ಭಾರತದ ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆಯಲ್ಲಿ ಮಂಗಳವಾರ (ನವೆಂಬರ್ 10, 2020) ಮತ್ತೆ ಏರಿಕೆ ಕಂಡಿದೆ. ಕೊರೊನಾಗೆ ಪಿಫೈಜರ್ ಕಂಡು ಹಿಡಿಯುತ್ತಿದ್ದ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಸೋಮವಾರ ಘೋಷಣೆ ಮಾಡಿದ ಮೇಲೆ, ಈ ಹಿಂದಿನ ಸೆಷನ್ ನಲ್ಲಿ 5 ಪರ್ಸೆಂಟ್ ಇಳಿಕೆ ಕಂಡಿತ್ತು.
MCXನಲ್ಲಿ ಚಿನ್ನದ ಡಿಸೆಂಬರ್ ಫ್ಯೂಚರ್ಸ್ ರು. 594 ಅಥವಾ 1.19 ಪರ್ಸೆಟ್ ಹೆಚ್ಚಳವಾಗಿ, ಪ್ರತಿ ಹತ್ತು ಗ್ರಾಮ್ ಗೆ ರು. 50,342ರಲ್ಲಿ ಇದೆ. ಬೆಳ್ಳಿಯ ಡಿಸೆಂಬರ್ ಫ್ಯೂಚರ್ಸ್ ಪ್ರತಿ ಕೇಜಿಗೆ ರು. 62,186ಗೆ ವಹಿವಾಟು ನಡೆಸಿದೆ. ಒಂದು ಕೇಜಿಗೆ ರು. 1,332 ಅಥವಾ 2.19 ಪರ್ಸೆಂಟ್ ಹೆಚ್ಚಳವಾಗಿದೆ.
ವಿಶ್ಲೇಷಕರು ಹೇಳುವ ಪ್ರಕಾರ, ಕೋವಿಡ್-19 ಲಸಿಕೆ ಸುದ್ದಿಯು ಚಿನ್ನಕ್ಕೆ ನಕಾರಾತ್ಮಕ ಸುದ್ದಿ. ಆದರೆ ಪರಿಸ್ಥಿತಿ ಸರಿ ಹೋಗುವ ತನಕ ಹೂಡಿಕೆದಾರರು ಕಾಯಬೇಕಿದೆ. ಈ ಹಿಂದಿನ ಸೆಷನ್ ನಲ್ಲಿ ರು. 2,500 ಹಾಗೂ ಬೆಳ್ಳಿ ದರವು ರು. 5,100ರಷ್ಟು ಕಡೀಮೆಯಾಗಿ, ಕ್ರಮವಾಗಿ ರು. 49,748 ಮತ್ತು ರು. 60,854 ತಲುಪಿತು.

ಚಿನ್ನದ ದರವು ಕಡಿಮೆಯಲ್ಲಿದೆ. ಆದ್ದರಿಂದ ಅಲ್ಪಾವಧಿಯಲ್ಲಿ ಖರೀದಿಗೆ ಅವಕಾಶದಂತೆ ಇದೆ. ಒಂದು ವೇಳೆ ಚಿನ್ನದ ದರವು $1850ಕ್ಕಿಂತ ಕಡಿಮೆಗೆ ಮುಂದಿನ 48 ಗಂಟೆ ಮುಂದುವರಿದಲ್ಲಿ $1800ರ ತನಕ ಮಾರಾಟ ಒತ್ತಡ ಕಂಡುಬರಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ..
COMEX ಚಿನ್ನ 1.5 ಪರ್ಸೆಂಟ್ ಹೆಚ್ಚಳವಾಗಿದ್ದು ಪ್ರತಿ ಔನ್ಸ್ ಗೆ $1882 ಸಮೀಪ ವಹಿವಾಟು ನಡೆಸುತ್ತಿದೆ. ಅದಕ್ಕೂ ಮುನ್ನ ಹಿಂದಿನ ಸೆಷನ್ ನಲ್ಲಿ 5 ಪರ್ಸೆಂಟ್ ಇಳಿಕೆ ಆಗಿತ್ತು. ಔನ್ಸ್ ಗೆ $1850ರ ಸಮೀಪ ಚಿನ್ನಕ್ಕೆ ಬೆಂಬಲ ದೊರೆತು, ಬೆಲೆ ಪುಟಿದೆದ್ದಿದೆ.
ಚಿನ್ನ ಹಾಗೂ ಬೆಳ್ಳಿ ದರವು ಅದರ ದಾಖಲೆ ಮೊತ್ತವಾದ ರು. 56,191 - ರು. 77,949/ಕೇಜಿಗೆ ಬಹಳ ದೂರ ಇದೆ. ತಜ್ಞರು ಹೇಳುವಂತೆ, ಚಿನ್ನದ ದರವು ಮತ್ತೊಮ್ಮೆ $1900ರ ಮಟ್ಟಕ್ಕೆ ಏರಿಕೆ ಕಾಣಲಿದೆ.


Click it and Unblock the Notifications