For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಶುಭ ಸುದ್ದಿ: ಸತತ 4ನೇ ದಿನ ಕುಸಿತ ಕಂಡ ಚಿನ್ನದ ಬೆಲೆ

|

ಆಭರಣ ಪ್ರಿಯರಿಗೆ, ಚಿನ್ನ ಖರೀದಿದಾರರಿಗೆ ಶುಕ್ರವಾರ ಶುಭ ಸುದ್ದಿ ಸಿಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಮುಂದುವರಿದಿದೆ. ಸತತ ನಾಲ್ಕನೇ ದಿನವಾದ ಇಂದು ಕೂಡಾ ಚಿನ್ನದ ಬೆಲೆ ಮೇಲಕ್ಕೇರಲಿಲ್ಲ.

ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50,653 ರು ಗೆ ಇಳಿದಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 61,512 ರೂಪಾಯಿಯಂತೆ ವಹಿವಾಟು ನಡೆಸಿದೆ. ನಾಳೆ(ಅ.17ರಿಂದ) ಭಾರತದ ಹಲವು ರಾಜ್ಯಗಳಲ್ಲಿ ನವರಾತ್ರಿ ಹಬ್ಬದ ಸೀಸನ್ ಆರಂಭವಾಗಲಿದ್ದು, ಸಹಜವಾಗಿ ಬಂಗಾರದ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಹುಟ್ಟುಕೊಂಡಿದೆ.

ಸೋಮವಾರದ ವೇಳೆಗೆ ಮತ್ತೊಮ್ಮೆ ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56,200 ರೂಪಾಯಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 80,000 ರೂಪಾಯಿಯಾಗಿತ್ತು. ಅದಾದ ನಂತ್ರ ಈವರೆಗೆ ಚಿನ್ನ ಹತ್ತು ಗ್ರಾಂಗೆ 5547 ರೂಪಾಯಿವರೆಗೆ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಇಲ್ಲಿಯವರೆಗೆ 18488 ರೂಪಾಯಿ ಇಳಿಕೆ ಕಂಡಿದೆ.

ಗ್ರಾಹಕರಿಗೆ ಶುಭ ಸುದ್ದಿ: ಸತತ 4ನೇ ದಿನ ಕುಸಿತ ಕಂಡ ಚಿನ್ನದ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ ಶೇಕಡಾ 0.1ರಷ್ಟು ಇಳಿಕೆಯಾಗಿದ್ದು, 1,906.39 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆ ಶೇಕಡಾ 0.2ರಷ್ಟು ಇಳಿಕೆ ಕಂಡಿದ್ದು, 24.26 ಡಾಲರ್ ಪ್ರತಿ ಔನ್ಸ್ ಆಗಿದೆ. ಪ್ಲಾಟಿನಂ ಶೇ 0.2ರಷ್ಟು ಇಳಿಕೆಯಾಗಿ, ಪ್ರತಿ ಔನ್ಸ್ ಬೆಲೆ 866.05 ಡಾಲರ್ ನಷ್ಟಿದೆ.

ಯುರೋಪ್, ಅಮೆರಿಕದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಅನೇಕ ದೇಶಗಳಲ್ಲಿ ಮತೊಮ್ಮೆ ಲಾಕ್ಡೌನ್ ಜಾರಿ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ಆರ್ಥಿಕ ಕುಸಿತ ಮತ್ತೆ ಆರಂಭವಾಗಿದೆ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 1.8 ಟ್ರಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಘೋಷಣೆ ಇನ್ನೂ ಜಾರಿಯಾಗಿಲ್ಲ

ಭಾರತದಲ್ಲಿ ಸವರನ್ ಗೋಲ್ಡ್ ಯೋಜನೆ ಪಡೆಯಲು ಅ.16 ಕೊನೆ ದಿನವಾಗಿದೆ. ಪ್ರತಿ ಗ್ರಾಂ ಮೇಲೆ 5,051ರು ನಂತೆ ನೀಡಲಾಗುತ್ತಿದೆ. ಜೊತೆಗೆ ಡಿಜಿಟಲ್ ಮಾದರಿ ಚಿನ್ನದ ಹೂಡಿಕೆ ಬೆಳವಣಿಗೆಯಾಗುತ್ತಿದೆ. ಹೀಗಾಗಿ, ಚಿನ್ನದ ಬೆಲೆ ಏರಿಕೆಯ ಮುನ್ಸೂಚನೆ ಇದ್ದೇ ಇದೆ ಎಂದು ಕೋಟಕ್ ಸೆಕ್ಯುರಿಟೀಸ್ ತಜ್ಞರು ಹೇಳಿದ್ದಾರೆ.

English summary

Gold prices today drop, down ₹5,500 from record highs; silver rates slip

Gold and silver prices in India struggled for direction amid muted global rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X