For Quick Alerts
ALLOW NOTIFICATIONS  
For Daily Alerts

ಚಿನ್ನವು 10 ಗ್ರಾಮ್ ಗೆ 65ರಿಂದ 68 ಸಾವಿರ ರುಪಾಯಿ ತಲುಪಬಹುದು

By ಅನಿಲ್ ಆಚಾರ್
|

ಕಳೆದ ಎರಡು ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಕೆಲವರು ಇದನ್ನು ನಿರೀಕ್ಷೆ ಮಾಡಿದ್ದಿರಬಹುದು. 2019ರಲ್ಲಿ 19% ಏರಿಕೆ ಕಂಡಿತ್ತು ಚಿನ್ನ. ಇನ್ನು 2020ರಲ್ಲಿ ಇಲ್ಲಿಯ ತನಕ 40% ಹೆಚ್ಚಳ ಆಗಿದೆ. ಭಾರತದಲ್ಲಿ ಚಿನ್ನದ ದರವು ಇನ್ನೂ ಏರಿಕೆ ಕಾಣಬಹುದು. ಈಗಲೂ ವಿಶ್ವದಾದ್ಯಂತ ನಾನಾ ಸಮಸ್ಯೆಗಳಿದ್ದರೂ ಹಾಗೂ ಡಾಲರ್ ಮೌಲ್ಯ ದುರ್ಬಲವಾಗಿದ್ದರೂ ಬೆಲೆ ಏರಿಕೆ ನಿರೀಕ್ಷಿಸಬಹುದು.

 

ನಗದು ಹರಿದಾಟ ಹೆಚ್ಚಾಗಿರುವುದರಿಂದ ಹಣದುಬ್ಬರಕ್ಕೆ ಕಾರಣ ಆಗಬಹುದು. ಇದರ ಜತೆಗೆ ಸರ್ಕಾರಗಳ ವಿತ್ತೀಯ ಕೊರತೆಯಿಂದ ಯುಎಸ್ ಡಾಲರ್ ಸೇರಿದಂತೆ ಇತರ ಕರೆನ್ಸಿಗಳ ಮೇಲೆ ಒತ್ತಡ ಬೀಳುತ್ತದೆ. ಯಾವಾಗ ಡಾಲರ್ ಮೌಲ್ಯದಲ್ಲಿ ಇಳಿಕೆಯಾಗುತ್ತದೋ ಅದರ ಪರಿಣಾಮವಾಗಿ ವಸ್ತುಗಳು, ಅದರಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತದೆ.

49,000 ರುಪಾಯಿ ಸಮೀಪ ಚಿನ್ನವನ್ನು ಖರೀದಿಸಬಹುದು

49,000 ರುಪಾಯಿ ಸಮೀಪ ಚಿನ್ನವನ್ನು ಖರೀದಿಸಬಹುದು

ಸದ್ಯದ ಪರಿಸ್ಥಿತಿಯನ್ನು ನೋಡುವುದಾದರೆ, ಈಗಿನ ಬೆಲೆ ಕುಸಿತವು ಖಂಡಿತಾ ಸುವರ್ಣಾವಕಾಶವೇ. ಮಧ್ಯಮಾವಧಿಯನ್ನು ಗಮನದಲ್ಲಿ ಇಟ್ಟುಕೊಂಡು COMEXನಲ್ಲಿ $ 1840- $ 1850ಕ್ಕೆ ಹಾಗೂ ದೇಶೀಯವಾಗಿ 49,000 ರುಪಾಯಿ ಸಮೀಪ ಚಿನ್ನವನ್ನು ಖರೀದಿಸಬಹುದು. 2021ರ ಕೊನೆ ಹೊತ್ತಿಗೆ COMEXನಲ್ಲಿ $ 2,450 ಹಾಗೂ ಪ್ರತಿ 10 ಗ್ರಾಮ್ ಗೆ ದೇಶೀ ಮಾರುಕಟ್ಟೆಯಲ್ಲಿ 65ರಿಂದ 68 ಸಾವಿರ ರುಪಾಯಿ ತಲುಪಬಹುದು ಎಂದು ಈಚಿನ ತನ್ನ ವರದಿಯಲ್ಲಿ ಮೋತಿಲಾಲ್ ಓಸ್ವಾಲ್ ಹೇಳಿದೆ. ಚಿನ್ನ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ಸ್ ಗಳಿಗೆ (ETF) ಸ್ಥಿರವಾಗಿ ಹಣ ಹರಿದುಬರುತ್ತಿದೆ. ಇದು ಚಿನ್ನದ ದರಕ್ಕೆ ನೆರವಾಗುತ್ತಿದೆ. ಯಾವಾಗ ಫಿಸಿಕಲ್ ಚಿನ್ನಕ್ಕೆ ಬೇಡಿಕೆ ಇರುವುದಿಲ್ಲವೋ ಆಗ ಇದು ಬರುತ್ತದೆ. ಈ ಬಾರಿಯ ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಇಟಿಎಫ್ ಗಳಿಗೆ ಹರಿವು ಹೆಚ್ಚಾಗಿದೆ.

ವರ್ಷದ ಮೊದಲಾರ್ಧದಲ್ಲಿ ದಾಖಲೆಯ 734 ಟನ್ ಚಿನ್ನ ಹರಿದುಬಂದಿತ್ತು
 

ವರ್ಷದ ಮೊದಲಾರ್ಧದಲ್ಲಿ ದಾಖಲೆಯ 734 ಟನ್ ಚಿನ್ನ ಹರಿದುಬಂದಿತ್ತು

ವರ್ಷದ ಮೊದಲಾರ್ಧದಲ್ಲಿ ದಾಖಲೆಯ 734 ಟನ್ ಚಿನ್ನ ಹರಿದುಬಂದಿತ್ತು. ಈ ವರ್ಷದ ಆರು ತಿಂಗಳಲ್ಲಿ ಬಂದಿದ್ದು, 2009ರಲ್ಲಿ ಇಡೀ ವರ್ಷದಲ್ಲಿ ಹರಿದುಬಂದಿದ್ದ 646 ಟನ್ ದಾಖಲೆಯನ್ನು ಮೀರಿದೆ. ಮತ್ತು ಜಾಗತಿಕವಾಗಿ ಚಿನ್ನದ ಹೋಲ್ಡಿಂಗ್ಸ್ 3621 ಟನ್ ದಾಟಿದೆ. ವರ್ಷದ ಮೊದಲಾರ್ದದಲ್ಲಿ ಯುಎಸ್ ಡಾಲರ್ ಚಿನ್ನದ ದರ 17% ಗಳಿಕೆ ಕಂಡಿದೆ. ದ್ವಿತೀಯ ತ್ರೈಮಾಸಿಕದಲ್ಲಿ ಹತ್ತು ಪರ್ಸೆಂಟ್ ಏರಿಕೆ ಕಂಡಿದೆ. ಚಿನ್ನದ ಇಟಿಎಫ್ ಗೆ ಹೆಚ್ಚಿನ ಹರಿವು ಇದ್ದದರಿಂದ ಈ ಬೆಳವಣಿಗೆ ಆಗಿದೆ,'' ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.

ಕೆಲವು ದೇಶಗಳಲ್ಲಿ ಈಗಾಗಲೇ ಕೆಲವು ಚಟುವಟಿಕೆಗಳ ಮೇಲೆ ನಿರ್ಬಂಧ

ಕೆಲವು ದೇಶಗಳಲ್ಲಿ ಈಗಾಗಲೇ ಕೆಲವು ಚಟುವಟಿಕೆಗಳ ಮೇಲೆ ನಿರ್ಬಂಧ

2020ನೇ ಇಸವಿಯಲ್ಲಿ ಚಿನ್ನದ ಬೆಲೆ ಹೀಗೆ ಸ್ಥಿರವಾಗಿ ಮುಂದುವರಿಯಬಹುದು. ಅದಕ್ಕೆ ನಾನಾ ಕಾರಣಗಳಿವೆ. ಯುರೋಪ್ ಮೂಲಕ ಎರಡನೇ ಬಾರಿಗೆ ಕೊರೊನಾ ವ್ಯಾಪಿಸಲಿದೆ ಎಂಬ ವರ್ತಮಾನ ಇದೆ. ಡೆನ್ಮಾರ್ಕ್, ಗ್ರೀಸ್, ಸ್ಪೇನ್ ನಲ್ಲಿ ಈಗಾಗಲೇ ಕೆಲವು ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ. ಆರ್ಥಿಕ ಚಟುವಟಿಕೆಗಳಂತೂ ಸದ್ಯಕ್ಕೆ ಚೇತರಿಸಿಕೊಳ್ಳುವ ಸೂಚನೆ ಇಲ್ಲ. ಚಿನ್ನವು ಸ್ಥಿರವಾಗಿ ಮುಂದುವರಿಯಲಿದೆ. ಒಂದು ವೇಳೆ ಕೊರೊನಾಗೆ ಲಸಿಕೆ ಕಂಡುಹಿಡಿದರೂ ಚಿನ್ನದ ಟ್ರೆಂಡ್ ಸಟಕ್ಕನೆ ಬದಲಾಗಲ್ಲ. ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಶುರುವಿನಲ್ಲಿ ಲಸಿಕೆ ಬರಬಹುದು. ಆ ನಂತರ ನಿಧಾನಕ್ಕೆ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಆಗಿ, ಜಾಗತಿಕವಾಗಿ ಪೂರೈಸಲಾಗುತ್ತದೆ. ಆದರೆ ಇವೆಲ್ಲದರಿಂದ ಅದರದೇ ಆದ ಪ್ರತಿಕ್ರಿಯೆಗಳು ದೊರೆಯಲಿವೆ ಎಂದು ಮೋತಿಲಾಲ್ ಓಸ್ವಾಲ್ ತನ್ನ ವರದಿಯಲ್ಲಿ ಹೇಳಿದೆ.

ಬೆಲೆ ಇಳಿದಾಗೆಲ್ಲ ಖರೀದಿ ಮಾಡಬಹುದು

ಬೆಲೆ ಇಳಿದಾಗೆಲ್ಲ ಖರೀದಿ ಮಾಡಬಹುದು

ಚಿನ್ನದ ದೊಡ್ಡ ಮಟ್ಟದ ಇಳಿಕೆ ಆಗಬಹುದು ಎಂದು ಕಾಯುತ್ತಿದ್ದಲ್ಲಿ ತಕ್ಷಣಕ್ಕೆ ಹಾಗೆ ಆಗುವ ಸಾಧ್ಯತೆಗಳಿಲ್ಲ. ತೀರಾ ಹೆಚ್ಚೆಂದರೆ, ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ನಿರೀಕ್ಷಿಸಬಹುದು. ಆದರೆ ಚಿನ್ನದ ದರ ಮೇಲಕ್ಕೆ ಏರುವ ಸಾಧ್ಯತೆಗಳೇ ಹೆಚ್ಚಿವೆ. ಯಾರು ಹೂಡಿಕೆ ಮಾಡುತ್ತಿದ್ದಾರೋ ಅವರು ಹಾಗೆಯೇ ಮುಂದುವರಿಯುವುದು ಉತ್ತಮ. ಯಾವಾಗೆಲ್ಲ ಚಿನ್ನದ ದರದಲ್ಲಿ ಇಳಿಕೆ ಆಗುತ್ತದೋ ಆಗೆಲ್ಲ ಖರೀದಿಸಬಹುದು. ಸದ್ಯಕ್ಕಂತೂ ಹೊಳೆಯುವುದೆಲ್ಲ ಚಿನ್ನ ಎಂಬಂತಾಗಿದೆ. ಮುಂದಿನ ಕೆಲ ಸಮಯ ಚಿನ್ನದ ದರವು ಸ್ಥಿರವಾಗಿ ಇರಲಿದೆ.

English summary

Gold Rate For 10 Grams Can Touch 65000 To 68000 In India

According to experts, gold rate for 10 gm in India can touch 65,000 to 68,000 by 2021 end. Here is an analysis.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X