ಬಂಗಾರ ಖರೀದಿಸುವ ಆಸೆ ಬಿಟ್ಟುಬಿಡಿ! ಚಿನ್ನದ ಬೆಲೆ ಏರಿಕೆ ನಿಲ್ಲಲ್ಲ.. ಇಂದಿನ ಬೆಲೆ ನೀವೆ ನೋಡಿ

ಚಿನ್ನದ ಮಾರುಕಟ್ಟೆಯಲ್ಲಿ ಗೋಲ್ಡ್ ರೇಟ್‌ ಇಂದು ಯಥಾಸ್ಥಿತಿಯಲ್ಲಿದೆ.ಡಾಲರ್ ಸೂಚ್ಯಂಕದ ಕುಸಿತ ಮತ್ತು ವ್ಯಾಪಾರ ಯುದ್ಧದ ನಂತರ, ಸುರಕ್ಷಿತ ತಾಣಗಳ ಬೇಡಿಕೆ ಹೆಚ್ಚಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ.ಬೆಳ್ಳಿಯ ಬೆಲೆಗಳು ಸಹ ಯಾವುದೇ ಬದಲಾವಣೆಯನ್ನು ಕಂಡಿಲ್ಲ. ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ ಆಭರಣ ಪ್ರಿಯರು ಶಾಕ್ ಆಗಿದ್ದಾರೆ. ಬಹು ದಿನಗಳಿಂದ ಆಭರಣ ಖರೀದಿಗಾಗಿ ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಹಾಗಿದ್ರೆ, ಭಾರತದಲ್ಲಿ ಶುಕ್ರವಾರದಂದು( ಫೆ.07) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು,ಬಂಗಾರದ ಮಾರುಕಟ್ಟೆಯಲ್ಲಿ ಚಿನ್ನ ಇಂದು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 79,300 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 86,510 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಹತ್ತು ಗ್ರಾಂ ಚಿನ್ನ ಬೆಲೆ1,040 ರೂ.ಗಳ ಏರಿಕೆ ಕಂಡಿದೆ.

ಬಂಗಾರ ಖರೀದಿಸುವ ಆಸೆ ಬಿಟ್ಟುಬಿಡಿ! ಇಂದಿನ ಬೆಲೆ ನೋಡಿ

ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?

ಭಾರತದಲ್ಲಿ ಚಿನ್ನದ ದರ ಇಂದು ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,930 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,651ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ79,300 ರೂ.ಗಳು ವ್ಯಾಪಾರವಿದೆ. 10 ಗ್ರಾಂ ನ 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 86,510 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ.

ಇನ್ನೂ 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,93,000 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,65,100
ಇದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 2,700ರೂ.ಗಳ ಏರಿಕೆ ಕಂಡಿದೆ. 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 64,880 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?

ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡಿದೆ.ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 99,500 ರೂಪಾಯಿಗಳು ವಾಹಿವಾಟುವಿದ್ದು, ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಸಾವಿರ ರೂಪಾಯಿಗಳ ಏರಿಕೆ ಕಂಡಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 99.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 995 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,950 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಏರಿಕೆ ಕಂಡಿದೆ.

MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?

MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಏಪ್ರಿಲ್ 2025 ರಲ್ಲಿ ಮುಕ್ತಾಯಗೊಂಡ ಎಂಸಿಎಕ್ಸ್ ಚಿನ್ನದ ಬೆಲೆ 10 ಗ್ರಾಂಗೆ 84,845 ರೂ. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಮಾರ್ಚ್ 2025 ರಲ್ಲಿ ಮುಕ್ತಾಯಗೊಂಡ ಎಂಸಿಎಕ್ಸ್ ಬೆಳ್ಳಿ ಬೆಲೆ 1 ಕೆಜಿಗೆ 95,790 ರೂ. ಇಂಟ್ರಾಡೇ ಗರಿಷ್ಠ ಮಟ್ಟವನ್ನು ತಲುಪಿ ನಂತರ 1 ಕೆಜಿ ಮಟ್ಟಕ್ಕೆ 95,500 ರೂ. ನಲ್ಲಿ ಮುಕ್ತಾಯವಾಯಿತು.

ಸ್ಪಾಟ್ ಚಿನ್ನದ ಬೆಲೆ ಹೇಗಿದೆ?

ಟ್ರೇಡಿಂಗ್ ಎಕನಾಮಿಕ್ಸ್ ಪ್ರಕಾರ, ಶುಕ್ರವಾರ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ $2,870 ಕ್ಕೆ ಏರಿತು, ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ ಸತತ ಆರನೇ ವಾರದ ಲಾಭದತ್ತ ಸಾಗುತ್ತಿದೆ. ಜಾಗತಿಕ ವ್ಯಾಪಾರ ಉದ್ವಿಗ್ನತೆ ಮತ್ತು ಆರ್ಥಿಕ ಅನಿಶ್ಚಿತತೆಯ ಮಧ್ಯೆ ಹೆಚ್ಚಿದ ಬೇಡಿಕೆಯಿಂದಾಗಿ ಈ ಲೋಹವು ಈ ವಾರ ಪದೇ ಪದೇ ಏರಿಕೆಯ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಅಧ್ಯಕ್ಷ ಟ್ರಂಪ್ ವಾರದ ಆರಂಭದಲ್ಲಿ ಮೆಕ್ಸಿಕೊ ಮತ್ತು ಕೆನಡಾ ಮೇಲಿನ ಸುಂಕಗಳನ್ನು ಮುಂದೂಡಿದರು. ಆದರೆ ಎಲ್ಲಾ ಚೀನೀ ಆಮದುಗಳ ಮೇಲೆ ಶೇ.10ಸುಂಕವನ್ನು ವಿಧಿಸಿದರು.

ನಗರ 22ಕ್ಯಾರೆಟ್ 24K ಕ್ಯಾರೆಟ್
ಬೆಂಗಳೂರು 7,930 8,651
ಚೆನ್ನೈ 7,930 8,651
ಮುಂಬೈ 7,930 8,651
ದೆಹಲಿ 7,945 8,666
ಕೋಲ್ಕತಾ 7,930 8,651
ಹೈದರಾಬಾದ್ 7,930 8,651
ಪುಣೆ 7,930 8,651

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)

ಬೆಂಗಳೂರು: 9,950 ರೂ
ಚೆನ್ನೈ: 10,700 ರೂ
ಮುಂಬೈ: 9,950 ರೂ
ದೆಹಲಿ: 9,950 ರೂ
ಕೋಲ್ಕತಾ: 9,950 ರೂ
ಹೈದರಾಬಾದ್: 10,700 ರೂ
ಪುಣೆ : 9,950 ರೂ

ಚಿನ್ನ ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮೂರು ತಿಂಗಳು ಮುಂದೂಡುವುದು ಉತ್ತಮ. ಏಪ್ರಿಲ್‌ವರೆಗೆ ಕಾದರೆ, ಆ ನಂತರ ಚಿನ್ನದ ಬೆಲೆಗಳು ಕಡಿಮೆಯಾಗುತ್ತವೆ. ಏಕೆಂದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ದರವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸಿದೆ. ಇದರಿಂದಾಗಿ ಏಪ್ರಿಲ್ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿಯಾಗಿ ಇಳಿಯುವ ಸಾಧ್ಯತೆ ಇದೆ.

ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.ಆದರೆ ಇಂದು ಬಂಗಾರದ ಬೆಲೆ ಏರಿಕೆಯಾಗಿರುವುರಿಂದ ಚಿನ್ನ ಖರೀದಿ ಮಾಡಲು ಹಿಂದೇಟು ಆಗುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+