ಚಿನ್ನದ ಬೆಲೆಯು ಮಂಗಳವಾರ ಬೆಳಗ್ಗೆ (ಜುಲೈ 28, 2020) ಮತ್ತೊಂದು ಹೊಸ ದಾಖಲೆ ಬರೆದಿದೆ. ಜಾಗತಿಕ ಮಾರುಕಟ್ಟೆ ಬೆಲೆಯನ್ನು ಅನುಸರಿಸಿ, 10 ಗ್ರಾಮ್ ಗೆ 52,435 ರುಪಾಯಿ ತಲುಪಿತು. ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ದಾಖಲೆಯಾದ ಔನ್ಸ್ ಗೆ $ 1981.10 ತಲುಪಿತು. ಇನ್ನು ಬೆಳ್ಳಿ ಕೂಡ ಕೇಜಿಗೆ 67.560 ರುಪಾಯಿ ತಲುಪುವ ಮೂಲಕ ಎಂಟು ವರ್ಷಗಳ ಗರಿಷ್ಠ ಮಟ್ಟದ ದಾಖಲೆ ಬರೆಯಿತು.
ತಜ್ಞರು ಹೇಳುವ ಪ್ರಕಾರ, ಚಿನ್ನ ಮತ್ತು ಬೆಳ್ಳಿ ದರದ ಏರಿಕೆ ಮುಂದುವರಿಯಬಹುದು. ಅಮೆರಿಕ ಹಾಗೂ ಚೀನಾ ಮಧ್ಯದ ಉದ್ವಿಗ್ನತೆ ಹಾಗೂ ಡಾಲರ್ ಮೌಲ್ಯದ ದೌರ್ಬಲ್ಯದ ಕಾರಣಕ್ಕೆ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಎಲ್ಲ ಪ್ರಮುಖ ಕರೆನ್ಸಿಗಳ ವಿರುದ್ಧವೂ ಡಾಲರ್ ಮೌಲ್ಯ ದುರ್ಬಲವಾಗಿದೆ.

MCX ಆಗಸ್ಟ್ ಚಿನ್ನದ ಫ್ಯೂಚರ್ಸ್ 200 ರುಪಾಯಿ ಏರಿಕೆಯಾಗಿ, 10 ಗ್ರಾಮ್ ಗೆ 52,300 ರುಪಾಯಿ ತಲುಪಿತು. ಇನ್ನು ಬೆಳ್ಳಿಯ ಸೆಪ್ಟೆಂಬರ್ ಫ್ಯೂಚರ್ಸ್ 976 ರುಪಾಯಿ ಏರಿಕೆಯಾಗಿ, ಕೇಜಿಗೆ 66,504 ರುಪಾಯಿ ತಲುಪಿತು. ಮಾರ್ಚ್ ನಲ್ಲಿನ ಕನಿಷ್ಠ ಮಟ್ಟದಿಂದ ಚಿನ್ನದ ದರವು 36% ಏರಿಕೆ ಕಂಡಿದೆ. ತಜ್ಞರು ಅಭಿಪ್ರಾಯ ಪಡುವ ಪ್ರಕಾರ, ಶೀಘ್ರದಲ್ಲೇ ಚಿನ್ನದ ಬೆಲೆ ಹತ್ತು ಗ್ರಾಮ್ ಗೆ 53 ಸಾವಿರ ರುಪಾಯಿ ಮತ್ತು ಬೆಳ್ಳಿ ಕೇಜಿಗೆ 70 ಸಾವಿರ ಆಗಬಹುದು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications