ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ತಿಳಿಯೋಕು ಮನಸ್ಸು ಗಟ್ಟಿಮಾಡಿಕೊಳ್ಳಬೇಕು. ಅಂತಹ ಪರಿಸ್ಥಿತಿ ಬಂದೊದಗಿದೆ. ದೀಪಾವಳಿ ಸಮೀಪದಲ್ಲಿರುವಾಗಲೇ ಈ ಪರಿಯ ಬೆಲೆ ಹೆಚ್ಚಾದರೆ ಇನ್ನು ಕೆಲವೇ ದಿನಗಳಲ್ಲಿ, 24K ಚಿನ್ನ ಒಂದು ಗ್ರಾಂಗೆ 14 ಸಾವಿರ ಆದರೂ ಆಗಬಹುದು. ಇಂದಿನ ಚಿನ್ನದ ಬೆಲೆಯೇ ಬಾಯಿ ಬಿಡುವಂತಾಗಿಸಿದೆ. ನಿನ್ನೆ 12,944 ಇದ್ದ 24K ಚಿನ್ನದಲ್ಲಿ ಇಂದು ದಿಢೀರ್ 333 ರೂ. ಹೆಚ್ಚಾಗಿದೆ. ಅಂದರೆ 100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 33,300 ರೂ. ಒಂದೇ ದಿನಕ್ಕೆ ಏರಿಕೆಯಾಗಿದೆ. ಇದೇ ರೀತಿ ಬೆಲೆ ಏರಿಕೆಯಾದರೆ ಚಿನ್ನ ಖರೀದಿಯು ಕನಸಾಗಿ ಬಿಡುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡಿರುವವರಿಗೆ ಇದು ಗುಡ್‌ನ್ಯೂಸ್ ಆದರೆ, ಹೂಡಿಕೆಯ ಹಾದಿಯಲ್ಲಿ ಇರುವವರಿಗಂತೂ ಇದು ಗಂಭೀರದ ಸನ್ನಿವೇಶ.

ಬೆಂಗಳೂರಿನಲ್ಲಿ ದೀಪಾವಳಿ ಹಬ್ಬ ಎಂದರೆ ಬಲು ಸಂಭ್ರಮ ಇರುತ್ತದೆ. ಈ ಸಂದರ್ಭದಲ್ಲಿ ಚಿನ್ನ ಖರೀದಿ ಕೂಡ ಹಲವರಲ್ಲಿ ಸಾಮಾನ್ಯ. ಆದರೆ ಚಿನ್ನ ಖರೀದಿಯೇ ಈ ವರ್ಷದ ದೀಪಾವಳಿಗೆ ದೊಡ್ಡ ಸವಾಲೆನ್ನಬಹುದು. ಅಂದಹಾಗೆ ಈ ಪರಿಯ ಬೆಲೆ ಏಕೆ ಆಗಿದೆ ಎನ್ನುವುದಕ್ಕೂ ಹಲವು ಕಾರಣಗಳಿವೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಸುಂಕನೀತಿ. ಹಾಗೂ ಫೆಡರಲ್ ಬಡ್ಡಿ ದರದ ಬದಲಾವಣೆ, ಹಣದುಬ್ಬರ ಎಲ್ಲವೂ ಈ ಸಮಯದಲ್ಲೇ ಕಂಡ ಬೆಳವಣಿಗೆಯಾಗಿದೆ. ಹೀಗಾಗಿ ದೀಪಾವಳಿ ಸಮಯದಲ್ಲಿ ಚಿನ್ನ ಖರೀದಿ ಒಂದು ದೊಡ್ಡ ಸವಾಲು ಎನ್ನಬಹುದು. ಹಾಗಾದ್ರೆ ಇಂದು 24K, 22K, 18K ಚಿನ್ನದ ನಿಖರವಾದ ಬೆಲೆ ಎಷ್ಟು ಅನ್ನೋದನ್ನ ಇಲ್ಲಿ ತಿಳಿಯಿರಿ.
24 ಕ್ಯಾರೆಟ್ ಚಿನ್ನದ ಬೆಲೆ ದುಬಾರಿ:
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ತಿಳಿದರೆ ಬಾಯಿ ಬಿಡುವಂತಾಗುತ್ತದೆ. ದೀಪಾವಳಿ ಹೊಸ್ತಿಲಲ್ಲೇ 24 ಕ್ಯಾರೆಟ್ ಚಿನ್ನವು ಇಂದು 1 ಗ್ರಾಂಗೆ ರೂ. 13,277 ಆಗಿದೆ. ನಿನ್ನೆ ಇದರ ಬೆಲೆ ರೂ. 12,944 ಆಗಿದ್ದು, ಇಂದು ರೂ. 333 ಹೆಚ್ಚಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ. 1,32,770, ನಿನ್ನೆ ರೂ. 1,29,440, ಬೆಲೆ ರೂ. 3,330 ಹೆಚ್ಚಾಗಿದೆ. 100 ಗ್ರಾಂ ಖರೀದಿಸಿದರೆ, ಇಂದು ರೂ. 13,27,700, ನಿನ್ನೆ ರೂ. 12,94,400, ಬೆಲೆ ರೂ. 33,300 ಹೆಚ್ಚಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನವು ಇಂದು 1 ಗ್ರಾಂಗೆ ರೂ. 12,170, ನಿನ್ನೆ ರೂ. 11,865 ಆಗಿದ್ದು, ರೂ. 305 ಏರಿಕೆಯಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ. 1,21,700, ನಿನ್ನೆ ರೂ. 1,18,650, ರೂ. 3,050 ಹೆಚ್ಚಾಗಿದೆ. 100 ಗ್ರಾಂ ಖರೀದಿಸಿದರೆ, ಇಂದು ರೂ. 12,17,000, ನಿನ್ನೆ ರೂ. 11,86,500, ರೂ. 30,500 ಏರಿಕೆ ಕಂಡಿದೆ.
18 ಕ್ಯಾರೆಟ್ ಚಿನ್ನವನ್ನು ಕೈಬಿಡುವಂತಾಯ್ತು:
ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನವು ಇಂದು 1 ಗ್ರಾಂಗೆ ರೂ. 9,958, ನಿನ್ನೆ ರೂ. 9,708, ರೂ. 250 ಏರಿಕೆಯಾಗಿದೆ. 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ. 99,580, ನಿನ್ನೆ ರೂ. 97,080, ರೂ. 2,500 ಹೆಚ್ಚಾಗಿದೆ. 100 ಗ್ರಾಂ ಖರೀದಿಸಿದರೆ, ಇಂದು ರೂ. 9,95,800, ನಿನ್ನೆ ರೂ. 9,70,800, ರೂ. 25,000 ಹೆಚ್ಚಾಗಿದೆ.
ಬೆಳ್ಳಿ ದರ (ಬೆಂಗಳೂರು)
ಬೆಂಗಳೂರು ಮಾರುಕಟ್ಟೆಯ ಪ್ರಕಾರ, ಬೆಳ್ಳಿ ದಿನನಿತ್ಯ ಬದಲಾಗುತ್ತಿದೆ. ಇಂದು 1 ಗ್ರಾಂ ಬೆಳ್ಳಿ ರೂ. 193.90, ನಿನ್ನೆ ರೂ. 194, ಇದು ರೂ. 0.10 ಕಡಿಮೆಯಾಗಿದೆ. 10 ಗ್ರಾಂ ಬೆಳ್ಳಿ ಇಂದು ರೂ. 1,939, ನಿನ್ನೆ ರೂ. 1,940, ರೂ. 1 ಕಡಿಮೆಯಾಗಿದೆ. 100 ಗ್ರಾಂ ಬೆಳ್ಳಿ ಇಂದು ರೂ. 19,390, ನಿನ್ನೆ ರೂ. 19,400, ರೂ. 10 ಕಡಿಮೆಯಾಗಿದೆ. 1000 ಗ್ರಾಂ ಅಥವಾ 1 ಕೆಜಿ ಬೆಳ್ಳಿ ಇಂದು ರೂ. 1,93,900, ನಿನ್ನೆ ರೂ. 1,94,000, ರೂ. 100 ಕಡಿಮೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಅಕ್ಟೋಬರ್ 16ರಂದು ಸ್ಪಾಟ್ ಚಿನ್ನದ ಬೆಲೆ ಪ್ರಥಮ ಸಲ ಪ್ರತಿ ಔನ್ಸ್ $4,300 ಅನ್ನು ಮೀರಿತು. ಈ ವಾರದಲ್ಲಿ ಚಿನ್ನದ ಬೆಲೆ 7.6% ಹೆಚ್ಚಳ ಕಂಡಿದ್ದು, ಇದಕ್ಕೆ ಪ್ರಮುಖ ಕಾರಣಗಳಾಗಿರುವುದು ಮರುಸೇರಿದ ಅಮೆರಿಕಾ-ಚೀನಾ ವಾಣಿಜ್ಯ ಉರಿಯಾಟ ಮತ್ತು ಅಮೆರಿಕಾದ ಬಡ್ಡಿದರ ಕಡಿತದ ನಿರೀಕ್ಷೆಗಳು. ಈ ಬೆಳವಣಿಗೆ ಹೂಡಿಕೆದಾರರಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿಸುವಂತೆ ಹೆಚ್ಚು ಆಸಕ್ತಿಯನ್ನು ಉಂಟುಮಾಡುತ್ತಿದೆ.
ಚಿನ್ನವು ಭಾರತದ ಸಂಸ್ಕೃತಿಯಲ್ಲಿ ಎಂದೆಂದಿಗೂ ವಿಶಿಷ್ಟ ಸ್ಥಾನ ಪಡೆದಿದ್ದು, ಹೂಡಿಕೆದಾರರಿಗೆ ಮತ್ತು ಖರೀದಿದಾರರಿಗೆ ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ. ಬೆಂಗಳೂರಿನಲ್ಲಿ 24, 22 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ ಇತ್ತೀಚೆಗೆ ಏರಿಕೆ ಕಂಡಿದ್ದರೂ, ಇದು ಹಬ್ಬಗಳು, ಮದುವೆಗಳು ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆ ಸೇರಿದಂತೆ ಹಲವು ಕಾರಣಗಳಿಂದಾಗಿಯೇ. ಹೂಡಿಕೆ ಮಾಡುವ ಮೊದಲು ಪ್ರಸ್ತುತ ಬೆಲೆಗಳನ್ನು ಗಮನದಲ್ಲಿ ಇಟ್ಟು, ತಿಳಿವಳಿಕೆ ಹೊಂದಿದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಚಿನ್ನದ ಮೌಲ್ಯ ದಿನದಿಂದ ದಿನಕ್ಕೆ ಬದಲಾಗಬಹುದು, ಆದರೆ ಅದರ ದೀರ್ಘಕಾಲದ ವಿಶ್ವಾಸಾರ್ಹತೆ ಸದಾ ಉಳಿಯುತ್ತದೆ.


Click it and Unblock the Notifications