ಚಿನ್ನದ ಬೆಲೆ 7 ದಿನದಲ್ಲಿ 6ನೇ ಬಾರಿ ಇಳಿಕೆ: ಬೆಳ್ಳಿ ಬೆಲೆಯಲ್ಲೂ ಕುಸಿತ

ಚಿನ್ನ ಹಾಗೂ ಬೆಳ್ಳಿಯ ದರವು ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ (ಆಗಸ್ಟ್ 27, 2020) ಇಳಿಕೆ ದಾಖಲಿಸಿದೆ. ಈ ಹಿಂದಿನ ಸೆಷನ್ ನಲ್ಲಿ ಉತ್ತಮ ಏರಿಕೆ ದಾಖಲಿಸಿದ್ದವು. MCXನಲ್ಲಿ ಅಕ್ಟೋಬರ್ ಚಿನ್ನದ ಫ್ಯೂಚರ್ಸ್ 0.22% ಇಳಿಕೆಯಾಗಿ 10 ಗ್ರಾಮ್ ಚಿನ್ನದ ಬೆಲೆ 51,665 ರುಪಾಯಿಗೆ ವಹಿವಾಟು ನಡೆಸಿತು. ಇನ್ನು ಕೇಜಿ ಬೆಳ್ಳಿಯ ದರದಲ್ಲಿ 1% ಇಳಿದು, 66,821 ರುಪಾಯಿಗೆ ವಹಿವಾಟು ನಡೆಸಿತು.

ಈ ಹಿಂದಿನ ಸೆಷನ್ ನಲ್ಲಿ ಚಿನ್ನವು ಪುಟಿದೆದ್ದಿತು. ಐದು ದಿನಗಳ ನಷ್ಟದ ಸರಪಣಿಯನ್ನು ಕಳಚಿತು. ಚಿನ್ನದ ಫ್ಯೂಚರ್ಸ್ 10 ಗ್ರಾಮ್ ಗೆ 900 ರುಪಾಯಿ ಹೆಚ್ಚಳ ದಾಖಲಿಸಿದರೆ, ಬೆಳ್ಳಿಯು ಕೇಜಿಗೆ 3,500 ರುಪಾಯಿ ಏರಿಕೆ ಕಂಡಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಹೆಚ್ಚಳವಾದ ನಂತರ ಸ್ಥಿರವಾಗಿದೆ.

ಸ್ಪಾಟ್ ಚಿನ್ನದ ದರ ಔನ್ಸ್ ಗೆ $ 1952.11ರೊಂದಿಗೆ ಸ್ಥಿರವಾಗಿದೆ. ಅದಕ್ಕೆ ಯು.ಎಸ್. ಡಾಲರ್ ದುರ್ಬಲವಾಗಿರುವುದು ಬೆಂಬಲ ನೀಡಿದೆ. ಇತರ ಬೆಲೆ ಬಾಳುವ ಲೋಹದಲ್ಲಿ ಬೆಳ್ಳಿ ಬೆಲೆ ಔನ್ಸ್ ಗೆ $ 27.30 ಇಳಿಕೆಯಾಗಿದ್ದರೆ, ಪ್ಲಾಟಿನಂ 0.6% ಹೆಚ್ಚಳವಾಗಿ $ 934.29ಕ್ಕೆ ತಲುಪಿದೆ. ಚೀನಾದಿಂದ ದಕ್ಷಿಣ ಚೀನಾ ಸಮುದ್ರದ ಮೇಲೆ ಕ್ಷಿಪಣಿ ಹಾರಿಸಿರುವುದು ಹಾಗೂ ಅಮೆರಿಕದಿಂದ ಚೈನೀಸ್ ಕಂಪೆನಿಗಳ ಮೇಲೆ ನಿರ್ಬಂಧ ಹೇರಿರುವುದು ಚಿನ್ನದ ಬೆಲೆ ಏರಿಕೆಗೆ ಬೆಂಬಲ ನೀಡಿದೆ.

ಚಿನ್ನದ ಬೆಲೆ 7 ದಿನದಲ್ಲಿ 6ನೇ ಬಾರಿ ಇಳಿಕೆ: ಬೆಳ್ಳಿ ಬೆಲೆಯೂ ಕುಸಿತ

ಆದರೆ, ಭಾರತ ಹಾಗೂ ಚೀನಾ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಚಿನ್ನಕ್ಕೆ ಬೇಡಿಕೆ ಇಲ್ಲದಿರುವುದರಿಂದ ರಿಯಾಯಿತಿಯಲ್ಲಿ ಮಾರಾಟ ಆಗುತ್ತಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಯು.ಎಸ್. ಡಾಲರ್ ಮೌಲ್ಯ ಹಾಗೂ ಫೆಡ್ ನಿಲುವಿನ ಬಗ್ಗೆ ಸ್ಪಷ್ಟತೆ ಸಿಗುವ ತನಕ ಚಿನ್ನದ ದರದಲ್ಲಿ ಏರಿಳಿತ ಇರುತ್ತದೆ. ಕೊರೊನಾ ಬಗ್ಗೆ ಆತಂಕ ಇರುವ ತನಕ ಹಾಗೂ ಯು.ಎಸ್.- ಚೀನಾ ಮಧ್ಯೆ ಸಂಬಂಧ ಹಳಸಿರುವುದರಿಂದ ಚಿನ್ನದ ಬೆಲೆ ಇಳಿಕೆ ಆದಾಗ ಮತ್ತೆ ಬೇಡಿಕೆ ಕಂಡುಬರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+