್ದಾಗಿದ್ದರೂ, ಒಂದು ನಿರಾಸೆಯ ಭಾವನೆಯನ್ನು ಮೂಡಿಸಿದೆ. ಆದರೂ ತಜ್ಞರು ಹೇಳುವ ಪ್ರಕಾರ ಚಿನ್ನದ ಬೆಲೆ ಭವಿಷ್ಯ ಏರಿಕೆಯಲ್ಲೇ ಸಾಗುವುದಿಲ್ಲ ಎಂಬುದು ಕೂಡ ಆಗಿದೆ. ಇದಕ್ಕೆ ಉದಾಹರಣೆಯೇ ಇತ್ತೀಚಿನ ಬೆಲೆ ಇಳಿಕೆ. ಅಂದರೆ ಅಕ್ಟೋಬರ್ ತಿಂಗಳಲ್ಲೇ 13 ಸಾವಿರೂ. ದಾಟಿದ್ದ ಚಿನ್ನದ ಬೆಲೆ ಇಂದಿಗೆ (ನವೆಂಬರ್ 3) 12,317 ರೂ.ಗೆ ಬಂದು ನಿಂತಿದೆ. ಸಾಮಾನ್ಯವಾಗಿ ತಿಂಗಳಿಂದ ತಿಂಗಳಿಗೆ ಚಿನ್ನದ ಬೆಲೆ ಏರಿಕೆಯಾಗುತ್ತಿತ್ತೇ ಹೊರತು ಇಳಿಕೆಯನ್ನು ಕಾಣುವುದು ಅತೀ ಅಪರೂಪ. ಹೀಗಿರುವಾಗ ಕಳೆದ ತಿಂಗಳಿಗೆ ಹೋಲಿಸಿದರೆ ಇತ್ತೀಚೆಗೆ ಚಿನ್ನದ ಬೆಲೆ ಇಳಿಕೆಯನ್ನೇ ನೋಡಿದೆ. ಆದರೂ ಇಂದು ಚಿನ್ನದ ಬೆಲೆ ಏರಿಕೆಯಾಗಿರುವುದು ಕೊಳ್ಳುವವರಿಗೆ ದೊಡ್ಡ ನಿರಾಸೆ ಭಾರವನ್ನು ಹೊರಿಸಿದೆ. ಹಾಗಾದರೆ ಇಂದು 24K, 22K, 18K ಚಿನ್ನದ ಬೆಲೆ ಎಷ್ಟಾಗಿದೆ. ಎಷ್ಟು ಏರಿಕೆಯಾಗಿದೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
24 ಕ್ಯಾರೆಟ್ ಶುದ್ಧ ಚಿನ್ನದ ದರವನ್ನು ಪರಿಗಣಿಸಿದರೆ, ಇಂದು 1 ಗ್ರಾಂ ಚಿನ್ನದ ಬೆಲೆ ರೂ.12,317 ಆಗಿದ್ದು, ನಿನ್ನೆದಿನದ ರೂ.12,300 ಕ್ಕಿಂತ ರೂ.17 ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,23,170 ಆಗಿದ್ದು, ಇದು ನಿನ್ನೆ ರೂ.1,23,000 ಕ್ಕಿಂತ ರೂ.170 ಹೆಚ್ಚು. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ರೂ.12,31,700 ಆಗಿದ್ದು, ನಿನ್ನೆದಿನದ ರೂ.12,30,000 ಕ್ಕಿಂತ ರೂ.1,700 ಏರಿಕೆಯಾಗಿದೆ. ಶುದ್ಧತೆ ಹಾಗೂ ಹೂಡಿಕೆ ಮೌಲ್ಯದಿಂದಾಗಿ 24 ಕ್ಯಾರೆಟ್ ಚಿನ್ನವು ಹೂಡಿಕೆದಾರರಿಗೆ ಸದಾ ಆಕರ್ಷಕವಾಗಿದ್ದು, ಇಂದಿನ ಈ ಏರಿಕೆ ಮಾರುಕಟ್ಟೆಯ ಚುರುಕನ್ನು ಪ್ರತಿಬಿಂಬಿಸುತ್ತದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ ಇದೇ ರೀತಿಯ ಏರಿಕೆಯು ಕಂಡುಬಂದಿದೆ. ಇಂದು 1 ಗ್ರಾಂ ಚಿನ್ನದ ಬೆಲೆ ರೂ.11,290 ಆಗಿದ್ದು, ನಿನ್ನೆದಿನದ ರೂ.11,275 ಕ್ಕಿಂತ ರೂ.15 ಹೆಚ್ಚಾಗಿದೆ. 10 ಗ್ರಾಂ ಚಿನ್ನದ ದರ ರೂ.1,12,900 ಆಗಿದ್ದು, ಇದು ನಿನ್ನೆ ರೂ.1,12,750 ಕ್ಕಿಂತ ರೂ.150 ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ರೂ.11,29,000 ಆಗಿದ್ದು, ನಿನ್ನೆದಿನದ ರೂ.11,27,500 ಕ್ಕಿಂತ ರೂ.1,500 ಹೆಚ್ಚಾಗಿದೆ. 22 ಕ್ಯಾರೆಟ್ ಚಿನ್ನವನ್ನು ಆಭರಣ ತಯಾರಿಕೆಗೆ ವ್ಯಾಪಕವಾಗಿ ಬಳಸಲಾಗುವುದರಿಂದ, ಈ ಪ್ರಮಾಣದ ಏರಿಕೆ ಮದುವೆ ಹಾಗೂ ಹಬ್ಬದ ಸಮಯದ ಖರೀದಿಗಳಿಗೆ ಸ್ವಲ್ಪ ಮಟ್ಟಿನ ಪ್ರಭಾವ ಬೀರುತ್ತದೆ.
ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ:
ಇದಲ್ಲದೆ, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ ಏರಿಕೆ ದಾಖಲಾಗಿದೆ. ಇಂದು 1 ಗ್ರಾಂ ಚಿನ್ನದ ಬೆಲೆ ರೂ.9,238 ಆಗಿದ್ದು, ನಿನ್ನೆದಿನದ ರೂ.9,225 ಕ್ಕಿಂತ ರೂ.13 ಹೆಚ್ಚಾಗಿದೆ. 10 ಗ್ರಾಂ ಚಿನ್ನದ ದರ ರೂ.92,380 ಆಗಿದ್ದು, ಇದು ನಿನ್ನೆ ರೂ.92,250 ಕ್ಕಿಂತ ರೂ.130 ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ರೂ.9,23,800 ಆಗಿದ್ದು, ನಿನ್ನೆದಿನದ ರೂ.9,22,500 ಕ್ಕಿಂತ ರೂ.1,300 ಹೆಚ್ಚಾಗಿದೆ. ಈ ಕ್ಯಾರೆಟ್‌ನ ಚಿನ್ನವನ್ನು ಸಾಮಾನ್ಯವಾಗಿ ವಿನ್ಯಾಸ ಆಭರಣಗಳಲ್ಲಿ ಹಾಗೂ ಉಡುಗೊರೆ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಇಂದು (ನವೆಂಬರ್ 3, 2025) ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಸ್ವಲ್ಪ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿಯ ದರ ಇಂದು ₹154 ಆಗಿದ್ದು, ನಿನ್ನೆ ಇದು ₹152 ಆಗಿತ್ತು. ಅಂದರೆ ಪ್ರತಿ ಗ್ರಾಂಗೆ ₹2ರ ಏರಿಕೆ ಕಂಡುಬಂದಿದೆ. 8 ಗ್ರಾಂ ಬೆಳ್ಳಿಯ ದರ ₹1,232 ಆಗಿದ್ದು, ನಿನ್ನೆಗಿಂತ ₹16 ಹೆಚ್ಚಾಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿಯ ಬೆಲೆ ₹1,540 ಆಗಿದ್ದು, ನಿನ್ನೆ ₹1,520 ಇತ್ತು. 100 ಗ್ರಾಂ ಬೆಳ್ಳಿಯ ದರ ₹15,400 ಆಗಿದ್ದು, ನಿನ್ನೆ ₹15,200 ಇತ್ತು, ಅಂದರೆ ₹200ರ ಏರಿಕೆ ಕಂಡುಬಂದಿದೆ. ಅತ್ಯಂತ ಪ್ರಮಾಣದ 1000 ಗ್ರಾಂ (1 ಕಿಲೋ) ಬೆಳ್ಳಿಯ ಬೆಲೆ ಇಂದು ₹1,54,000 ಆಗಿದ್ದು, ನಿನ್ನೆ ₹1,52,000 ಇತ್ತು. ಅಂದರೆ ಬೆಳ್ಳಿಯ ದರದಲ್ಲಿ ₹2,000ರ ಏರಿಕೆ ದಾಖಲಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ನವೆಂಬರ್ 3ರಂದು, ಸ್ಪಾಟ್ ಗೋಲ್ಡ್ ದರವು 0.1% ಇಳಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $3,997.94 ಆಗಿದೆ ಎಂದು ಬೆಳಗ್ಗೆ 02:50 GMT ವೇಳೆಗೆ ವರದಿಯಾಗಿದೆ. ಅದೇ ಸಮಯದಲ್ಲಿ, ಡಿಸೆಂಬರ್ ವಿತರಣೆಗೆ ಸಂಬಂಧಿಸಿದ ಅಮೆರಿಕಾದ ಚಿನ್ನದ ಭವಿಷ್ಯ ವಹಿವಾಟು ದರವು 0.3% ಏರಿಕೆ ಕಂಡು $4,008.60 ಪ್ರತಿ ಔನ್ಸ್‌ಗೆ ತಲುಪಿದೆ.
ಒಟ್ಟಿನಲ್ಲಿ, ಇಂದು ಬೆಂಗಳೂರಿನಲ್ಲಿ 24K, 22K ಮತ್ತು 18K ಚಿನ್ನದ ದರಗಳಲ್ಲಿ ಸಣ್ಣ ಮಟ್ಟಿನ ಏರಿಕೆ ಕಂಡುಬಂದಿದ್ದು, ಮಾರುಕಟ್ಟೆಯ ಚಲನವಲನ ಚುರುಕಾಗುತ್ತಿದೆ. ಅಂತರರಾಷ್ಟ್ರೀಯ ಬಂಗಾರದ ಬೆಲೆಯ ಬದಲಾವಣೆ, ರೂಪಾಯಿ ಮೌಲ್ಯದ ಸ್ಥಿರತೆ ಮತ್ತು ಸ್ಥಳೀಯ ಬೇಡಿಕೆ ಈ ಎಲ್ಲವೂ ಮುಂದಿನ ದಿನಗಳಲ್ಲಿ ಚಿನ್ನದ ದರದ ದಿಕ್ಕನ್ನು ನಿರ್ಧರಿಸಲಿವೆ. ಹೂಡಿಕೆದಾರರು ಈಗಾಗಲೇ ಚಿನ್ನವನ್ನು ಸುರಕ್ಷಿತ ಆಸ್ತಿ ವರ್ಗವಾಗಿ ಪರಿಗಣಿಸುತ್ತಿರುವುದರಿಂದ, ದರದ ಈ ಏರಿಕೆ ಮಾರುಕಟ್ಟೆಯಲ್ಲಿ ಆತ್ಮವಿಶ್ವಾಸದ ಸಂಕೇತವಾಗಿ ಕಾಣಿಸುತ್ತದೆ.
More From GoodReturns

Gold-Silver Rate Live Updates: ಇಂದು ಚಿನ್ನ, ಬೆಳ್ಳಿ ದರ ಇಳಿಕೆಯೋ, ಏರಿಕೆಯೋ? ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

Gold Price Today: ಯುಗಾದಿ ದಿನವೇ ಚಿನ್ನ ಪ್ರಿಯರಿಗೆ ಬಂಪರ್; 2,090 ರೂ. ಇಳಿಕೆ

Gold-Silver Today Rates Live Updates: ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ಸಂಪೂರ್ಣ ಮಾಹಿತಿ ಇಲ್ಲಿದೆ

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

Bengaluru Gold Price: ಬೆಂಗಳೂರು ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಬೆಲೆ ಭಾರೀ ಏರಿಕೆ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Gold Rate & Silver Rate Live Update: ಇಂದಿನ 24K, 22K, 18K ಚಿನ್ನದ ಬೆಲೆಗಳ ಕ್ಷಣ ಕ್ಷಣದ ಮಾಹಿತಿ

Gold Price Today: ‘ಬಂಗಾರ’ದಂತಹ ಸುದ್ದಿ; ಭಾರತದ ಚಿನ್ನದ ಬೆಲೆಯಲ್ಲಿ ಯುಗಾದಿಗೂ ಮುನ್ನ 3,300 ರೂ. ಕುಸಿತ!

Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ 4,900 ಇಳಿಕೆ; ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್

Gold Price Bengaluru: ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯೋ, ಏರಿಕೆಯೋ? ಬೆಲೆ ತಿಳಿಯಿರಿ



Click it and Unblock the Notifications