For Quick Alerts
ALLOW NOTIFICATIONS  
For Daily Alerts

ಸತತ 4ನೇ ದಿನ ಇಳಿಕೆ ಕಂಡು ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನ

|

ಜಾಗತಿಕ ದರವನ್ನು ಅನುಸರಿಸಿ, ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬುಧವಾರ ತೀಕ್ಷ್ಣ ಇಳಿಕೆ ಕಂಡುಬಂತು. ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ ದರವು 0.6% ಇಳಿಕೆ ಕಂಡು, ಒಂದು ತಿಂಗಳ ಕನಿಷ್ಠ ಮಟ್ಟವಾದ ರು. 48,845 ತಲುಪಿತು. ಆ ಮೂಲಕ ಸತತ ನಾಲ್ಕನೇ ದಿನ ನಷ್ಟವನ್ನು ಕಂಡಿತು. ಇನ್ನು ಬೆಳ್ಳಿ ಫ್ಯೂಚರ್ಸ್ 0.6% ಇಳಿಕೆ ಕಂಡು, ಕೇಜಿಗೆ 66,130 ರುಪಾಯಿಯಲ್ಲಿ ವಹಿವಾಟು ನಡೆಸಿತು.

 

ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ 5 ಅಂಶ ಗಮನದಲ್ಲಿರಲಿಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ 5 ಅಂಶ ಗಮನದಲ್ಲಿರಲಿ

ಸಾರ್ವಜನಿಕ ರಜಾ ಇದ್ದ ಕಾರಣಕ್ಕೆ ಭಾರತೀಯ ಮಾರುಕಟ್ಟೆಗಳು ಮಂಗಳವಾರ ಕಾರ್ಯ ನಿರ್ವಹಿಸಲಿಲ್ಲ. ಯು.ಎಸ್. ಉತ್ತೇಜನಾ ಪ್ಯಾಕೇಜ್ ತಡವಾಗಬಹುದು ಎಂಬ ಕಾರಣಕ್ಕೆ ಚಿನ್ನದ ದರದ ಮೇಲೆ ಒತ್ತಡ ಕಂಡುಬರುತ್ತಿದೆ. ಯು.ಎಸ್. ಫೆಡರಲ್ ರಿಸರ್ವ್ ಹಣಕಾಸು ನೀತಿ ನಿರ್ಧಾರದ ಸಭೆ ಈ ದಿನ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆ ಆಗಿದೆ.

1.9 ಲಕ್ಷ ಕೋಟಿ ಅಮೆರಿಕನ್ ಡಾಲರ್ ಪ್ಯಾಕೇಜ್

1.9 ಲಕ್ಷ ಕೋಟಿ ಅಮೆರಿಕನ್ ಡಾಲರ್ ಪ್ಯಾಕೇಜ್

ಚಿನ್ನವು 0.3% ಕುಸಿದು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1845.30ರಲ್ಲಿ ವ್ಯವಹಾರ ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್ ಗೆ $ 25.43ರಲ್ಲಿ ಇದೆ. ಯು.ಎಸ್. ಕೇಂದ್ರ ಬ್ಯಾಂಕ್ ನಿಂದ ಯಾವುದೇ ಪ್ರಮುಖ ಘೋಷಣೆ ನಿರೀಕ್ಷೆ ಇಲ್ಲ. ಆದ್ದರಿಂದ ವರ್ತಕರು ಹಣಕಾಸು ನೀತಿಯಲ್ಲಿ ಯಾವುದಾದರೂ ಹೊಸ ಯೋಜನೆ ಇರಬಹುದಾ ಎಂದು ಎದುರು ನೋಡುತ್ತಿದ್ದಾರೆ. ಕೋವಿಡ್- 19 ಪರಿಹಾರ ಪ್ಯಾಕೇಜ್ 1.9 ಲಕ್ಷ ಕೋಟಿ ಅಮೆರಿಕನ್ ಡಾಲರ್ ವಿಚಾರವಾಗಿ ಯು.ಎಸ್. ಅಧ್ಯಕ್ಷ ಜೋ ಬೈಡನ್ ಜತೆಗೆ ಜನ ಪ್ರತಿನಿಧಿಗಳು ಚರ್ಚೆ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆ ಕಡೆಯಿಂದ ಸಮಾಯಾವಧಿ ವಿಚಾರದಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ಹೂಡಿಕೆದಾರರು ನಿರೀಕ್ಷೆ ಮಾಡುತ್ತಿದ್ದಾರೆ.

ಇಟಿಎಫ್ ಬೇಡಿಕೆ ದುರ್ಬಲ

ಇಟಿಎಫ್ ಬೇಡಿಕೆ ದುರ್ಬಲ

ಇಟಿಎಫ್ ಬೇಡಿಕೆ ದುರ್ಬಲವಾಗಿಯೇ ಇದೆ. ಎಸ್ ಪಿಡಿಆರ್ ಹೋಲ್ಡಿಂಗ್ಸ್ ಮಂಗಳವಾರ 0.1% ಕುಸಿತ ಕಂಡು, 1,172.38 ಟನ್ ಗಳನ್ನು ತಲುಪಿತ್ತು. ಇನ್ನು ಈ ದಿನ ಬಿಡುಗಡೆ ಆಗಲಿರುವ ಯು.ಎಸ್. ನಾಲ್ಕನೇ ತ್ರೈಮಾಸಿಕದ ಜಿಡಿಪಿ, ಉದ್ಯೋಗ ನಷ್ಟ ಮತ್ತು ಹೊಸ ಮನೆ ಖರೀದಿ ದತ್ತಾಂಶದ ಕಡೆಗೆ ಕೂಡ ಹೂಡಿಕೆದಾರರು ಗಮನ ಇಟ್ಟಿದ್ದಾರೆ. ಈ ಮಧ್ಯೆ, ಐಎಂಎಫ್ ನಿಂದ 2021ರ ಜಾಗತಿಕ ಆರ್ಥಿಕ ಬೆಳವಣಿಗೆ ಅಂದಾಜನ್ನು ಮಂಗಳವಾರ ಹೆಚ್ಚಿಸಲಾಗಿದೆ. ಕೊರೊನಾ ಬಿಕ್ಕಟ್ಟಿನಿಂದ 2020ರಲ್ಲಿ ಇಳಿಕೆ ಹಾದಿಗಿಳಿದಿದ್ದು, ನಿರೀಕ್ಷೆ ಮಾಡಿದ್ದಕ್ಕಿಂತ ಒಂದಿಡೀ ಪರ್ಸೆಂಟೇಜ್ ಕಡಿಮೆ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಚಿನ್ನದ ದರದೊಳಗೆ 12.5% ಆಮದು ಸುಂಕ, 3% ಜಿಎಸ್ ಟಿ
 

ಚಿನ್ನದ ದರದೊಳಗೆ 12.5% ಆಮದು ಸುಂಕ, 3% ಜಿಎಸ್ ಟಿ

ವಿಶ್ಲೇಷಕರ ಅಭಿಪ್ರಾಯದ ಪ್ರಕಾರ, ಯು.ಎಸ್. ಉತ್ತೇಜನಾ ಪ್ಯಾಕೆಜ್ ನಿರೀಕ್ಷೆ ತಳ ಮಟ್ಟದ ದರದಲ್ಲಿ ಚಿನ್ನವನ್ನು ಬೆಂಬಲಿಸುತ್ತದೆ. ಆದರೆ ಜೋ ಬೈಡನ್ ಅಧಿಕಾರಾವಧಿಯಲ್ಲಿ ನೀತಿ ಬದಲಾವಣೆ ನಿರೀಕ್ಷೆಯಲ್ಲಿ ಮಾರುಕಟ್ಟೆಯಲ್ಲಿ ಏರಿಳಿತ ಹೆಚ್ಚು ಮಾಡಿದೆ. ಇನ್ನು ದೇಶೀ ಹೂಡಿಕೆದಾರರು ಬಜೆಟ್ ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಏನಾಗಬಹುದು ಎಂಬ ಕಡೆಗೆ ದೃಷ್ಟಿ ನೆಟ್ಟಿದ್ದಾರೆ. ಭಾರತದಲ್ಲಿ ಚಿನ್ನದ ದರದಲ್ಲಿ 12.5% ಆಮದು ಸುಂಕ ಹಾಗೂ 3% ಜಿಎಸ್ ಟಿ ಒಳಗೊಂಡಿದೆ.

ಡಾಲರ್ ಸೂಚ್ಯಂಕ ಸ್ವಲ್ಪ ಮಟ್ಟಿಗೆ ಹೆಚ್ಚಳ

ಡಾಲರ್ ಸೂಚ್ಯಂಕ ಸ್ವಲ್ಪ ಮಟ್ಟಿಗೆ ಹೆಚ್ಚಳ

ಯು.ಎಸ್. ಡಾಲರ್ ಸೂಚ್ಯಂಕ ಕೂಡ ಈಚಿನ ದಿನಗಳಲ್ಲಿ ದಿನದ ದರವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಈ ದಿನ ಡಾಲರ್ ಸೂಚ್ಯಂಕ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿ, 90.203ರಲ್ಲಿ ಇತ್ತು. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಪ್ರಮುಖ ಆರ್ಥಿಕತೆಗಳಲ್ಲಿ ಮಿಶ್ರ ಆರ್ಥಿಕ ಸ್ಥಿತಿ, ಹೆಚ್ಚುತ್ತಿರುವ ಚೀನಾ ಮತ್ತು ಯುಎಸ್ ಉದ್ವಿಗ್ನತೆ ಮತ್ತು ಹೂಡಿಕೆಗೆ ಚಿನ್ನ ಸುರಕ್ಷಿತ ಎಂಬ ಭಾವನೆಯಿಂದಾಗಿ ಹಳದಿ ಲೋಹಕ್ಕೆ ತಳ ಮಟ್ಟದಲ್ಲಿ ಬೆಂಬಲ ಸಿಗುತ್ತಿದೆ.

English summary

Gold Rate Down Straight 4th Day; Now Price At One Month Low

Gold rate in Indian market futures down straight 4th day on Wednesday, January 27, 2021. Silver price also slump. Here is an analysis.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X