For Quick Alerts
ALLOW NOTIFICATIONS  
For Daily Alerts

3 ದಿನಗಳ ಸತತ ಏರಿಕೆ ನಂತರ ಕುಸಿದ ಚಿನ್ನ, ಬೆಳ್ಳಿ ಬೆಲೆಯೂ ಇಳಿಕೆ

|

ಜಾಗತಿಕ ಮಾರುಕಟ್ಟೆಯಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಭಾರತದ ಫ್ಯೂಚರ್ಸ್ ಮಾರ್ಕೆಟ್ ನಲ್ಲಿ ಗುರುವಾರ (ಅಕ್ಟೋಬರ್ 22, 2020) ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. MCXನಲ್ಲಿ ಡಿಸೆಂಬರ್ ಚಿನ್ನದ ಫ್ಯೂಚರ್ಸ್ 0.45% ಕುಸಿತ ಕಂಡು, ಪ್ರತಿ 10 ಗ್ರಾಮ್ ಗೆ 51,100 ರುಪಾಯಿಗೆ ವಹಿವಾಟು ನಡೆಸಿದೆ.

ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್

ಇನ್ನು ಬೆಳ್ಳಿಯ ಫ್ಯೂಚರ್ಸ್ 1.2% ಇಳಿಕೆ ಕಂಡು, ಪ್ರತಿ ಕೇಜಿಗೆ 62,847 ರುಪಾಯಿಗೆ ವಹಿವಾಟು ನಡೆಸಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆಯು 0.7% ಏರಿಕೆ ಕಂಡಿತ್ತು. ಸತತವಾಗಿ ಮೂರು ದಿನಗಳ ಕಾಲ ಚಿನ್ನದ ಬೆಲೆ ಏರಿಕೆಯಾಗಿತ್ತು. ಎಂಸಿಎಕ್ಸ್ ನಲ್ಲಿ ಬೆಳ್ಳಿ ದರವು 0.7% ಹೆಚ್ಚಳವಾಗಿತ್ತು.

ಯುಎಸ್ ಆರ್ಥಿಕ ಉತ್ತೇಜನ ಪ್ಯಾಕೇಜ್ ಅನಿಶ್ಚಿತತೆ

ಯುಎಸ್ ಆರ್ಥಿಕ ಉತ್ತೇಜನ ಪ್ಯಾಕೇಜ್ ಅನಿಶ್ಚಿತತೆ

ಯುಎಸ್ ಆರ್ಥಿಕ ಉತ್ತೇಜನ ಪ್ಯಾಕೇಜ್ ಬಗೆಗಿನ ಅನಿಶ್ಚಿತತೆ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆ ಪೂರ್ಣವಾಗುವ ತನಕ ಕೊರೊನಾ ವೈರಸ್ ಆರ್ಥಿಕ ಪ್ಯಾಕೇಜ್ ಘೋಷಣೆ ಆಗುವುದಿಲ್ಲ ಎಂಬ ಆತಂಕ ಇದ್ದೇ ಇದೆ. ಇದಕ್ಕೆ ಕಾರಣ ಆಗಿರುವುದು ಡೊನಾಲ್ಡ್ ಟ್ರಂಪ್ ಹೇಳಿರುವ ಮಾತು. ಪರಿಹಾರ ಪ್ಯಾಕೇಜ್ ವಿಚಾರದಲ್ಲಿ ಡೆಮಾಕ್ರಟ್ ಗಳು ಸಂಧಾನಕ್ಕೆ ಸಿದ್ಧವಿಲ್ಲ ಎಂದು ಟ್ರಂಪ್ ಆರೋಪಿಸಿದ್ದಾರೆ. ಆದರೆ ವರದಿಗಳು ಹೇಳುವ ಪ್ರಕಾರ, ಸ್ಪೀಕರ್ ಪೆಲೊಸಿ ಅವರು ಆರ್ಥಿಕ ಪ್ಯಾಕೇಜ್ ವಿಚಾರವಾಗಿ ಜನಪ್ರತಿನಿಧಿಗಳ ಜತೆ ಮಾತುಕತೆ ಮುಂದುವರಿಸಿದ್ದಾರೆ.

ಇತರ ಬೆಲೆ ಬಾಳುವ ಲೋಹಗಳ ದರ

ಇತರ ಬೆಲೆ ಬಾಳುವ ಲೋಹಗಳ ದರ

ಸ್ಪಾಟ್ ಗೋಲ್ಡ್ ದರ 0.2% ಇಳಿಕೆಯಾಗಿ, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1920.86ಗೆ ಇಳಿಕೆ ಕಂಡಿದೆ. ಈ ಹಿಂದಿನ ಸೆಷನ್ ನಲ್ಲಿ ವಾರದ ಗರಿಷ್ಠ ಮಟ್ಟವಾದ $ 1931.01 ತಲುಪಿತ್ತು. ಅಲ್ಲಿಂದ ಕೆಳಗೆ ಇಳಿದಿದೆ. ಇನ್ನು ಇದೇ ವೇಳೆ ಸ್ಥಿರವಾದ ಡಾಲರ್ ನಿಂದ ಚಿನ್ನದ ಮೇಲೆ ಒತ್ತಡ ಆಗಿದೆ. ಡಾಲರ್ ಸೂಚ್ಯಂಕವು 0.21% ಹೆಚ್ಚಳ ಆಗಿದೆ. ಇತರ ಕರೆನ್ಸಿಗಳ ಮೂಲಕ ಚಿನ್ನದ ವ್ಯವಹಾರ ನಡೆಸುವವರಿಗೆ ಬೆಲೆ ಮತ್ತೂ ಹೆಚ್ಚಳ ಆಗುವಂತೆ ಮಾಡಿದೆ. ಇತರ ಬೆಲೆ ಬಾಳುವ ಲೋಹಗಳ ಪೈಕಿ ಬೆಳ್ಳಿ ದರ ಪ್ರತಿ ಔನ್ಸ್ ಗೆ 0.4% ಇಳಿದು, $ 24.96ರಂತೆ ವಹಿವಾಟು ನಡೆಸಿದೆ. ಪ್ಲಾಟಿನಂ 2% ಏರಿಕೆ ಕಂಡು, $ 887.74 ತಲುಪಿದೆ.

ವಿಶ್ಲೇಷಕರ ಅಭಿಪ್ರಾಯ ಏನು?

ವಿಶ್ಲೇಷಕರ ಅಭಿಪ್ರಾಯ ಏನು?

ಜಾಗತಿಕ ಮಾರ್ಕೆಟ್ ನಲ್ಲಿ ಕಳೆದ ಆಗಸೃ ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ $ 2072.50 ತಲುಪಿತ್ತು ಚಿನ್ನ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಗಳನ್ನು ಘೋಷಿಸಿದ ಪರಿಣಾಮವಾಗಿ ಆ ಏರಿಕೆ ಕಂಡುಬಂದಿತ್ತು. ಆಗ ಬಾಂಡ್ ಮೇಲಿನ ರಿಟರ್ನ್ಸ್ ಕಡಿಮೆ ಎಂಬ ಕಾರಣಕ್ಕೆ ಚಿನ್ನದ ಬೇಡಿಕೆಗೆ ಕಾರಣವಾಯಿತು. ಇದರ ಜತೆಗೆ ಹಣದುಬ್ಬರದ ಕಾರಣವೂ ಇತ್ತು. ಭಾರತದಲ್ಲಿ ಚಿನ್ನದ ದರವು ಆಗಸ್ಟ್ 7ನೇ ತಾರೀಕು ಪ್ರತಿ 10 ಗ್ರಾಮ್ ಗೆ 56,200 ತಲುಪಿತ್ತು. ಹೂಡಿಕೆದಾರರು ಈಗಲೂ ಯುಎಸ್ ನಲ್ಲಿನ ಕೊರೊನಾ ಪ್ಯಾಕೇಜ್ ಎದುರು ನೋಡುತ್ತಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು.

ಯುರೋಪಿಯನ್ ಒಕ್ಕೂಟ- ಯುಕೆ ಮಾತುಕತೆ

ಯುರೋಪಿಯನ್ ಒಕ್ಕೂಟ- ಯುಕೆ ಮಾತುಕತೆ

ಚಿನ್ನದ ಇಟಿಎಫ್ ಮೇಲೆ ಹೂಡಿಕೆ ಮಾಡುವವರು ತಕ್ಷಣಕ್ಕೆ ಖರೀದಿಯಿಂದ ದೂರ ಸರಿದು ನಿಂತಿದ್ದಾರೆ. ವಿಶ್ವದ ಅತಿ ದೊಡ್ಡ ಚಿನ್ನದ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಆದ ಎಸ್ ಪಿಡಿಆರ್ ಗೋಲ್ಡ್ ಟ್ರಸ್ಟ್ ಬುಧವಾರ 0.1% ಇಳಿಕೆಯಾಗಿ, 1269.35 ಟನ್ ತಲುಪಿದೆ. ಮಂಗಳವಾರದಂದು ಇದು 1269.93 ಟನ್ ಇತ್ತು. ಇನ್ನೂ ಮುಖ್ಯವಾದ ಅಂಶವೆಂದರೆ ಚಿನ್ನದ ಹೂಡಿಕೆದಾರರು ಬ್ರಿಟನ್- ಯುರೋಪಿಯನ್ ಒಕ್ಕೂಟದ ಮಧ್ಯದ ವ್ಯಾಪಾರ ಒಪ್ಪಂದವನ್ನು ಎದುರು ನೋಡುತ್ತಿದ್ದಾರೆ. ಮುಂದಿನ ವರ್ಷದ ಆರಂಭದಿಂದ ಕೋಟ್ಯಂತರ ಡಾಲರ್ ಮೌಲ್ಯದ ವ್ಯವಹಾರ ಕಾಪಾಡಿಕೊಳ್ಳುವ ಉದ್ದೇಶದಿಂದ ಎರಡೂ ಕಡೆ ಮಾತುಕತೆ ಶುರುವಾಗಿದೆ.

English summary

Gold Rate Fall After Rising For 3 Days; Silver Price Also Plunge

Gold rate fall after rising for 3 days on Thursday (October 22, 2020) and silver price also down. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X